September 19, 2024

ಸಮಾಜಮುಖಿ ಸೇವಾ ಚಟುವಟಿಕೆ ವಿಶ್ವದಲ್ಲೇ ಅಗ್ರಪಂಕ್ತಿಯಲ್ಲಿ ಲಯನ್ಸ್ ಸಂಸ್ಥೆ

0
ಲಯನ್ಸ್ ಸಂಸ್ಥಾಪನಾ ದಿನಾಚರಣೆ

ಲಯನ್ಸ್ ಸಂಸ್ಥಾಪನಾ ದಿನಾಚರಣೆ

ಚಿಕ್ಕಮಗಳೂರು:  ಸಮಾಜಮುಖಿ ಸೇವಾ ಕಾರ್ಯಚಟುವಟಿಕೆಗಳ ಅನುಷ್ಠಾನದಲ್ಲಿ ಲಯನ್ಸ್ ಕ್ಲಬ್ ಇಡೀ ವಿಶ್ವದಲ್ಲೇ ಅಗ್ರಪಂಕ್ತಿಯಲ್ಲಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಗೌರ್ನರ್ ಹೆಚ್.ಆರ್. ಹರೀಶ್ ಹೇಳಿದ್ದಾರೆ.

ನಗರದ ಲಯನ್ಸ್ ಸೇವಾ ಭವನದಲ್ಲಿ ಶನಿವಾರ ಸಂಜೆ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಲಯನ್ಸ್ ಸಂಸ್ಥಾಪನಾ ದಿನಾಚರಣೆ ಮತ್ತು ಪೂರ್ವ ಲಯನ್ಸ್ ಅಧ್ಯಕ್ಷರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಾ. ಮೆಲ್ವಿನ್ ಜೋನ್ಸ್ ಅವರಿಂದ ೧೯೧೭ರಲ್ಲಿ ಆರಂಭಗೊಂಡ ಲಯನ್ಸ್ ಸೇವಾ ಸಂಸ್ಥೆ ವಿಶ್ವದ ೨೧೦ ದೇಶಗಳಲ್ಲಿ ಲಯನ್ಸ್ ಸಂಸ್ಥೆ ಅಸ್ತಿತ್ವದಲ್ಲಿದ್ದು, ೪೮ ಸಾವಿರ ಲಯನ್ಸ್ ಕ್ಲಬ್‌ಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ೧೪ ಲಕ್ಷ ಸದಸ್ಯರು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಸೇವೆಯನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ಚಿಕ್ಕಮಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ಲಯನ್ಸ್ ಕ್ಲಬ್ ತನ್ನ ೪೯ ವರ್ಷಗಳನ್ನು ಪೂರೈಸಿದ್ದು, ಈ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಸ್ಥೆ ೫೦ ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸುವಲ್ಲಿ ಹಲವು ಹಿರಿಯರ ಪರಿಶ್ರಮ ಅಡಗಿದೆ. ಇಂತಹ ಸೇವಾ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಎಲ್ಲರ ಸಹಕಾರ ಬಹಳ ಮುಖ್ಯ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್‌ಗಳಿಗೆ ಹೋಲಿಸಿದ್ದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಲಯನ್ಸ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಚಿಕ್ಕಮಗಳೂರು ಲಯನ್ಸ್ ಪಾತ್ರವಾಗಿದೆ. ಸುವರ್ಣ ಮಹೋತ್ಸವ ಆಚರಣೆ ವರ್ಷದಲ್ಲಿ ಈ ಕ್ಲಬ್‌ನ ಅಧ್ಯಕ್ಷರಾಗಿರುವ ಜಿ. ರಮೇಶ್ ಅತ್ಯಂತ ಕ್ರೀಯಾಶೀಲವಾಗಿ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಚಟುವಟಿಕೆಗಳು ಬೇರೆ ಲಯನ್ಸ್ ಕ್ಲಬ್‌ಗಳಿಗೆ ಮಾದರಿಯಾಗಲಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಮಾತನಾಡಿ ಚಿಕ್ಕಮಗಳೂರು ಲಯನ್ಸ್ ಕ್ಲಬ್ ಕಾರ್ಯಾರಂಭಗೊಂಡು ೫೦ ವರ್ಷಗಳು ತುಂಬುತ್ತಿದ್ದು ಈ ಸಂಸ್ಥೆ ಇಷ್ಟೊಂದು ಚೆನ್ನಾಗಿ ಬೆಳೆದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಎಲ್ಲಾ ಹಿರಿಯ ಸದಸ್ಯರ ಸಹಕಾರ ಕಾರಣ ಎಂದು ತಿಳಿಸಿದರು.

ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ವರ್ಷದಲ್ಲಿ ತಾನು ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ತಿಳಿಸಿ ಲಯನ್ಸ್ ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಜೊತೆಗೆ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ವರ್ಷ ಯುವಜನತೆಗೆ ಪೂರಕವಾದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಪ್ಲಾನ್ ಮಾಡಿದೆ ಎಂದು ಹೇಳಿದರು.

ಲಯನ್ಸ್ ಸಂಸ್ಥೆಗೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡ ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್, ಡಿ.ಎಸ್.ಎಂ.ಎಸ್. ಅಧ್ಯಕ್ಷ ಎಸ್. ಪ್ರಭುಸೂರಿ, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಗೋಪಿಕೃಷ್ಣ ಅವರನ್ನು ಇದೇ ಸಂದರ್ಭದಲ್ಲಿ ಸಂಘಕ್ಕೆ ಬರಮಾಡಿಕೊಳ್ಳಲಾಯಿತು. ಹಿರಿಯ ಸದಸ್ಯರಾದ ಲಯನ್ಸ್ ಪ್ರೊ.ಜಗದೀಶಪ್ಪ, ಎಂ.ಆರ್. ನಾಗರಾಜ್, ಕೆ.ಡಿ. ಪುಟ್ಟಣ್ಣ, ದೇವೀಚಂದ್‌ದೀ ಹಿಂದೆ ಅಧ್ಯಕ್ಷರಾಗಿ ಕೆಲಸ ಮಾಡಿದ ಅವಧಿಯಲ್ಲಿ ಕಾರ್ಯಚಟುವಟಿಕೆಗಳ ಬಗ್ಗೆ ಮೆಲುಕು ಹಾಕಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಪೂರ್ವಾಧ್ಯಕ್ಷರುಗಳಿಗೆ ನೆನಪಿನ ಕಾಣಿಗೆ ನೀಡಿ ಅಭಿನಂದಿಸಲಾಯಿತು. ಸುವರ್ಣ ಮಹೋತ್ಸವ ಕಟ್ಟಡದ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ರಮೇಶ್ ತಿಳಿಸಿದರು.

ಲಯನ್ಸ್ ಕ್ಲಬ್ ವತಿಯಿಂದ ಹೊರತಂದ ೨೦೨೪ನೇ ವರ್ಷದ ಟೇಬಲ್ ಕ್ಯಾಲೆಂಡರ್‌ನ್ನು ಲಯನ್ಸ್ ಹಿರಿಯ ಸದಸ್ಯ ಎಂ.ಆರ್. ನಾಗರಾಜ್ ಬಿಡುಗಡೆ ಮಾಡಿದರು. ಕ್ಯಾಲೆಂಡರ್‌ನ ಪ್ರಾಯೋಜಕರಾದ ರೇಮಂಡ್ ಸಂಸ್ಥೆಯ ಮುಖ್ಯಸ್ಥ ಜೆ.ಜಿ. ಜಯರಾಮೇಗೌಡ ಮತ್ತು ಶಂಕರ್ ಡೆವಲಪರ್‍ಸ್ ಮುಖ್ಯಸ್ಥ ಟಿ.ನಾರಾಯಣಸ್ವಾಮಿಯವರನ್ನು ಲಯನ್ಸ್ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.

ಲಯನ್ಸ್ ಕ್ಲಬ್ ಸದಸ್ಯರಾದ ಪುಷ್ಪರಾಜ್, ಎಂ.ಆರ್. ಶ್ರೀಧರ್, ಡಾ.ಎಸ್.ಆರ್. ವೈದ್ಯ, ಸಿ.ಪಿ. ಸುರೇಶ್, ಕೇಶವಮೂರ್ತಿ, ಲಯನ್ ಜೋನಲ್ ಕೋ-ಆರ್ಡಿನೇಟರ್ ಬಿ.ಎನ್. ವೆಂಕಟೇಶ್, ಸದಸ್ಯರಾದ ಎಂ.ಎನ್. ಹರೀಶ್, ಮಮತ, ಕವಿತಾ ಜಿ. ರಮೇಶ್, ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶಶಿಪ್ರಸಾದ್, ಲಯನ್ಸ್ ಕ್ಲಬ್ ಖಜಾಂಚಿ ಕೆ.ಇ. ಬಾಲಕೃಷ್ಣ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ ವಂದಿಸಿದರು.

Lions Foundation Day

About Author

Leave a Reply

Your email address will not be published. Required fields are marked *

You may have missed