September 16, 2024

ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್

0
ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಚಿಕ್ಕಮಗಳೂರು: ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರೆಗೂ ಸಮಾನತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್ ಎಂದು ಪಕ್ಷದ ಜಿಲ್ಲಾ ಧ್ಯಕ್ಷ ಡಾ|| ಅಂಶುಮಂತ್ ಹೇಳಿದರು.

ನಗರದ ರಾಮನಹಳ್ಳಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ೧೩೯ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾರ್ಯಕರ್ತರಿಗೆ ಪರಸ್ಪರ ಸಿಹಿ ವಿತರಿಸುವ ಮೂಲಕ ಗುರುವಾರ ಸಂಭ್ರಮಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದ ಮೊದಲೇ ೧೮೮೫ರಲ್ಲಿ ಕೇವಲ ೭೨ ಮಂದಿ ಸದಸ್ಯತ್ವದಿಂದ ಆರಂಭವಾದ ಕಾಂಗ್ರೆಸ್ ಪಕ್ಷವು ಇದೀಗ ಕೋಟಿಗಟ್ಟಲೇ ಮಂದಿ ಸದಸ್ಯತ್ವವನ್ನು ಹೊಂದಿ ಅಭೂತಪೂರ್ವವಾಗಿ ಮುನ್ನಡೆದಿದೆ. ಜೊತೆಗೆ ಪಕ್ಷದಿದಂದ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ಮಂದಿ ಪ್ರಧಾನಿ ಹುದ್ದೆಗೇರಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.

ದೇಶಕ್ಕಾಗಿ ಪ್ರಾಣದ ಹಂಗುತೊರೆದು ತ್ಯಾಗಗೈದ ಕಾಂಗ್ರೆಸ್ ಮಹಾನುಭಾವರಿಂದ ಇಂದಿಗೂ ಸಮಾಜದಲ್ಲಿ ಶಾಂತಿ, ಸಮೃದ್ದಿ ಹಾಗೂ ಸಹೋದರತೆ ಬೆಳೆದುಬಂದಿದೆ. ಆದರೆ ಇಂದಿನ ಬಿಜೆಪಿ ಸರ್ಕಾರಗಳು ಇವುಗಳೆನ್ನೆಲ್ಲಾ ಗಾಳಿಗೆ ತೂರಿ ಕಾನೂನನ್ನು ತಮಗೆ ಬೇಕಾಗುವಂತೆ ಉಪಯೋಗಿಸಿಕೊಂಡಿರುವುದಲ್ಲದೇ ಜನಸಾಮಾನ್ಯರ ದಿನ ನಿತ್ಯದ ಬದುಕನ್ನು ಸರ್ವನಾಶದತ್ತ ಕೊಂಡೊಯ್ಯುತ್ತಿದೆ ಎಂದರು.

ಕಾಂಗ್ರೆಸ್ ಜನಪರ ಯೋಜನೆಗಳಿಂದ ಹಳ್ಳಿಗಳಿಗೂ ಅಂಬುಲೆನ್ಸ್ ಸೇವೆ, ತಲಾ ಐದು ಕೆಜಿ ಅಕ್ಕಿ ವ್ಯವಸ್ಥೆ ಕಲ್ಪಿಸಿ ನುಡಿದಂತೆ ನಡೆದಿದೆ. ಅದಲ್ಲದೇ ಇಂದಿನ ಡಿಜಿಟಲೀಕರಣ ವ್ಯವಹಾರಕ್ಕೆ ಮೂಲವಾರಸುದಾರರೇ ಕಾಂ ಗ್ರೆಸ್‌ನ ರಾಜೀವ್ ಗಾಂಧಿಯವರ ಆಲೋಚನೆಗಳೆಂದ ಅವರು ಸಾಮಾನ್ಯ ಜನರಿಗೂ ಆತ್ಮವಿಶ್ವಾಸವನ್ನು ಮೂಡಿ ಸುವ ಯೋಜನೆಗಳನ್ನು ಕಾಂಗ್ರೆಸ್ ನೀಡುತ್ತಿದೆ ಎಂದು ತಿಳಿಸಿದರು.

ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ಕಾರ್ಯಕರ್ತರು ಕೇವಲ ಇಂದು ಸಂಸ್ಥಾಪನಾ ದಿನ ಆಚರಿಸಿದರೆ ಸಾಲದು, ಪ್ರತಿನಿತ್ಯವು ಕಾಂಗ್ರೆಸ್ ಬೆಳವಣಿಗೆಗೆ ಪೂರಕ ಚಟುವಟಿಕೆ ನಡೆಸಿದರೆ ಮಾತ್ರ ಸಂಸ್ಥಾ ಪನಾ ದಿನಕ್ಕೆ ನಿಜವಾದ ಅರ್ಥ ಬರಲಿದೆ. ಹೀಗಾಗಿ ಕಾರ್ಯಕರ್ತರು ಪಕ್ಷದ ತತ್ವಸಿದ್ದಾಂತಗಳು ಹಾಗೂ ಪ್ರಾಮಾ ಣಿಕ ಸೇವೆಯ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಕಾಂಗ್ರೆಸ್ ದೇಶದಲ್ಲಿ ಕುಸಿಯುತ್ತಿದೆ ಎಂಬ ಬಿಜೆಪಿಗರ ಹೇಳಿಕೆಗಳಿಗೆ ರಾಜ್ಯದ ತಕ್ಕ ಉತ್ತರ ಸಿಕ್ಕಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ದೇಶದಲ್ಲಿ ಅಧಿಕಾರ ಹಿಡಿದು ಜಾತ್ಯಾತೀತವಾಗಿ ಅಧಿಕಾರ ನಡೆಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಎದೆಕುಂದದೇ ರಾಹುಲ್‌ಗಾಂಧಿಯವರ ಕೈಬಲಪಡಿಸಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಪಕ್ಷವು ಸ್ಥಾಪಿತಗೊಂಡ ದಿನದಿಂದಲೂ ಹಲ ವಾರು ಆಗು-ಹೋಗುಗಳ ದಾರಿಯಲ್ಲಿ ಸಾಗಿ ಇಂದು ಮುಗಿಲೆತ್ತರಕ್ಕೆ ಬೆಳೆದಿದೆ. ದೇಶದ ಮೊದಲ ಪ್ರಧಾನಿ ನೆಹರು ಅವರ ಮಾರ್ಗದರ್ಶನದಲ್ಲಿ ಇಂದಿಗೂ ಪಕ್ಷದ ಮುಖಂಡರುಗಳು ಕಾರ್ಯನಿರ್ವಹಿಸಿರುವುದಲ್ಲದೇ ರಾಜ್ಯದ ಮೇಲೆ ವಿಶೇಷ ಅಭಿಮಾನದಿಂದ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಖರ್ಗೆಯವರಿಗೆ ನೀಡಿದೆ ಎಂದರು.

ಕಾರ್ಯಕ್ರಮಕ್ಕೂ ಸಮುದಾಯದ ಭವನದ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ನೆರವೇರಿಸಿ ವಂದೇ ಮಾತರಂ ಗೀತೆಯನ್ನು ಮುಖಂಡರುಗಳು ಹಾಡಿ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಿಡಿಎ ಮಾಜಿ ಅಧ್ಯಕ್ಷ ಹನೀಫ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಬಿ.ಹೆಚ್.ಹರೀಶ್, ನಗರ ಅಧ್ಯಕ್ಷ ತನೋಜ್‌ಕುಮಾರ್, ನಗರಸಭಾ ಸದಸ್ಯರಾದ ಲPಣ್, ಮಂಜುಳಾ, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟೇಗೌಡ, ಮುಖಂಡರುಗಳಾದ ಸಿ.ಸಿ.ಮಧು, ಅನ್ಸರ್‌ಆಲಿ, ಪ್ರಕಾಶ್ ರೈ, ನಾಗಭೂಷಣ್, ಜಯರಾಜ್‌ಅರಸ್, ಕೆ.ಭರತ್, ಜೇಮ್ಸ್ ಡಿಸೋಜಾ, ತೇರೇಸಾ ಮತ್ತಿತರರು ಉಪಸ್ಥಿತರಿದ್ದರು.

139th Congress Foundation Day organized by District Congress

About Author

Leave a Reply

Your email address will not be published. Required fields are marked *