September 16, 2024
ಹಿರೇಮಗಳೂರಿನಲ್ಲಿ ಇರುವ ರುದ್ರಭೂಮಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಹಿರೇಮಗಳೂರಿನಲ್ಲಿ ಇರುವ ರುದ್ರಭೂಮಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಚಿಕ್ಕಮಗಳೂರು:  ಬೈಪಾಸ್ ರಸ್ತೆಯಲ್ಲಿರುವ ಎರಡು ರುದ್ರಭೂಮಿಯನ್ನು ಇನ್ನು ಎರಡು ವ?ದಲ್ಲಿ ಗಾರ್ಡನ್ ಹೂತೋಟದ ರೀತಿ ಅಭಿವೃದ್ಧಿಪಡಿಸಲು ಕಟಿಬದ್ದವಾಗಿರುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.

ಅವರು ಇಂದು ಸಮೀಪದ ಹಿರೇಮಗಳೂರಿನಲ್ಲಿ ಇರುವ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲು ೧೦ ಲಕ್ಷ ರೂಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಹಿರೇಮಗಳೂರು ಮತ್ತು ಲಕ್ಷ್ಮಿಪುರ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸುಮಾರು ೮೦ ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ ಶಾಸಕರು ನಗರಸಭೆ ವ್ಯಾಪ್ತಿಯ ೪ನೇ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವುದು ಸಂತಸ ತಂದಿದೆ ಎಂದು ಹೇಳಿದರು.

ಹಿರೇಮಗಳೂರು ನನ್ನ ಜನ್ಮಭೂಮಿ ಕರ್ಮಭೂಮಿಯು ಆಗಿದೆ, ಸಾಮಾನ್ಯ ರೈತ ಕುಟುಂಬದವರಾಗಿರುವ ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ಶಾಸಕನಾಗಿದ್ದೇನೆ ಎಂದು ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನಮಾನ ಗಳಿಸಿದಾಗ ತಾನು ಹುಟ್ಟಿದ ಗ್ರಾಮಕ್ಕೆ ಏನಾದರೂ ಒಳ್ಳೆಯ ಕಾರ್ಯ ಮಾಡಬೇಕೆಂಬ ಹಂಬಲ ಇರುತ್ತದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಎಂದರು.

ನಾಗರೀಕರಿಗೆ ರುದ್ರಭೂಮಿ ಅತಿ ಶ್ರೇ?ವಾಗಿದ್ದು, ೨೦೦೧ರಲ್ಲಿ ಈ ರುದ್ರಭೂಮಿಯಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದು ಸ್ವಚ್ಛಗೊಳಿಸಿ ಇಲ್ಲೇ ಉಪಹಾರ ಸೇವಿಸಿದ್ದನ್ನು ಸ್ಮರಿಸಿದರು.

ಕಳೆದ ೬೦ ವ? ಹಳೆಯದಾದ ಹಿರೇಮಗಳೂರು ಪ್ರಾಥಮಿಕ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಮಾದರಿಯನ್ನಾಗಿ ಮಾಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಪಿಹೆಚ್‌ಸಿ ಮೇಲ್ದರ್ಜೆಗೇರಿಸಿ ಆರೋಗ್ಯಕ್ಕೆ ಅನುಕೂಲ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಹಿರೇಮಗಳೂರು ಗ್ರಾಮದಲ್ಲಿ ಇರುವ ಎಲ್ಲಾ ದೇವಾಲಯಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಹಿಸಿದ್ದರು, ನಗರಸಭೆ ಸದಸ್ಯರುಗಳಾದ ವಿದ್ಯಾಬಸವರಾಜ್, ಗುರುಮಲ್ಲಪ್ಪ, ಗ್ರಾಮಸ್ಥರಾದ ರಾಮಚಂದ್ರ, ಸುರೇಶ್, ಜಗದೀಶ್, ಚಂದ್ರಪ್ಪ, ವೆಂಕಟೇಶ್ವರ, ಮಂಜುನಾಥ್ ಇದ್ದರು. ಪೌರಾಯುಕ್ತ ಬಿ.ಸಿ.ಬಸವರಾಜ್ ಉಪಸ್ಥಿತರಿದ್ದರು.

Guddali Puja for the compound construction work at Rudrabhoomi in Hiremagalur

About Author

Leave a Reply

Your email address will not be published. Required fields are marked *