September 19, 2024

ಕಾಫಿನಾಡಿನಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ರಾಮತಾರಕಹೋಮದೊಂದಿಗೆ ರಾಮೋತ್ಸವ

0
ಜಿಲ್ಲೆಯಲ್ಲಿ ಶ್ರೀರಾಮ ಮತ್ತು ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ

ಜಿಲ್ಲೆಯಲ್ಲಿ ಶ್ರೀರಾಮ ಮತ್ತು ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಅಂಗವಾಗಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಶ್ರೀರಾಮ ಮತ್ತು ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ರಾಮತಾರಕಹೋಮದೊಂದಿಗೆ ರಾಮೋತ್ಸವ ಆಚರಿಸಲಾಯಿತು.

ಮುಜರಾಯಿ ಸಚಿವ ರಾಮಲಿಂಗರೆಡ್ಡಿಯವರ ಆದೇಶದ ಮೇರೆಗೆ ಹಾಗೂ ಮಜರಾಯಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಒಟ್ಟು ೮೮೦ ದೇವಾಲಯಗಳಲ್ಲಿ ಜಿಲ್ಲೆಯ ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದಲ್ಲಿ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಈ ಜಿಲ್ಲೆಯ ಎ ದರ್ಜೆಯ ಚಿಕ್ಕಮಗಳೂರು ತಾಲೂಕಿನ ಐಡಿಪೀಠದ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ದರ್ಗಾ, ಶೃಂಗೇರಿ ತಾಲೂಕಿನಮ ಕಿಗ್ಗದ ಋಷ್ಯಶೃಂಗೇಶ್ವರ ದೇವಾಲಯ, ಕಳಸ ತಾಲೂಕು ಕಳಸೇಶ್ವರ ದೇವಾಲಯ. ಬಿ ದರ್ಜೆಗೆ ಸೇರಿದ ಮಲ್ಲೇನಹಳ್ಳಿಯ ಬಿಂಡಿಗದ ದೇವೀರಮ್ಮ ದೇವಾಲಯ ಸಖರಾಯಪಟ್ಟಣದ ಶಕುನರಂಗನಾಥಸ್ವಾಮಿ ದೇವಾಲಯ, ಅಂತರಘಟ್ಟಮ್ಮ ದೇವಾಲಯ, ಅಮೃತಪುರದ ಅಮೃತೇಶ್ವರದೇವಾಲಯ, ಜೇನುಗಲ್ಲಿನ ಸಿದ್ದೇಶ್ವರ,ಜುಂಜಪ್ಪದೇವಾಲಯ, ಅಣ್ಣಪ್ಪಸ್ವಾಮಿ ದೇವಾಲಯ,ಬಿಸ್ನಗಿಮಟ್ಟದ ದೇವಾಲಯ ಹಾಗೂ ಸಿ ದರ್ಜೆಗೆ ಸೇರಿದ ೮೬೮ ದೇವಾಲಯಗಳಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ದೀಪಾಲಂಕಾರಮಾಡಲಾಗಿತ್ತು. ಬೆಳಿಗ್ಗೆಶ್ರೀರಾಮನ ಭಾವಚಿತ್ರವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಪದ್ಮಾವತಿ ಪರಿಮಳ ಅವರ ನೇತೃತ್ವದಲ್ಲಿ ಭಜನೆ, ಸಂಕೀರ್ತನೆ ನೃತ್ಯಗಳನ್ನು ಮಾಡಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಸ.ಗಿರಿಜಾಶಂಕರ, ಕಾರ್ಯದರ್ಶಿ ಡಿ.ಎನ್.ಮೋಹನ್, ಸದಸ್ಯರಾದ ಕೆ.ಎಸ್.ನಂಜುಂಡರಾವ್, ಉಮೇಶ್, ಪುಷ್ಪಾರಾಜೇಂದ್ರ ಇದ್ದರು.

