September 16, 2024

ವಿಜೃಂಭಣೆಯಿಂದ ಜರುಗಿದ ಶ್ರೀ ಶನೇಶ್ವರಸ್ವಾಮಿಯ ೨೩ನೇ ವಾರ್ಷಿಕೋತ್ಸವ

0
ಶ್ರೀ ಶನೇಶ್ವರಸ್ವಾಮಿ ದೇವಾಲಯ

ಶ್ರೀ ಶನೇಶ್ವರಸ್ವಾಮಿ ದೇವಾಲಯ

ಚಿಕ್ಕಮಗಳೂರು:  ನಗರದ ರಾಮನಹಳ್ಳಿ ಸಮೀಪದ ಶ್ರೀ ಶನೇಶ್ವರಸ್ವಾಮಿ ದೇವಾಲಯದ ೨೩ನೇ ವಾರ್ಷಿಕೋತ್ಸವ ಮಹೋತ್ಸವವು ಶನಿವಾರ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ಕೈಂಕಾರ್ಯಗಳ ಮುಖಾಂತರ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

ಇಂದು ಮುಂಜಾನೆಯಿಂದಲೇ ವಿಗ್ರಹ ಮೂರ್ತಿಗೆ ಬಣ್ಣದ ಹೂವುಗಳಿಂದ ಅಲಂಕಾರಗೊಳಿಸಿ ಹೋ ಮ-ಹವನ ಸೇರಿದಂತೆ ಸಾಂಪ್ರದಾಯಿಕ ಪೂಜಾವಿಧಿವಿಧಾನಗಳನ್ನು ನಡೆಸಲಾಯಿತು. ಮಹಾಮಂಗಳಾರತಿ ಬಳಿಕ ಮಯೂರಿಗಾನ ಸುಗಮ ಸಂಗೀತ ತಂಡದಿಂದ ದೇವಾಲಯ ಮುಂಭಾಗದಲ್ಲಿ ಭಕ್ತಿಗೀತೆ ಗಾಯನ ನಡೆಯಿತು.

ವಾರ್ಷಿಕೋತ್ಸವ ಮಹೋತ್ಸವದಲ್ಲಿ ರಾಮನಹಳ್ಳಿ ಸುತ್ತಮುತ್ತಲಿನ ನೂರಾರು ಮಹಿಳೆಯರು, ವೃದ್ದರು ಹಾಗೂ ಮಕ್ಕಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ಮಧ್ಯಾಹ್ನ ೧೨.೪೫ಕ್ಕೆ ಸಾರ್ವಜನಿಕ ಅನ್ನಸಂ ಪರ್ತಣೆ ನಡೆಯಿತು. ಮಧ್ಯಾಹ್ನ ೩.೩೦ ರಿಂದ ಶ್ರೀ ಶನೇಶ್ವರ ಸ್ವಾಮಿಯವರ ಕಥಾ ಕಲಾಕ್ಷೇಪ ನಡೆಯಿತು.

ಈ ವೇಳೆ ದೇವಾಲಯದ ಅರ್ಚಕ ರಾಧಾಕೃಷ್ಣ ಮಾತನಾಡಿ ಎರಡು ದಿನಗಳಿಂದಲೂ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ನಡೆಸಲಾಗುತ್ತಿದ್ದು, ನಿನ್ನೆ ಶ್ರೀ ಸ್ವಾಮಿಯವರಿಗೆ ವಿಶೇಷ ಅಭಿಷೇಕ ಜರುಗಿತು. ಕೊನೆಯ ದಿನವಾದ ಇಂದು ಪ್ರಸನ್ನಭಟ್ರು ನೇತೃತ್ವದಲ್ಲಿ ನವಗ್ರಹ, ಗಣಪತಿ, ಕಲಾ, ಶನೇಶ್ವರ ಹೋಮ ಹಾಗೂ ಪುರ್ಣಾಹುತಿ ನಡೆಯಿತು.

ಕಳೆದ ೨೩ ವರ್ಷಗಳಿಂದ ನಿರಂತರವಾಗಿ ಶ್ರೀ ಶನೇಶ್ವರ ಸ್ವಾಮಿ ಪೂಜಾ ಕಾರ್ಯದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಪ್ರತಿವರ್ಷವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ವಾರ್ಷಿಕೋತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡ ದಶರಥರಾಜ್ ಅರಸ್ ಸೇರಿದಂತೆ ಮತ್ತಿತರರಿದ್ದರು.

23rd anniversary of Shri Shaneswaraswamy celebrated with grandeur

About Author

Leave a Reply

Your email address will not be published. Required fields are marked *