September 19, 2024

ದೈನಂದಿನ ಸಂಚಾರದಲ್ಲಿ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಿ

0
ಒಂದು ವಾರಗಳ ಕಾಲ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರ ಕ್ಷತಾ ಸಪ್ತಾಹ

ಒಂದು ವಾರಗಳ ಕಾಲ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರ ಕ್ಷತಾ ಸಪ್ತಾಹ

ಚಿಕ್ಕಮಗಳೂರು: ದೈನಂದಿನ ಸುಗಮ ಸಂಚಾರಕ್ಕೆ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸುವ ಮೂಲಕ ಅಪಘಾತ ತಡೆಗಟ್ಟಿ ಜೀವಗಳ ರಕ್ಷಣೆಗೆ ಮುಂದಾಗಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಡಳಿತ, ಸಂಚಾರಿ ಪೊಲೀಸ್ ಠಾಣೆ, ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ವಾರಗಳ ಕಾಲ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರ ಕ್ಷತಾ ಸಪ್ತಾಹದ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನ ಜೀವ ಅತಿಮೂಲ್ಯವಾದುದು. ಹೀಗಾಗಿ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ಸಂಚ ರಿಸುವ ಜೊತೆಗೆ ಬೈಕ್‌ಗಳಲ್ಲಿ ಹೆಲ್ಮೇಟ್, ಕಾರಿನ ಸೀಟ್‌ಬೆಲ್ಟ್ ಸೇರಿದಂತೆ ಇನ್ನಿತರೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರೆ ಯಾವುದೇ ಅನಾಹುತಗಳು ಸಂಭವಿಸಲು ಸಾಧ್ಯವಿಲ್ಲ ಎಂದ ಅವರು ನಿಯಮಪಾಲಿಸದ ವ್ಯಕ್ತಿಗಳಿಗೆ ವಿದ್ಯಾರ್ಥಿಗಳು ಸ್ಥಳಗಳಲ್ಲಿಯೇ ತಿದ್ದುವ ಕೆಲಸ ಮಾಡಬೇಕು ಎಂದರು.

ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಅಪಘಾತ ಪ್ರಕರಣಗಳು ನಿಯಮ ಪಾಲಿಸದೇ ಸಂಭವಿಸಿದೆ. ಇದರಿಂ ದಾಗಿ ಕುಟುಂಬದ ಆಧಾರಸ್ಥಂಬವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಪ್ರತಿ ವಾಹನ ಸವಾರರು ನಿಗಧಿತ ವೇಗಕ್ಕಿಂತ ಹೆಚ್ಚು ಸಂಚರಿಸದೇ ಸಂಚಾರಿ ಠಾಣೆಯ ನಿಯಮಗಳನ್ನು ಅಳವಡಿಸಿಕೊಂಡು ದೈನಂದಿನ ಕೆಲಸ- ಕಾರ್ಯಗಳಿಗೆ ಮುಂದಾಗಬೇಕು ಎಂದರು.

ಆ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯು ಪೊಲೀಸ್ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ ಸುಮಾರು ಏಳು ಲಕ್ಷ ವಿದ್ಯಾರ್ಥಿಗಳ ಜೊತೆಗೂಡಿ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದು ನಿಯಮ ಉಲ್ಲಂಘಿಸುವ ಸವಾರರಿಗೆ ಪುಷ್ಪಗುಚ್ಚ ನೀಡುವ ಮೂಲಕ ಸುರಕ್ಷತಾ ನಿಯಮದ ಅರಿವು ಸವಾರರಿಗೆ ಮೂಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ ಅಮಟೆ ಮಾತನಾಡಿ ಪ್ರಸ್ತುತ ಚಿಕ್ಕಮಗಳೂರು ೧.೩೦ ಲಕ್ಷ ಜನಸಂಖ್ಯೆ ಹೊಂದಿರುವ ತಾಲ್ಲೂಕಾಗಿದೆ. ಸಂಚಾರಿ ಠಾಣೆಯಲ್ಲಿ ಅಧಿಕಾರಿಗಳಿಂದ ಇಷ್ಟೆಲ್ಲಾ ಮಂದಿಯನ್ನು ನಿಭಾ ಯಿಸಿಕೊಂಡು ಮುನ್ನೆಡೆಯುತ್ತಿದೆ. ಜೊತೆಗೆ ವಾರಕ್ಕೊಮ್ಮೆ ಪ್ರವಾಸಿಗರ ಧಾವಿಸಿ ಅಡ್ಡಾದಿಡ್ಡಿ ಪಾರ್ಕಿಂಗ್ ನಿಲುಗಡೆ ಗೊಳಿಸುತ್ತಿರುವುದು ಬಹಳಷ್ಟು ಸಮಸ್ಯೆಯಾಗುತ್ತಿದೆ ಎಂದರು.

