September 8, 2024

ಸುಂದ್ರೇಶ್ ವ್ಯಕ್ತಿಯಲ್ಲ ಶೋಷಿತರ ಧ್ವನಿಯಾಗಿ ನಿಂತ ಶಕ್ತಿ

0
ಸಿಪಿಐ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಿ.ಕೆ.ಸುಂದ್ರೇಶ್ ಸ್ಮರಣಾರ್ಥ ಏರ್ಪಡಿಸಿದ್ದ ೨೯ನೇ ವರ್ಷದ ಪುಣ್ಯಸ್ಮರಣೆ

ಸಿಪಿಐ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಿ.ಕೆ.ಸುಂದ್ರೇಶ್ ಸ್ಮರಣಾರ್ಥ ಏರ್ಪಡಿಸಿದ್ದ ೨೯ನೇ ವರ್ಷದ ಪುಣ್ಯಸ್ಮರಣೆ

ಚಿಕ್ಕಮಗಳೂರು:  ಬಡವರ, ಶೋಷಿತರ ಹಾಗೂ ಕಾರ್ಮಿಕರ ಪರವಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಮೂಲಕ ಕ್ರಾಂತಿ ಮೂಡಿಸಿದವರು ಬಿ.ಕೆ.ಸುಂದ್ರೇಶ್ ಎಂದು ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಿ.ಕೆ.ಸುಂದ್ರೇಶ್ ಸ್ಮರಣಾರ್ಥ ಏರ್ಪಡಿಸಿದ್ದ ೨೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸುಂದ್ರೇಶ್‌ರವರು ಕೇವಲ ವ್ಯಕ್ತಿಯಲ್ಲ ಶೋಷಿತರ ಧ್ವನಿಯಾಗಿ ನಿಂತ ಶಕ್ತಿ ಎಂದ ಅವರು ಪ್ರಸ್ತುತ ಹೋ ರಾಟದ ಹಾದಿಯಲ್ಲಿ ಸಾಗುತ್ತಿರುವ ಮುಖಂಡರುಗಳಿಗೆ ಅವರ ದಾರಿ ಪ್ರೇರಣೆಯಾಬೇಕು. ಇಂತಹ ವ್ಯಕ್ತಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರೆದರೆ ಮಾತ್ರ ದೌರ್ಜನ್ಯಗೊಳಗಾಗಿರುವ ವ್ಯಕ್ತಿಗಳಿಗೆ ನ್ಯಾಯ ಒದಗಿ ಸಲು ಸಾಧ್ಯ ಎಂದು ಸಲಹೆ ಮಾಡಿದರು.

ರಾಜಕೀಯದಲ್ಲಿ ಮುಖಂಡರುಗಳು ತಮ್ಮ ನಿಲುವುಗಳನ್ನು ಯಾವ ರೀತಿಯಲ್ಲಿ ತೋರ್ಪಡಿಸಬೇಕು ಎಂ ಬುದರ ಬಗ್ಗೆ ಅಂದಿನ ಸಮಯದಲ್ಲೇ ಅನುಭವ ನೀಡಿದವರು ಸುಂದ್ರೇಶ್. ಅವರ ಸಂದೇಶಗಳು ಇಂದಿಗೂ ಸ್ಪೂರ್ತಿಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಜೀವನ ರೂಪಿಸಿಕೊಂಡವರು ಎಂದು ಬಣ್ಣಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾಸುಂದ್ರೇಶ್ ಮಾತನಾಡಿ ಪ್ರತಿಯೊಬ್ಬರಲ್ಲಿ ಸಮಾನತೆ, ಸೌಹಾರ್ದತೆ ಸಂದೇಶ ಸಾರುವ ನಿಟ್ಟಿನಲ್ಲಿ ಅಪೂತ ಪೂರ್ವ ಸಾಧನೆ ಮಾಡಿದವರು ಸುಂದ್ರೇಶ್. ಇಂದಿನ ರಾಜಕಾರಣವು ತಾಳತಕ್ಕಂತೆ ಬದಲಾಗುವ ಸನ್ನಿವೇಶವಿದೆ. ಹೀಗಾಗಿ ಸುಂದ್ರೇಶ್‌ರವರು ರಾಜಕೀಯ ಜನರಸೇವೆಯೇ ಹೊರತು, ವೈಯಕ್ತಿಕ ಆಧಾಯ ಮಾಡುವುದಲ್ಲ ಎಂಬುದನ್ನು ಪ್ರತಿಪಾದಿಸಿದವರು ಎಂದರು.

ನಿವೇಶನರಹಿತರು, ಕಾರ್ಮಿಕರು ಹಕ್ಕುಗಳಿಗಾಗಿ ಪ್ರತಿ ಗ್ರಾಮಗಳಿಗೂ ತೆರಳಿ ಚರ್ಚಿಸುವ ಮೂಲಕ ಗ್ರಾಮ ಸ್ಥರನ್ನು ಒಗ್ಗೂಡಿಸಿ ಅವರ ಸೇವೆಯಲ್ಲಿ ತೊಡಗುತ್ತಿದ್ದರು. ಪ್ರಸ್ತುತ ಸುಂದ್ರೇಶ್‌ರವರು ಜೀವಂತರಾಗಿದ್ದರೆ ಅನೇಕ ಭೂ ಸಮಸ್ಯೆಗಳು ಪರಿಹಾರ ಕಂಡುಕೊಂಡು ಸುಸ್ಥಿರ ಬದುಕನ್ನು ಬಡವರು ರೂಪಿಸಿಕೊಳ್ಳುತ್ತಿದ್ದರು ಎಂದರು.

ಸಿಪಿಐ ಜಿಲ್ಲಾ ಸದಸ್ಯ ಸಿ.ವಸಂತ್‌ಕುಮಾರ್ ಮಾತನಾಡಿ ಕಾರ್ಮಿಕರು ಹಾಗೂ ಶೋಷಿತರ ಒಲವು ಹೊಂ ದಿರುವ ಬಿ.ಕೆ.ಎಸ್. ನೆನಪಿನಾರ್ಥ ತಮಿಳು ಕಾಲೋನಿ ಸಮೀಪವಿರುವ ಬಿ.ಕೆ.ಸುಂದ್ರೇಶ್ ಉದ್ಯಾನವನದಲ್ಲಿ ಕಂ ಚಿನ ಪುತ್ಥಳಿ ಅನಾವರಣ ಗುರಿ ಹೊಂದಲಾಗಿದೆ. ಜಿಲ್ಲಾ ಘಟಕದಲ್ಲಿ ಚರ್ಚಿಸಿ ಮುಂಬರುವ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಕೆ.ಎಸ್ ಸಹೋದರ ಬಿ.ಕೆ.ಲಕ್ಷ್ಮಣಗೌಡ, ಸಿಪಿಐ ರಾಜ್ಯ ಸಮಿತಿ ಸದಸ್ಯ ಹೆಚ್.ಎಂ. ರೇಣುಕಾರಾಧ್ಯ, ಜಿಲ್ಲಾ ಸಮಿತಿ ಸದಸ್ಯರುಗಳಾದ ಗುಣಶೇಖರ್, ಜಯಕುಮಾರ್, ವಿಜಯ್‌ಕುಮಾರ್, ಜಾನಕಿ, ಮಂಜೇಗೌಡ, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.

BK Sundresh memorial service held at CPI district office

 

About Author

Leave a Reply

Your email address will not be published. Required fields are marked *

You may have missed