September 16, 2024

ನಗರದಲ್ಲಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ನಿರ್ಮಾಣ

0
ನಗರದಲ್ಲಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ನಿರ್ಮಾಣ

ನಗರದಲ್ಲಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ನಿರ್ಮಾಣ

ಚಿಕ್ಕಮಗಳೂರು: : ನಗರಸಭೆ ಎಸ್.ಎಫ್.ಸಿ ಅನುದಾನದಡಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ಆಜಾದ್ ಮೈದಾನದ ಶಾಲೆ ಮತ್ತು ಗುರುಭವನಕ್ಕೆ ಮತ್ತು ರಾಮನಹಳ್ಳಿ ಡಿ.ಆರ್ ಗ್ರೌಂಡ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ಶೌಚಾಲಯ ಉದ್ಘಾಟಿಸಿ ಮಾತನಾಡಿ ಬಹಳ ದಿನಗಳ ನಂತರ ಗುರುಭವನಕ್ಕೆ ಕಳೆಬಂದಿದ್ದು, ೧೫-೨೦ ವರ್ಷಗಳ ಹಿಂದೆ ಪಾಳುಬಿದಿದ್ದ ಶಿಕ್ಷಕರ ಭವನವನ್ನು ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ಅಭಿವೃದ್ಧಿ ಪಡಿಸಿದ್ದು, ಅದಕ್ಕೆ ಪೂರಕವಾಗಿ ಸರ್ಕಾರ ಮತ್ತು ನಗರಸಭೆ ವತಿಯಿಂದ ಶೌಚಾಲಯ ನಿರ್ಮಾಣ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಅದರ ನಿರ್ವಹಣೆ ಮತ್ತು ಬಳಕೆಯನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ತಿಳಿಸಿದರು.

ಮನೆಯ ದೇವಾಲಯ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆ ಶೌಚಾಲಯಕ್ಕೂ ಇದೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಯಾರು ಅವರ ಮನೆಯ ಶೌಚಾಲಯ ಮತ್ತು ಮನೆ ಸ್ವಚ್ಚವಾಗಿ ಇಟ್ಟುಕೊಂಡಿರುತ್ತಾರೊ ಅವರ ಮನಸ್ಸು ಮತ್ತು ದೇಹವನ್ನು ಅಷ್ಟೇ ಸ್ವಚ್ಚವಾಗಿ ಇಟ್ಟುಕೊಂಡಿರುತ್ತಾರೆ ಎಂದು ಹೇಳಲಾಗಿದೆ ಅವರ ಮಾತಿನಂತೆ ಜನರು ಇಂದು ಸ್ವಚ್ಚತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದರು.

ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ, ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ನಗರಸಭೆ ವತಿಯಿಂದ ಹೊಸ-ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನ ಸಂಪರ್ಕ ಸಭೆಗಳ ಮೂಲಕ ತಾಲ್ಲೂಕು

ಅಧಿಕಾರಿಗಳನ್ನು ನೇರವಾಗಿ ಜನರ ಬಳಿ ಕರೆತಂದು, ಜನರ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ನಗರದಲ್ಲಿ ಜನಸ್ನೇಹಿ ಆಡಳಿತವನ್ನು ನೀಡಲಾಗುವುದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲೆ ಮತ್ತು ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳ ಶ್ರಮದಿಂದ ಗುರುಭವನ ಪುನರ್ ನಿರ್ಮಾಣಗೊಂಡಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಕರ ಸಂಘ ಕಟ್ಟಲಾಗಿದೆ, ಎಲ್ಲಾ ಶಿಕ್ಷಕರು ಒಗ್ಗಟ್ಟಿನಿಂದ ನಿಸ್ವಾರ್ಥದಿಂದ ಕೆಲಸ ನಿರ್ವಹಿಸಿದಾಗ ಸಂಘಟನೆಗೆ ಶಕ್ತಿ ಬರುವುದು ಹಾಗೂ ಅಧಿಕಾರಿಗಳು ಗೌರವವನ್ನು ಕೊಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಸಭೆ ಆಯುಕ್ತ ಬಸವರಾಜ್, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್, ಜಿಲ್ಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ಪರಮೇಶ್, ಬಿಇಓ ರವೀಶ್, ಜಿಲ್ಲಾ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

The work costing Rs 15 lakh in Dantaramukki of the city

About Author

Leave a Reply

Your email address will not be published. Required fields are marked *