September 19, 2024

ತರೀಕೆರೆ ವೃತ್ತ ನಿರೀಕ್ಷಕರ ಮೇಲೆ ಕ್ರಮಕ್ಕೆ ದಸಂಸ ಒತ್ತಾಯ

0
ತರೀಕೆರೆ ವೃತ್ತ ನಿರೀಕ್ಷಕರ ಮೇಲೆ ಕ್ರಮಕ್ಕೆ ದಸಂಸ ಒತ್ತಾಯ

ತರೀಕೆರೆ ವೃತ್ತ ನಿರೀಕ್ಷಕರ ಮೇಲೆ ಕ್ರಮಕ್ಕೆ ದಸಂಸ ಒತ್ತಾಯ

ಚಿಕ್ಕಮಗಳೂರು:  ವಿನಾಕಾರಣ ಸುಳ್ಳು ಮೊಖದ್ದಮೆ ದಾಖಲಿಸಿ ದಸಂಸ ಮುಖಂಡನನ್ನು ಬಂಧಿಸಿರುವ ತರೀಕೆರೆ ವೃತ್ತ ನಿರೀಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗುರುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಈ ವೇಳೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ರಾಮೇಗೌಡ ಎಂಬುವವರು ಚುನಾವಣಾ ದುರುದ್ದೇಶವಿಟ್ಟುಕೊಂಡು ಕ್ಷುಲ್ಲಕ ವಿಚಾರವಾಗಿ ರಾಮಚಂದ್ರ ಕುಟುಂಬದವರನ್ನು ಎತ್ತಿಕಟ್ಟಿ ಜಗಳ ಮಾಡಿಸಿದಲ್ಲದೇ ಮನೆಯಿಂದ ರಾಮಚಂದ್ರ ಅವರನ್ನು ಕರೆತಂದು ಹನ್ನೇರಡು ಮಂದಿಯಿಂದ ತೀವ್ರ ಹಲ್ಲೆ ಮಾಡಿ ಸಿದ್ದಾರೆ ಎಂದು ಆರೋಪಿಸಿದರು.

ರಾಮಚಂದ್ರ ಜೀವ ರಕ್ಷಣೆಗಾಗಿ ಎದುರಿಸಲು ಬಂದವರ ವಿರುದ್ಧ ತಿರುಗಿಬಿದ್ದಿದ್ದು ಆ ಸಂದರ್ಭದಲ್ಲಿ ವ್ಯವ ಸ್ಥಿತವಾಗಿ ವೀಡಿಯೋ ಚಿತ್ರೀಕರಿಸಿ ರಾಮಚಂದ್ರರೇ ಕೊಲ್ಲಲು ಬಂದರೆಂದು ದೂರು ದಾಖಲಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ತರೀಕೆರೆ ವೃತ್ತ ನಿರೀಕ್ಷಕ ವೀರೇಂದ್ರ ಕೈಜೋಡಿಸಿದ್ದು ರಾಮಚಂದ್ರರನ್ನು ಕರೆಯೊಯ್ದು ದೂರನ್ನು ದಾಖಲಿ ಸಿರುವುದಲ್ಲದೇ ಚಿಕಿತ್ಸೆಗೆ ಆಸ್ಪತ್ರೆ ಕೊಂಡೊಯ್ದುದೇ ತಡೆಹಿಡಿದಿದ್ದಾರೆ. ಇದಾದ ಬಳಿಕ ರಾಮಚಂದ್ರ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಇದಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಸಂಸ ಮುಖಂಡರ ಮೇಲೆ ಹಲ್ಲೆ ಮಾಡಿದವರ ವೀಡಿಯೋ ಇಟ್ಟು ಕೊಂಡು ೩೦೭ ಕೇಸು ದಾಖಲಾಗಿದೆ ಎಂದು ಆಸ್ಪತ್ರೆಯ ವ್ಶೆದ್ಯರಿಗೆ ಒತ್ತಾಯಿಸಿ ಆಸ್ಪತ್ರೆಯಿಂದಲೇ ಬಂಧಿಸಿ ರುವುದು ಗಮನಿಸಿದರೆ ರಾಜಕೀಯ ಕೈಗೊಂಬೆಯಂತೆ ರಾಮೇಗೌಡ ಜೊತೆ ಸೇರಿ ತರೀಕೆರೆ ವೃತ್ತ ನಿರೀಕ್ಷಕರು ಕೆಲಸ ಮಾಡು ತ್ತಿದ್ದಾರೆ ಎಂದು ದೂರಿದರು.

ಈ ರೀತಿ ಓರ್ವ ದಸಂಸ ಹೋರಾಟಗಾರರನ್ನು ಹತ್ತಿಕ್ಕುವ ದೃಷ್ಟಿಯಿಂದ ಬಂಧಿಸಿ ಸುಳ್ಳು ಕೇಸು ದಾಖಲಿಸಿ ರುವುದು ಸೂಕ್ತವಲ್ಲ. ಕೂಡಲೇ ರಾಮಚಂದ್ರರನ್ನು ಬಿಡುಗಡೆಗೊಳಿಸಬೇಕು. ವೃತ್ತ ನಿರೀಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿ ಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎನ್.ಮಹೇಂದ್ರಸ್ವಾಮಿ, ಕಂಡಪ್ಪ, ಸಣ್ಣಪ್ಪ, ಖಜಾಂಚಿ ಸಂತೋಷ್ ಲಕ್ಯಾ, ತಾಲ್ಲೂಕು ಸಂಘಟನಾ ಸಂಚಾಲಕ ಮಂಜುನಾಥ್ ನಂಬಿಯಾರ್, ಮುಖಂಡರು ಗಳಾದ ಅಣ್ಣಪ್ಪ, ರಮೇಶ್, ಗಂಗಾಧರ್, ಬಸವರಾಜ್, ಭಾಗ್ಯ ರಾಮಚಂದ್ರ ಮತ್ತಿತರರು ಹಾಜರಿದ್ದರು.

Dasamsa demands action on Tarikere circle inspectors

About Author

Leave a Reply

Your email address will not be published. Required fields are marked *

You may have missed