September 19, 2024

ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದವರು ನಾರಾಯಣಗುರು

0
ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘಗಳ ಒಕ್ಕೂಟದ ವಿಶೇಷ ಸಭೆ

ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘಗಳ ಒಕ್ಕೂಟದ ವಿಶೇಷ ಸಭೆ

ಚಿಕ್ಕಮಗಳೂರು: ಅಸ್ಪೃಶ್ಯರು, ಹಿಂದುಳಿದವರಂತೆ ನಾವು ಸಹ ಹಿಂದೆಯೇ ಉಳಿದಿದ್ದೇವೆ, ಬ್ರಹ್ಮಶ್ರೀ ನಾರಾಯಣ ಗುರುಗಳು ೫೮೦ ವರ್ಷಗಳ ಹಿಂದೆಯೇ ಅವರು ೬೬ ಗ್ರಾಮಗಳನ್ನು ಸುತ್ತಿ ಗರಡಿಗಳನ್ನು ಕಟ್ಟುವ ಮೂಲಕ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದರು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಡಾ|| ರಾಜಶೇಖರ್ ಕೋಟ್ಯಾನ್ ಅಭಿಪ್ರಾಯಿಸಿದರು.

ಅವರು ಶನಿವಾರ ವೈಶ್ಯ ಹಾಸ್ಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘಗಳ ಒಕ್ಕೂಟದ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ನಮ್ಮ ಸಮಾಜ ಬಾಂಧವರ ಕುಂದು ಕೊರತೆಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಸವಲತ್ತು ದೊರೆಯದೆ ಇರುವುದು ನೋವನ್ನುಂಟು ಮಾಡಿದೆ ಎಂದು ವಿಷಾದಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳು ಸಮುದಾಯಕ್ಕಾಗಿ ಮಾಡಿರುವ ತ್ಯಾಗದ ಬಗ್ಗೆ ಇಂದಿನ ಯುವಕರಿಗೆ ತಿಳಿಸುವ ಉದ್ದೇಶದಿಂದ ೨೦೦೭ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಲನಚಿತ್ರವನ್ನು ಚಿತ್ರಿಸಲಾಯಿತು ಎಂದು ಹೇಳಿದರು.

ಸಮಾಜಕ್ಕೆ ಏನಾದರೊಂದು ಕೊಡುಗೆ ಕೊಡಬೇಕೆಂಬ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ, ಇಡೀ ದೇಶ-ವಿದೇಶಗಳಲ್ಲಿ ನಾರಾಯಣ ಗುರುಗಳ ಹೆಸರು ಹರಿದಾಡುತಿತ್ತು, ಅವರ ಜೀವನ ಚರಿತ್ರೆಯನ್ನು ತಿಳಿದಾದರು ಸಮಾಜದವರು ಎಚ್ಚೆತ್ತುಕೊಳ್ಳಬೇಕೆಂಬ ಉದ್ದೇಶದಿಂದ ಅವರ ಜೀವನ ಚರಿತ್ರೆಯ ಬಗ್ಗೆ ಚಲನಚಿತ್ರ ಚಿತ್ರಿಸಲಾಯಿತು, ಜನರ ಮೆಚ್ಚುಗೆ ಪಡೆದ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಹ ದೋರೆತಿದೆ ಎಂದು ತಿಳಿಸಿದರು.

ಮನುಷ್ಯನ ಜೀವನವೇ ಹೋರಾಟ ಅಂದು ನಾರಾಯಣ ಗುರುಗಳು ಕೇರಳದಲ್ಲಿ ವೈಕಂಬ ಚಳುವಳಿಯ ಮೂಲಕ ಗಾಂಧೀಜಿ, ರವೀಂದ್ರನಾಥ್ ಠಾಗೂರ್ ಅವರನ್ನು ಬೇಟಿಯಾಗಿ ದೇವಸ್ಥಾನದ ಒಳ ಹೋಗಲು ಮತ್ತು ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಪಡೆದರು, ಅವರಂತೆಯೇ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನಮ್ಮ ಸಮುದಾಯ ಮುಂದುವರೆಯಲು ಸಾಧ್ಯ ಎಂದರು.

