September 16, 2024

ವಿಜೃಂಭಣೆಯಿಂದ ಜರುಗಿದ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ

0
ವಿಜೃಂಭಣೆಯಿಂದ ಜರುಗಿದ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ

ವಿಜೃಂಭಣೆಯಿಂದ ಜರುಗಿದ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ

ಚಿಕ್ಕಮಗಳೂರು: ಸಮಸ್ತ ನಾಗರೀಕರ ಲೋಕ ಕಲ್ಯಾಣಕ್ಕಾಗಿ ಶ್ರೀ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ ಕಾರ್ಯಕ್ರಮವನ್ನು ಕಳೆದ ೧೦ ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ತಿಳಿಸಿದರು.

ಅವರು ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ದೇವಾಂಗ ಸಂಘದ ಹಾಗೂ ಬನಶಂಕರಿ ಆಡಳಿತ ಮಂಡಳಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.

ಇದರ ಅಂಗವಾಗಿ ಹೋಮ-ಹವನ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದ್ದು, ಸಂಜೆ ೭ ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬನಶಂಕರಿ ಅಮ್ಮನವರ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಈ ಕಾರ್ಯಕ್ರಮದ ಅಂಗವಾಗಿ ನಡೆದ ಹೋಮ-ಹವನವನ್ನು ಹಿರೇಮಗಳೂರಿನ ಅನಂತ ಶರ್ಮ ಮತ್ತು ತಂಡದವರು ನೆರವೇರಿಸಿದರು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಭಾಗವಹಿಸಿದ್ದರು.

ಈ ಕಾರ್ಯದಲ್ಲಿ ಸಂಭ್ರಮದಿಂದ ಭಾಗವಹಿಸಿದ ಅಮ್ಮನವರ ಭಕ್ತರಿಗೆ ಹಾಗು ದೇವಾಂಗ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಬನಶಂಕರಿ ಆಡಳಿತ ಮಂಡಳಿ ಸದಸ್ಯರ ಸಹಕಾರಕ್ಕೆ ತುಂಬ ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಸಹ ಕಾರ್ಯದರ್ಶಿಗಳಾದ ಪ್ರಕಾಶ್, ಗೌರೀಶ್, ಲೋಕೇಶ್, ಖಜಾಂಚಿ ಜೆ.ರವಿಕುಮಾರ್, ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕ ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

The full moon of Banashankari Amman’s Bana filled with exuberance

About Author

Leave a Reply

Your email address will not be published. Required fields are marked *