September 16, 2024

ಜಿಲ್ಲಾಧ್ಯಂತ 15 ದಿನ ಶ್ರೀರಾಮ ಮಂತ್ರಾಕ್ಷತೆ ಅಭಿಯಾನ

0
ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಯೋಜಕ ಮಲ್ಲಿಕಾರ್ಜುನರಾವ್ ಪತ್ರಿಕಾಗೋಷ್ಠಿ

ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಯೋಜಕ ಮಲ್ಲಿಕಾರ್ಜುನರಾವ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀ ರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜ.೨೨ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜ.೧ ರಿಂದ ೧೫ ರವರೆಗೆ ಜಿಲ್ಲಾಧ್ಯಂತ ಮಂತ್ರಾಕ್ಷತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಯೋಜಕ ಮಲ್ಲಿಕಾರ್ಜುನರಾವ್ ತಿಳಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೫ ದಿನದಲ್ಲಿ ಜಿಲ್ಲೆಯ ಎಲ್ಲ ರಾಮಭಕ್ತರ ಮನೆಗೆ ಕಾರ್ಯಕರ್ತರು ಹೋಗಿ ಪವಿತ್ರ ಮಂತ್ರಾಕ್ಷತೆ ಜತೆಗೆ ಕರಪತ್ರ, ಭಾವಚಿತ್ರ ಕೊಡಲಿದ್ದೇವೆ. ಕರಪತ್ರ ಎಂದಾಕ್ಷಣ ಅಯೋಧ್ಯೆಗೆ ಹೋಗಬೇಕೆಂದೇನಿಲ್ಲ. ತಮ್ಮೂರಿನ ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನಿಟ್ಟು ಪೂಜೆ ಸಲ್ಲಿಸಿ ಅಲ್ಲಿ ರಾಮನಾಮ ಧ್ಯಾನ ಮಾಡಬೇಕು ಎಂದು ಹೇಳಿದರು.

ಅಯೋಧ್ಯೆಯಲ್ಲಿ ಜರುಗುವ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಟಿವಿ ಅಥವಾ ಡಿಜಿಟಲ್ ಪರದೆಯ ಮೂಲಕ ಸಾಮೂಹಿಕವಾಗಿ ನೋಡಬಹುದು ಎಂದು ತಿಳಿಸಿದರು.

ಮತ್ತೋರ್ವ ಸಂಯೋಜಕ ರಾಜೇಂದ್ರಕುಮಾರ್ ಮಾತನಾಡಿ, ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ೧೭ ಕೇಂದ್ರಗಳಲ್ಲಿ ಸಮಾವೇಶ ನಡೆಸಲಾಗಿದೆ. ಜಿಲ್ಲೆಯ ೧೦೦೬ ಗ್ರಾಮಗಳ ದೇವಾಲಯಗಳಿಗೆ ಮಂತ್ರಾಕ್ಷತೆ ಈಗಾಗಲೆ ತಲುಪಿದೆ. ಜಿಲ್ಲೆಯ ಮೂರು ಲಕ್ಷ ಮನೆಗಳಿಗೆ ೧೩ ಸಾವಿರ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಎಲ್ಲರ ಮನೆಯಲ್ಲಿ ಜ.೨೨ ರ ಸಂಜೆ ದೀಪ ಬೆಳಗಲು ಮನವಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್ ನ ರಂಗನಾಥ, ಸುಮಂತ್‌ನೆಮ್ಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

District focused 15 day Shri Ram Mantrakshate Abhiyan

About Author

Leave a Reply

Your email address will not be published. Required fields are marked *