September 16, 2024
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ

ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ

ಚಿಕ್ಕಮಗಳೂರು: ಹೆಣ್ಣು ಎಂದರೆ ತಾಯಿ, ಸಹೋದರಿ, ಮಡದಿ ಹೀಗೆ ಪ್ರತಿಯೊಬ್ಬರ ಪುರು ?ನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಪ್ರತಿಯೊಬ್ಬರು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ಬೇಲೂರು ರಸ್ತೆ ಸಮೀಪದ ಎಸ್.ಟಿ.ಜೆ. ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ  ನಡೆದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.

ಹೆಣ್ಣು ಮಗಳು ದೇಶದ ಪ್ರಧಾನಿ, ಸಚಿವೆ ವೈದ್ಯ, ಕ್ರೀಡಾಪಟು ಹೀಗೆ ಹಲವಾರು ರಂಗಗಳಲ್ಲಿ ಗುರುತಿಸಿಕೊ ಂಡಿದ್ದಾರೆ. ಅಸಾಧ್ಯವಾದದ್ದು ಯಾವುದೂ ಇಲ್ಲ, ವಿದ್ಯಾರ್ಥಿನಿಯರು ಸಾಧನೆಗೆ ಮನಸ್ಸು ಮಾಡಬೇಕು. ಹೆಣ್ಣು ಮಕ್ಕಳ ಕನಸುಗಳನ್ನು ನಾವೆಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ಮಹಿಳೆ ಮನೆಯ ಆಧಾರ ಸ್ಥಂಬವಿದ್ಧಂತೆ, ಶಾಲೆಯಲ್ಲಿ ಮಹಿಳಾ ಉಪಾಧ್ಯಾಯರಿದ್ದರೆ ಆ ಶಾಲೆ ಚೆನ್ನಾಗಿ ನಡೆಯುತ್ತದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರುವಂತೆ ನೋಡಿ ಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಮಾತೃ ದೇವೋಭವ, ತಾಯಿಯೇ ದೇವರು ಎಂಬುದು ನಮ್ಮ ಸಂಸ್ಕೃತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಗಂಡು ಮಗು ವಂಶೋದ್ದಾರಕ ಎಂಬ ತಪ್ಪು ಕಲ್ಪನೆಯಿಂದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಲಿಂಗ ಸಮಾನತೆಯ ಮನೋಧರ್ಮ ಬದಲಾಗಬೇಕು. ಗಂಡು- ಹೆಣ್ಣು ಎಂಬ ಬೇಧಬಾವ ಮಾಡದೇ ಇಬ್ಬರಿಗೂ ಸಮಾನವಾಗಿ ಕಾಣಬೇಕು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ ಮಾತನಾಡಿ ಹೆಣ್ಣು ಹಲವು ರೀತಿಯಲ್ಲಿ ಶೋ?ಣೆಗೆ ಒಳಗಾಗುತ್ತಿದ್ದು ಅವುಗಳನ್ನು ತಡೆಗಟ್ಟಲು ಹೆಣ್ಣು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ೨೦೦೮ರಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜನವರಿ ೨೪ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಘೋಷಿಸಿದೆ ಎಂದು ತಿಳಿಸಿದರು.

ಸಮಾಜಕ್ಕೆ ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಅರಿವಾಗಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ಅಪರಾಧಗಳಿಂದ ರಕ್ಷಣೆ ದೊರೆಯಬೇಕು. ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಸದುದ್ದೇಶದಿಂದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಟಿ.ಜೆ. ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲೆ ಭಾರತಿ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಎಂ.ಎನ್.ಷಡಕ್ಷರಿ, ಎಸ್‌ಟಿಜೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂತೋಷ್‌ಕುಮಾರ್, ಸ್ವಯಂ ಸೇವಕಿ ಕೆ.ಆರ್.ಜಯಶೀಲ, ಭಾರತೀಯ ಅಂಚೆ ಇಲಾಖೆ ಅಧಿಕಾರಿ ಸುನಂದ, ಸ್ಕೌಟ್ಸ್ & ಗೈಡ್ಸ್ ಸಂಘಟನಾ ಆಯುಕ್ತ ಕಿರಣ್‌ಕುಮಾರ್ ಮತ್ತಿತರರಿದ್ದರು.

National Girl’s Day Program

 

About Author

Leave a Reply

Your email address will not be published. Required fields are marked *