ರಾಮನಹಳ್ಳಿಯ ರಾಮೇಶ್ವರದೇವಾಲಯ,ರಾಮೇಶ್ವರ ನಗರದ ಹಳ್ಳದ ರಾಮೇಶ್ವರ, ಹಿರೇಮಗಳೂರಿನ ಕೋದಂಡರಾಮಚಂದ್ರದೇವಾಲಯಗಳನ್ನು ಸ್ವಚ್ಚಗೊಳಿಸಿ ಹೂವಿನಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಮತ್ತು ರಾಮತಾರಕಹೋಮಗಳನ್ನು ನಡೆಸಲಾಗಿದೆ. ಹಳ್ಳದ ರಾಮೇಶ್ವರ ದೇಗುಲದಲ್ಲಿ ಬೆಳಿಗ್ಗೆ ೫ ಗಂಟೆಗೆ ಭಜನಾ ತಂಡದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ರಾಮೇಶ್ವರನಗರ ಹಿತರಕ್ಷಣಾ ಸಮಿತಿ, ಹಳ್ಳದ ರಾಮೇಶ್ವರ ದೇವಾಲಯ ಸೇವಾ ಸಂಘದ ಆಶ್ರಯದಲ್ಲಿ ದೇವಾಲಯದಲ್ಲಿ ರಾಮ ತಾರಕ ಹೋಮ, ರಾಮ ಭಜನೆ, ಮಹಾಮಂಗಳಾರತಿ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಅಯೋಧ್ಯೆಯಲ್ಲಿನ ದೇವಾಲಯ ಉದ್ಘಾಟನೆಯ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು.

ಹಿರೇಮಗಳೂರು ಕೋಂದಡರಾಮದೇವಾಲಯದಲ್ಲೂ ವಿಶೇಷಪೂಜೆ ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಸಲ್ಲಿಸಲಾಯಿತು. ಶಾಸಕ ಹೆಚ್.ಡಿ.ತಮ್ಮಯ್ಯ ದೇವಾಲಯಕ್ಕೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯವನ್ನು ಹೂವು, ತಳಿರು,ತೋರಣಗಳಿಂದ ಸಿಂಗರಿಸಲಾಯಿತ್ತು.

ಕೋಟೆಯಲ್ಲಿ ನಗರಸಭೆ ಸದಸ್ಯ ಮಧುಕುಮಾರ್‌ರಾಜ್‌ಅರಸ್ ನೇತೃತ್ವದಲ್ಲಿ ಸಿಂಗರಿಸಲ್ಪಟ್ಟ ಎತ್ತಿನಗಾಡಿಯಲ್ಲಿ ಶ್ರೀರಾಮಚಂದ್ರನ ಭಾವಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಯಿತು. ರಾಮ,ಸೀತೆ, ಹನುಮಂತ ವೇಷಧರಿಸಿದ್ದ ಪುಟಾಣಿಗಳು ಸಾರ್ವಜನಿಕರ ಗಮನ ಸೆಳೆದರು.ಮಹಿಳೆಯರು ಕೇಸರಿ ಶಲ್ಯ ಮತ್ತು ಕೇಶರಿಪೇಟ ತೊಟ್ಟು ಭಜನೆಯೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.

ಮುಜರಾಯಿ ಇಲಾಖೆ ವ್ಯಾಪ್ತಿ ಒಳಪಡೆದ ಇತರೆ ದೇವಾಲಯಗಳಲ್ಲಿ ರಾಮತಾರಕಹೋಮ, ವಿಶೇಷಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು.ಭಕ್ತಾಧಿಕಗಳು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಂಡರು. ಒಟ್ಟಾರೆಯಾಗಿ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರತಿಷ್ಟಾಪನೆಗೊಂಡಿರುವ ಬಾಲರಾಮನ ಪ್ರಾಣಪ್ರತಿಷ್ಟಾಪನೆ ಹಿನ್ನೆಯಲ್ಲಿ ಕಾಫಿನಾಡಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿವೆ.

Special worship at Sri Rama and Eshwar temples in the district

 

About Author

Leave a Reply

Your email address will not be published. Required fields are marked *

You may have missed