September 19, 2024

ಅಂಗಾಂಗ ದಾನದ ಶ್ರೇಷ್ಠತೆಯಿಂದ ಇತರರ ಜೀವನದಲ್ಲಿ ಬೆಳಕು ಮೂಡುತ್ತದೆ 

0
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ, ನೇತ್ರದಾನ, ದೇಹದಾನ ನೊಂದಣಿ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಕನ್ನಡಕ ವಿತರಣೆ ಕಾರ್ಯಕ್ರಮ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ, ನೇತ್ರದಾನ, ದೇಹದಾನ ನೊಂದಣಿ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಕನ್ನಡಕ ವಿತರಣೆ ಕಾರ್ಯಕ್ರಮ

ಚಿಕ್ಕಮಗಳೂರು. ವಿದ್ಯಾದಾನ, ಅನ್ನದಾನವೇ ಶ್ರೇಷ್ಠವಾಗಿತ್ತು ಆದರೆ ಅದಕ್ಕೂ ಮಿಗಿಲಾದ ದಾನ ಅಂಗಾಂಗ ದಾನ ವಾಗಿದ್ದು ಈ ದಾನದ ಶ್ರೇಷ್ಠತೆಯಿಂದ ಇತರೆ ಜೀವಗಳು ಬೆಳಕನ್ನು ಕಾಣುತ್ತವೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಹಾಗೂ ಭೂಮಿಕಾ ಟಿವಿ ವಾರ್ಷಿಕೋತ್ಸವ ಅಂಗವಾಗಿ ಭೂಮಿಕ ಟಿವಿ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಳುಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ, ನಗರ ಸಭೆ, ಸ್ವಸ್ಥಭೂಮಿ ಪ್ರತಿಷ್ಠಾನ ಹಾಗೂ ಭೂಮಿಕಾ ಟಿವಿ ಚಿಕ್ಕಮಗಳೂರು, ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜು ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ, ನೇತ್ರದಾನ, ದೇಹದಾನ ನೊಂದಣಿ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು,

ಗುರು ಎಂದರೆ ಒಂದು ವ್ಯಕ್ತಿಯಲ್ಲ ಅದು ಶಕ್ತಿಯಾಗಿದೆ ಅಜ್ಞಾನದೆ ಕತ್ತಲೆಯನ್ನು ಬೇಳಕಿನೆಡೆ ಕೊಂಡೊಯ್ಯುವ ಸುಜ್ಞಾನವೇ ಗುರು ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ಜೀವವು ಯಾರ ಮಾತನ್ನೂ ಕೇಳುವುದಿಲ್ಲ ಯಾವ ಸಂಧರ್ಭದಲ್ಲಿಯೂ ಸಹ ಅದು ನಮ್ಮಿಂದ ದೂರಾಗಬಹುದು ಆದರೆ ಜೀವನ ಮಾತ್ರ ನಮ್ಮ ಮಾತನ್ನು ಕೇಳ ಬಲ್ಲುದು ಹಾಗಾಗಿ ಜೀವನವನ್ನು ನಾಲ್ಕು ಜನರಿಗೆ ಉಪಯೋಗವಾಗುವಂತೆ ರೂಪಿಸಿಕೊಂಡರೆ ಜೀವನ ಸಾರ್ಥಕವಾಗಬಹುದು ಅಂತೆಯೇ ಸಾವಿನ ನಂತರದ ಅಂಗಾಂಗ ದಾನವೂ ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುತ್ತದೆ ಎಂದರು.

ಅಂಗಾಂಗ ದಾನದಲ್ಲಿ ನಮ್ಮ ಜಿಲ್ಲಾಸ್ಪತ್ರೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ರಕ್ಷಿತಾಬಾಯಿ ಎಂಬ ಯುವತಿಯ ಅಂಗಾಂಗಗಳನ್ನು ಜಿಲ್ಲೆಯಲ್ಲಿ ಕಸಿಮಾಡಿ ಬೆಂಗಳೂರು ಸೇರಿದಂತೆ ಬೇರೆಡೆ ರವಾನಿಸುವ ಮೂಲಕ ಉತ್ತಮ ಸಾಧನೆ ಮಾಡಿದ ಕೀರ್ತಿ ನಮ್ಮ ಜಿಲ್ಲೆಗಿದೆ ಎಂದು ಬಣ್ಣಿಸಿದರು.