ಪ್ರಸಕ್ತ ಸಾಲಿನ ಮಾರ್ಚ್ ೧೦ರಂದು ರಾಷ್ಟ್ರೀಯ ಮಹಾ ಮಂಡಳಿಯ ೨೫ನೇ ವರ್ಷದ ಬೆಳ್ಳಿಹಬ್ಬ ನಡೆಯಲಿದ್ದು, ದೇಶ-ವಿದೇಶಗಳಿಂದ ಜನರನ್ನು ಸೇರಿಸಿ ಈ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ನಡೆಸುವ ಮೂಲಕ ನಮ್ಮ ಹೋರಾಟವು ಸರ್ಕಾರಕ್ಕೆ ತಲುಪುವಂತೆ ಮಾಡೋಣ, ಎಲ್ಲಾ ಸಮುದಾಯದ ನಾಯಕರು ಒಗ್ಗಟ್ಟಿನಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಂ.ಸತೀಶ್ ಮಾತನಾಡಿ ಡಾ|| ರಾಜಶೇಖರ್ ಕೋಟ್ಯಾನ್ ರವರ ಬಹುದಿನದ ಕನಸ್ಸಿನಂತೆ ಸಮಾಜದವರೆಲ್ಲರನ್ನು ಸಂಘಟಿತರನ್ನಾಗಿ ಮಾಡಿ, ಸಮಾಜವನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಲಗೊಳಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.

ಸಂಘಟನೆ ದೊಡ್ಡ ಮಟ್ಟದಲ್ಲಿ ನಡೆಯಬೇಕು, ದೊಡ್ಡ ಮಟ್ಟದ ಸಂಘಟನೆ ನಡೆಸಿದಾಗ ಮಾತ್ರ ರಾಜ್ಯದ ಮುಖ್ಯ ಮಂತ್ರಿಗಳಲ್ಲಿ ನಮ್ಮ ಹಕ್ಕುಗಳ ಬೇಡಿಕೆಯನ್ನಿಡಲು ಸಾಧ್ಯವಾಗುತ್ತದೆ, ನಿರಂತರ ಹೋರಾಟದಿಂದ ಫಲವನ್ನು ಪಡೆಯಲು ಸಾಧ್ಯ, ಅಂತಹ ಹೋರಾಟ ನಮಗೆ ಅನಿವಾರ್ಯವಾಗಿದೆ, ನಮ್ಮ ಸಮಾಜದ ಯುವ ಸಮುದಾಯದಕ್ಕೆ ರಾಜಕೀಯವಾಗಿ ಶಕ್ತಿಯನ್ನು ತುಂಬುವ ಮೂಲಕ ಸಮಾಜಕ್ಕಾಗಿ ದುಡಿಯುವ ಛಲವನ್ನು ಹೆಚ್ಚಿಸೋಣ, ಸಮಾಜದ ಶಕ್ತಿ ಪ್ರದರ್ಶನವಾಗಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘ ಗೌರವಾಧ್ಯಕ್ಷ ಡಿ.ಆರ್.ಸದಾಶಿವ ಮಾತನಾಡಿ ಹೊಸ-ಹೊಸ ಆವಿಷ್ಕಾರಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿ ನೂರಾರು ವರ್ಷಗಳು ಕಳೆದರು ನೆನಪನ್ನು ಮಾಡಿಕೊಳ್ಳುವಂತಹ ಕೆಲಸವನ್ನು ನಮ್ಮ ನಾಯಕರು ಮಾಡಿದ್ದಾರೆ, ಆದರೆ ಇತ್ತೀಚಿನ ರಾಜಕಾರಣ ಅಥವಾ ಸಂಘ-ಸಂಸ್ಥೆಗಳಲ್ಲಿಯೇ ಆಗಲಿ ಬೆಳೆಯುವಂತ ಅವಕಾಶ ಮತ್ತು ಪ್ರೋತ್ಸಾಹಿಸುವುದು ಕಡಿಮೆಯಾಗಿದೆ ಎಂದು ವಿಷಾಧಿಸಿದರು.