ಸಾರ್ವಜನಿಕರು ರಸ್ತೆ ಸುರಕ್ಷತಾ ವಿಷಯದಲ್ಲಿ ಟ್ರಾಫಿಕ್ ಅಧಿಕಾರಿಗಳ ಮಾತಿಗೂ ಜಗ್ಗುತ್ತಿಲ್ಲ. ಇಂದಿಗೂ ಕೆಲ ವರು ಗುಣಮಟ್ಟವಿಲ್ಲದ ಹಾಗೂ ಆಫ್‌ಹೆಲ್ಮೇಟ್ ಧರಿಸಿ ತಿರುಗಾಡುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಸವಾ ರರಿಗೆ ಅರಿವು ಮೂಡಿಸುವುದು ಹಾಗೂ ನಿಯಮ ಉಲ್ಲಂಘಿಸಿದರೆ ವಿದ್ಯಾರ್ಥಿಗಳಿಂದಲೇ ದಂಡ ಹಾಕಿಸುವ ಕೆಲಸ ಕ್ಕೆ ಸಪ್ತಾಹದ ಮೂಲಕ ಕೈಹಾಕಿದೆ. ಆ ದಿನದಲ್ಲಿ ಒಟ್ಟಾರೆ ದಂಡದ ಮೊತ್ತವನ್ನು ಠಾಣೆಗೆ ಜಮಾವಣೆಯನ್ನು ವಿದ್ಯಾ ರ್ಥಿಗಳೇ ಮಾಡಬೇಕು ಎಂದರು.

ಒನವೇ ಅಥವಾ ಪೋನ್‌ನಲ್ಲೇ ಮಾತನಾಡುತ್ತಾ ಸಂಚರಿಸುವವರು, ನೋ ಪಾರ್ಕಿಂಗ್‌ಗಳಲ್ಲ್ಲಿ ವಾಹನಗ ಳನ್ನು ನಿಲುಗಡೆಗೊಳಿಸುವ, ರಸ್ತೆ ಸುರಕ್ಷತಾ ಕಾನೂನನ್ನು ಉಲ್ಲಂಘಿಸುವ ಸವಾರರಿಗೆ ಸಂಚಾರಿ ಪೊಲೀಸರ ಜೊತೆಗೂಡಿ ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಸುರಕ್ಷತಾ ನಿಯಮವನ್ನು ಸವಾರರಿಗೆ ತಿಳಿಸುವ ಕಾರ್ಯಕ್ಕೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹದ ಅರಿವನ್ನು ಸಾರ್ವಜನಿಕರು ತಿದ್ದಿಕೊಂಡಲ್ಲಿ ಶೇ.೧೦ ಅಪಘಾತ ವನ್ನು ತಪ್ಪಿಸಬಹುದು. ಅದಲ್ಲದೇ ಸಪ್ತಾಹದಲ್ಲಿ ಉತ್ತಮ ರೀತಿಯಲ್ಲಿ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಮಕ್ಕಳಿಗೆ ಸಮಾರೋಪ ದಿನದಂದು ಬಹುಮಾವನ್ನು ವಿತರಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಐಡಿಎಸ್‌ಜಿ ಕಾಲೇಜು, ಸಂತ ಜೋಸೆಫರ ಶಾಲೆ, ಕೇಂಬ್ರಿಡ್ಜ್, ಮಾಡೆಲ್, ಸೆಂಟ್ ಮೇರಿಸ್ ಎಐಟಿ ಸೇರಿದಂತೆ ಇನ್ನಿತರೆ ಶಾಲೆಯ ವಿದ್ಯಾರ್ಥಿಗಳು ಸಪ್ತಾಹದಲ್ಲಿ ಪಾಲ್ಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕುರಿತು ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೃಷ್ಣಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಸಂಘಟನಾ ಆಯುಕ್ತ ಕಿರಣ್‌ಕುಮಾರ್, ಸ್ವಯಂ ಸೇವಕ ನಿಹಾಲ್ ಮತ್ತಿತರರು ಹಾಜ ರಿದ್ದರು.

National Road Safety Week to be held for a week

About Author

Leave a Reply

Your email address will not be published. Required fields are marked *

You may have missed