September 16, 2024

ಬಲಾಡ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅನನ್ಯ

0
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ

ಚಿಕ್ಕಮಗಳೂರು: : ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಡ್ಯ ಗಣರಾಜ್ಯವನ್ನಾಗಿ ರೂಪಿ ಸುವಲ್ಲಿ ಅಂಬೇಡ್ಕರ್‌ರವರ ತ್ಯಾಗ ಮತ್ತು ಬಲಿದಾನ ಶ್ರೇಷ್ಟವಾದುದು ಎಂದು ಗೃಹರಕ್ಷಕ ದಳದ ಮಾಜಿ ಸಮಾ ದೇಷ್ಠ ಆರ್.ಅನಿಲ್‌ಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಆವರಣದ ಮುಂಭಾಗದಲ್ಲಿ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಏರ್ಪಡಿಸಿದ್ದ ೭೫ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಶುಕ್ರವಾರ ಡಾ|| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪೀಠಿಕೆ ಓದಿ ಬಳಿಕ ಅವರು ಮಾತನಾಡಿದರು.

ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯ ಪಥದಲ್ಲಿ ಮುನ್ನಡೆಸುವುದು, ಭಾರತೀಯರ ಕರ್ತವ್ಯವಾಗಿದೆ. ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನವನ್ನು ೧೯೫೦ರ ಜ.೨೬ ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಮೂಲಭೂತ ಕರ್ತವ್ಯಗಳನ್ನು ಸಂವಿಧಾನವು ನೀಡಿ ದೆ ಎಂದರು.

ಗಣರಾಜ್ಯೋತ್ಸವವು ಭಾರತದ ಶ್ರೀಮಂತ ಇತಿಹಾಸ ಮತ್ತು ಪ್ರಜಾಸತ್ತಾತ್ಮಕ ತತ್ವಗಳಿಗೆ ಬದ್ಧತೆಗೆ ಸಾಕ್ಷಿಯಾ ಗಿದೆ. ರಾಷ್ಟ್ರವನ್ನು ಒಂದುಗೂಡಿಸುವ ಸಾಮೂಹಿಕ ಮನೋಭಾವವನ್ನು ಒಳಗೊಂಡಿರುತ್ತದೆ. ಸ್ವಾತಂತ್ರ್ಯ ಸಿಕ್ಕ ದಿನವನ್ನು ಎ? ಸಂಭ್ರಮದಿಂದ ಆಚರಿಸುತ್ತೇವೋ ಅ? ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಬೇಕು ಎಂದು ತಿಳಿಸಿದರು.

ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿ ಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತ ವಾಗಿದ್ದು ಇದರ ಗೌರವಾರ್ಥವಾಗಿ ಇಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು.

ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಭಾರತ ಸ್ವತಂತ್ರಗೊಂಡು ತನ್ನದೇ ಅಸ್ತಿತ್ವ, ಗುರು ತು ರೂಪಿಸಿಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ. ಅ? ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾ ರವನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವೆಂದು ಸ್ಮರಿಸುತ್ತೇವೆ ಎಂದರು.

ದೇಶದ ಏಕತೆಯನ್ನು ಸಾರುವ ನಿಟ್ಟಿನಲ್ಲಿ ಹಾಗೂ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ದೃಷ್ಟಿ ಯಿಂದ ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ ಕೊಡುಗೆ ನೀಡಿದ ದಿನವಾಗಿದ್ದು ದೇಶದ ಪ್ರಜೆಗಳು ಸಂವಿಧಾ ನದಡಿಯಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಬೇಕು ಎಂ ದರು.

ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ದಸಂಸ ಮುಖಂಡರಾದ ಸಂತೋಷ್ ಲಕ್ಯಾ, ಸುರೇಂದ್ರ, ಮಂಜುನಾಥ್ ನಂಬಿಯಾರ್, ಹೊನ್ನೇಶ್, ಹುಣಸೇಮಕ್ಕಿ ಲಕ್ಷ್ಮಣ್, ಹಿರೇಮಗಳೂರು ರಾಮಚಂದ್ರ, ಸುಭಾಶ್, ಮಹೇಶ್, ಪಳಣಿ ಮತ್ತಿತರರು ಹಾಜರಿದ್ದರು.

Floral tribute to BR Ambedkar statue as part of Republic Day celebrations

About Author

Leave a Reply

Your email address will not be published. Required fields are marked *