September 19, 2024

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

0
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಮೂಡಿಗೆರೆ:  ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ (೫೮) ಸೋಮವಾರ ಬೆಳಗ್ಗೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಲಿಂಗನಾಯಕ್ ಅವರು ಸೋಮವಾರ ಬೆಳಗ್ಗೆ ೮ ಗಂಟೆಗೆ ಮನೆಯಿಂದ ಹಾಲು ತರುತ್ತೇನೆಂದು ಪಟ್ಟಣಕ್ಕೆ ಹೋದವರು ಮರಳಿ ಮನೆಗೆ ತೆರಳಿಲ್ಲ. ಹಾಲು ತರಲು ಹೋದವರು ಇನ್ನೂ ಮನೆಗೆ ಬರಲಿಲ್ಲವೆಂದು ಅವರ ಪತ್ನಿ ಹುಡುಕಾಟ ನಡೆಸಿದ್ದಾರೆ. ಆದರೆ ಲಿಂಗನಾಯಕ್ ಅವರು ನೇರವಾಗಿ ಕಚೇರಿಗೆ ತೆರಳಿದ್ದು, ಕೆಲಸದ ಒತ್ತಡ ಅಧಿಕವಾಗಿತ್ತು.

ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆಸಿದ ಬಳಿಕ ಡಿ ದರ್ಜೆ ನೌಕರ ಬಶೀರ್ ಅವರ ಕ್ಲಸ್ಟರ್ ಕೆಲಸ ಬಾಕಿ ಉಳಿದಿತ್ತು. ಜತೆಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕೂಡ ಇತ್ತು. ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸ ಕಾರ್ಯ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರಾತ್ರಿ ನಿದ್ದೆ ಕೂಡ ಬರುತ್ತಿರಲಿಲ್ಲ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೆ ಕಾರಣ. ನಮ್ಮ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳಿ ಎಂದು ೨ ಪುಟದ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಬೆಳಗ್ಗೆ ಎಂದಿನಂತೆ ೧೦ ಗಂಟೆಗೆ ಸಿಬ್ಬಂದಿ ಕಚೇರಿಗೆ ಬಂದಾಗ ಘಟನೆ ಕಂಡು ಬೆಚ್ಚಿ ಬಿದಿದ್ದಾರೆ.

ವಿಚಾರ ಹೊರ ಬರುತ್ತಿದ್ದಂತೆ ತಾಲೂಕಿನಾಧ್ಯಂತ ಶಾಲೆ ಶಿಕ್ಷಕರು ದಂಡು ದಂಡಾಗಿ ಶಿಕ್ಷಣ ಇಲಾಖೆ ಎದುರು ಜಮಾಯಿಸಿದರು. ಈ ಸಂದರ್ಭದಲ್ಲಿ ಕೆಲ ಶಿಕ್ಷಕರು ಬಿಇಒ ಕಚೇರಿ ಮತ್ತು ಶಾಲೆಗಳಿಗೆ ಆರ್‌ಟಿಐ ಕಾರ್ಯಕರ್ತನೋರ್ವ ಪದೇ ಪದೇ ಅರ್ಜಿ ಹಾಕುವ ಮೂಲಕ ತೊಂದರೆ ಕೊಡುತ್ತಿದ್ದರು. ಅಲ್ಲದೇ ಶಿಕ್ಷಕರು ಶಾಲೆ ವಿಚಾರವಾಗಿ ಬಿಇಒ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡಿತ್ತಿಲ್ಲವೆಂದು ಮೇಲಾಧಿಕಾರಿಗಳಿಗೆ ಸುಖಾ ಸುಮ್ಮನೆ ದೂರು ನೀಡುತ್ತಿದ್ದರು. ಇದರಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ.

ಅಲ್ಲದೇ ಲಿಂಗನಾಯಕ್ ಅವರು ಬಿಇಒ ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದರು. ಅರ್ಜಿಗಳಿಗೆ ಉತ್ತರ ನೀಡುವಷ್ಟರಲ್ಲಿ ಮೇಲೆಂದ ಮೇಲೆ ಅರ್ಜಿಗಳು ಬರುತ್ತಲೇ ಇದಿದ್ದರಿಂದ ಲಿಂಗನಾಯಕ್ ಅವರಿಗೆ ಕೆಲಸದ ಒತ್ತಡ ಅಧಿಕವಾಗಿತ್ತು. ಇದರಿಂದ ಕೂಡ ಅವರು ನೊಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬಳಿಕ ಮೃತದೇಹವನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಲಾಯಿತು. ಮೃತರು ಓರ್ವ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The manager of the field education officer’s office committed suicide by hanging himself

About Author

Leave a Reply

Your email address will not be published. Required fields are marked *

You may have missed