ಚಿಕ್ಕಮಗಳೂರು ಭಾಗದಲ್ಲಿ ನಮ್ಮ ಸಮುದಾಯ ಬೆಳವಣಿಗೆಗೆ ಕಾರಣಕರ್ತರಾದವರು ಬಿ.ಕೆ.ಹರಿಪ್ರಸಾದ್ ರವರು ಅಂತವರಿಗೆ ನಮ್ಮ ಬೆಂಬಲವಿದೆ, ನಾರಾಯಣ ಗುರುಗಳ ಸಂದೇಶದಂತೆ ಸಮುದಾಯದವರು ಸಂಘಟಿತರಾಗಿ, ಸಂಘಟನೆಯಿಂದ ಬಲಯುತರಾಗಿ, ಪ್ರಬುದ್ಧರಾಗಬೇಕಾಗಿದೆ, ನಮ್ಮ ಸಮಾಜದವರು ವಿದ್ಯಾಭ್ಯಾಸ, ವಾಣಿಜ್ಯ ಉಧ್ಯಮದಲ್ಲಿಯೂ ಅಭಿವೃದ್ಧಿಯನ್ನು ಹೊಂದಬೇಕೆಂಬ ಚಿಂತನೆಯನ್ನು ಹೊಂದಿದವರು ನಾವು ಎಂದರು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ ಟ್ರಸ್ಟ್ ಅಧ್ಯಕ್ಷ ಪೀತಾಂಬರ ಹೆರಾಜೆ, ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಕೆ.ಸಿ.ಗುಣಶೇಖರ್, ನಾರಾಯಣಗುರು ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ, ಮುಖಂಡರಾದ ಕೆ.ನಾರಾಯಣ್, ಬಿ.ರಾಜಪ್ಪ, ಎನ್.ಆರ್.ಪುರ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾಸಂಘ ಅಧ್ಯಕ್ಷರು, ಗೌರವಕೋಶಾಧ್ಯಕ್ಷರು ಕೆ.ನಾರಾಯಣ್, ಕೊಪ್ಪ ತಾಲ್ಲೂಕು ಸಂಘದ ಅಧ್ಯಕ್ಷರು ಕೆ.ಜಿ.ಪ್ರಕಾಶ್, ಬಿಲ್ಲವ ಸಮಾಜಸೇವಾ ಸಂಘದ ಮಾಜಿ ಅಧ್ಯಕ್ಷರು ಟಿ.ರಾಧಾಕೃಷ್ಣ, ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಬಿ.ಎನ್.ಬಾಸ್ಕರ್, ಬಣಕಲ್ ಅಧ್ಯಕ್ಷರಾದ ಲಕ್ಷ್ಮಣ್‌ಪೂಜಾರಿ, ಭೋಜಾಪೂಜಾರಿ, ಎನ್.ಎಸ್.ಕೃಷ್ಣಪ್ಪ, ಮನೋಜ್‌ಕುಮಾರ್, ಎಂ.ಕೃಷ್ಣಪ್ಪ, ಟಿ.ರಾಜಪ್ಪ, ವಿಠ್ಠಲ್, ಕೆ.ಎಸ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು, ಶ್ರೀನಿವಾಸ್‌ಮಾಯಪ್ಪಣ್ಣ ಸ್ವಾಗತಿಸಿ, ವಾಸುಪೂಜಾರಿ ನಿರೂಪಿಸಿ, ಅಶೋಕ್ ವಂದಿಸಿದರು.

Special Meeting of District Brahmashree Narayanguru Union of Samaj Seva Sanghas

About Author

Leave a Reply

Your email address will not be published. Required fields are marked *

You may have missed