ಕೆಲವೇ ತಿಂಗಳುಗಳಲ್ಲಿ ಹಿಂದಿನ ಸರ್ಕಾರದ ಯೋಜನೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಸಾರ್ವಜನಿಕರ ಉಪಯೋಗಕ್ಕಾಗಿ ಲೋಕಾರ್ಪಣೆ ಗೊಳಿಸಲಾಗುವುದು ಈ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಜನರು ಅಕ್ಕ ಪಕ್ಕದ ಜಿಲ್ಲೆಗಳಿಗೆ ತೆರಳುವುದನ್ನು ತಡೆಯಬಹುದಾಗಿದೆ ಮತ್ತು ನಮ್ಮ ಜಿಲ್ಲೆಯಲ್ಲಿಯೇ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬಹುದಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇಂತಹ ಹೆಚ್ಚು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದು ಸಾವಿನ ನಂತರ ಇನ್ನೊಂದು ಜೀವಕ್ಕೆ ಅನುಕೂಲವಾಗುವ ಅಂಗಾಂಗ ದಾನ, ದೇಹ ದಾನದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಮತ್ತು ಮಾದರಿಯಾಗಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಮೋಹನ್‌ಕುಮಾರ್ ಮಾತನಾಡಿ ಇಂದಿನ ಪೀಳಿಗೆಯ ಬದಲಾದ ಜೀವನ ಶೈಲಿ ಆಹಾರ ಪದ್ದತಿ ಮತ್ತು ಕೆಲ ರೋಗಗಳ ಅರಿವಿನ ಕೊರತೆಯಿಂದ ಮನುಷ್ಯರು ಸಾಮಾನ್ಯವಾಗಿ ಖಾಯಿಲೆಗೆ ತುತ್ತಾಗುತ್ತಿದ್ದು ಕೆಲ ದುಷ್ಚಟಗಳೂ ಸಹ ಇದಕ್ಕೆ ಮುಖ್ಯ ಕಾರಣವಾಗಿದೆ. ಅಲ್ಲದೆ ದೇಹದ ಅಂಗಾಂಗಗಳ ಸಂರಕ್ಷಣೆಯ ಬಗೆಗಿನ ಅರಿವಿನ ಕೊರತೆ ಪ್ರಮುಖವಾಗಿದ್ದು ಮೂತ್ರಪಿಂಡ ಸೇರಿದಂತೆ ಇತರೆ ಅಂಗಾಂಗಗಳ ವೈಫಲ್ಯಕ್ಕೆ ಜನ ತುತ್ತಾಗುತ್ತಿದ್ದು ಈ ರೀತಿಯ ಅಂಗಾಂಗ ದಾನದ ಮೂಲಕ ಸಂಕಷ್ಟದಲ್ಲಿರುವ ಜೀವಗಳ ರಕ್ಷಣೆಗೆ ಮುಂದಾಗಬಹುದಾಗಿದೆ ಎಂದು ತಿಳಿಸಿದರು.

ಮನುಷ್ಯ ಪ್ರಸ್ತುತ ನೋವಿನ ಮಾತ್ರೆಗಳ ಬಳಕೆ ಹೆಚ್ಚು ಮಾಡುತ್ತಿದ್ದು ಇದರಿಂದ ರೋಗ ನಿರೋಧಕ ಶಕ್ತಿ ಕುಗ್ಗುತ್ತಿದೆ, ನಿರಂತರ ಆರೋಗ್ಯವನ್ನು ತಪಾಸಣೆಗೊಳಪಡಿಸುವ ಮೂಲಕ ಕಂಡು ಬರುವ ಕಾಯಿಲೆಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿ ನಿಗಾ ವಹಿಸಿ ಮುಂದೊಂದುಂದಿನ ದೊಡ್ಡ ಪ್ರಮಾಣದಲ್ಲಿ ಉಲ್ಭಣಿಸುವುದನ್ನು ತಡೆಯಬೇಕು, ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಪ್ರತಿಯೊಬ್ಬ ಸಾಮಾನ್ಯನಿಗೂ ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕಾ ಟಿವಿ ಸಂಸ್ಥಾಪಕರಾದ ಅನಿಲ್ ಆನಂದ್ ಅವರು ರಕ್ತದಾನಕ್ಕೆ ಯುವಕರು ಮುಂದಾಗಬೇಕು, ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ತಾವು ವಾಸಿಸುವ ಜಾಗವನ್ನು ಸ್ವಚ್ಚವಾಗಿ ಇಡುವುದರ ಮೂಲಕ ಕಾಯಿಲೆಗಳನ್ನು ದೂರ ಮಾಡಬೇಕು ಮತ್ತು ನಾನು ನನ್ನ ಮನೆ ಎಂಬ ವೈಯಕ್ತಿಕ ಸ್ವಾರ್ಥ ಬಿಟ್ಟು ನಾವು ನಮ್ಮದು ಎಂದು ನಾವಿರುವ ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿದರೆ ಉತ್ತಮ ಎಂಬ ಕಿವಿ ಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಅವರು ಮಾತನಾಡಿ ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ, ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಹ ಅದಕ್ಕೆ ನಮ್ಮ ಸಹಕಾರ ದೊರಕಲಿದೆ ಎಂದು ಹೇಳಿದರು.

ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಶಿಭಿರದ ಲಾಭವನ್ನು ಪಡೆದರು, ಹಲವರೂ ದೇಹ ದಾನ, ಅಂಗಾಂಗ ದಾನ, ನೇತ್ರದಾನಕ್ಕೆ ನೋಂದಣೀ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ , ಕೆಆರ್‌ಎಸ್ ಆಸ್ಪತ್ರೆಯ ಡಾ.ಯೋಗೀಶ್, ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳಿಧರ್, ಜಲಜಾಕ್ಷಿ, ಇ ಎನ್ ಟಿ ತಜ್ಞರಾದ ಡಾ.ಶಾಂಭವಿ, ಮಾಜಿ ನಗರಸಭಾ ಸದಸ್ಯರಾದ ಮಧು, ಕನ್ನಡ ಸೇನೆ ತಾಲೂಕು ಅಧ್ಯಕ್ಷರಾದ ಜಯಪ್ರಕಾಶ್, ಕಾಂಗ್ರೆಸ್ ಮುಖಂಡರಾದ ರೂಬಿನ್ ಮೋಸಸ್, ಪತ್ರಕರ್ತರಾದ ರಾಜ್‌ಶೇಖರ್, ಅಕ್ಷಯ್ ಕುಮಾರ್, ಎಸ್‌ಟಿಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಭಾರತಿ, ಮಧುಕರ್ ಶೆಟ್ಟಿ ಯುವ ಬಳಗದ ಚೌಡಪ್ಪ ಇನ್ನಿತರರು ಇದ್ದರು.

Free health checkup camp

 

About Author

Leave a Reply

Your email address will not be published. Required fields are marked *

You may have missed