September 8, 2024

ಆಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ 30 ಕಾಡಾನೆಗಳ ಬೀಟಮ್ಮ ಗ್ಯಾಂಗ್ ಬೀಡು

0
ಆಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ೩೦ ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ಬೀಡು

ಆಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ೩೦ ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ಬೀಡು

ಚಿಕ್ಕಮಗಳೂರು: ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ?ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ೩೦ ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ಬೀಡು ಬಿಟ್ಟಿದ್ದು, ವಸತಿ ಶಾಲೆಯಲ್ಲಿರುವ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಆತಂಕಗೊಂಡಿದ್ದು, ವಸತಿ ಶಾಲೆಯ ಹೊರಗೆ ಪೋಷಕರು ಕಂಗಾಲಾಗಿ ಹೋಗಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬೀಟಮ್ಮ ಗ್ಯಾಂಗ್ ನೋಡಿ ಶಾಕ್ ಆಗಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ೧೪೪ ಸೆಕ್ಷನ್ ಜಾರಿ ಮಾಡಿದ್ದಾರೆ.

ನಾಳೆವರೆಗೂ ನಿಷೇಧಾಜ್ಞೆ ಜಾರಿ ಮಾಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ ಇದೀಗ ಕುಮ್ಕಿ ಆನೆಗಳನ್ನು ಬಳಸಿ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಲಿರುವ ಹಿನ್ನಲೆ ನಾಳೆ ವರೆಗೂ ಆ?ಯಂಬರ್ ವ್ಯಾಲಿ ಶಾಲೆ ಸುತ್ತಮುತ್ತಲಿನ ಮೂಗ್ತಿಹಳ್ಳಿ, ಕದ್ರಿಮಿದ್ರಿ, ರಾಂಪುರ, ನಲ್ಲೂರು ಸೇರಿದಂತೆ ೯ ಗ್ರಾಮಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಕಾಡಿಗಟ್ಟುವ ಕಾರ್ಯಾಚರಣೆಯನ್ನು ದುಬಾರೆ, ನಾಗರಹೊಳೆಯಿಂದ ಅರಣ್ಯ ಇಲಾಖೆ ಆರಂಭಿಸಲಿದೆ.

ಆ?ಯಂಬರ್ ವ್ಯಾಲಿ ವಸತಿ ಶಾಲೆಯ ಸುತ್ತಲೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಪಗಾವಲಿದ್ದಾರೆ. ೩೦ ಕಾಡಾನೆಗಳ ತಂಡದಲ್ಲಿ ಐದಾರು ಮರಿಗಳು ಇದ್ದು, ಆನೆ ಓಡಿಸೋದಕ್ಕೆ ಅರಣ್ಯ ಇಲಾಖೆ ಕೂಡ ಹಿಂದೇಟು ಹಾಕುತ್ತಿದೆ. ಮರಿಗಳಿರೋದ್ರಿಂದ ಆನೆಗಳು ಗಾಬರಿಯಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾದರೆ ದೊಡ್ಡ ಅನಾಹುತವಾಗುತ್ತೆಂದು ಅಧಿಕಾರಿಗಳು ಕೂಡ ಸಂಜೆಯಾಗೋದನ್ನೆ ಕಾಯುತ್ತಿದ್ದಾರೆ. ಸಂಜೆ ಬಳಿಕ ಆನೆ ಹೋಗುವ ದಾರಿ ಬಿಟ್ಟು ಉಳಿದ ಕಡೆ ಬಂದ್ ಮಾಡಿ ಪಟಾಕಿ ಸಿಡಿಸೋದಕ್ಕೆ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಆದರೆ, ಬಿಸಿಲಿನ ಝಳಕ್ಕೆ ಆ?ಯಂಬರ್ ವ್ಯಾಲಿ ಖಾಸಗಿ ಒಳಭಾಗದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ಯಾವ ಕಡೆಯೂ ಕದಲುತ್ತಿಲ್ಲ. ಮರದ ಕೆಳಗೆ ನಿಂತು ಕಾಲ ಕಳೆಯುತ್ತಿವೆ.

: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಟಮ್ಮ ಗ್ಯಾಂಗ್ ಕಾಡಾನೆಗಳ ದಂಡು ಭಾರಿ ಆತಂಕ ಸೃಷ್ಟಿಸಿದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮದ ಮೂಲಕ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮಕ್ಕೆ ಬೀಟಮ್ಮ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಸದ್ಯ ವಸತಿ ಶಾಲೆಯೊಳಗೆ ೨೭ ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆ ಆ?ಯಂಬರ್ ವ್ಯಾಲಿ ವಸತಿ ಶಾಲೆಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಗ್ತಿಹಳ್ಳಿ ಬಳಿ ೨೫ ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಆ?ಯಂಬರ್ ವ್ಯಾಲಿ ವಸತಿ ಶಾಲೆ ಆವರಣದಲ್ಲಿ ೨೫ ಕಾಡಾನೆಗಳ ತಂಡ ಬೀಡುಬಿಟ್ಟಿದೆ. ಕಾಡಾನೆ ಹಿಂಡು ಕಾಂಪೌಂಡ್ ಮುರಿದು ವಸತಿ ಶಾಲಾ ಆವರಣಕ್ಕೆ ಬಂದಿವೆ. ಹೀಗಾಗಿ ವಸತಿ ಶಾಲೆಯೊಳಗಿರುವ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಗೆ ವಸತಿ ಶಾಲೆಯಿಂದ ಹೊರ ಬರದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಬಂದಿರುವ ೩೦ಕ್ಕೂ ಅಧಿಕ ಕಾಡಾನೆಗಳು. ೮ಕ್ಕೂ ಅಧಿಕ ಕಾಡಾನೆಗಳು ಬೀಟಮ್ಮ ಗ್ಯಾಂಗ್ ನಿಂದ ಬೇರ್ಪಟ್ಟಿವೆ. ಹಂತಕ ಸಲಗ ಭೀಮ ಕೂಡ ಬೀಟಮ್ಮ ಗ್ಯಾಂಗ್?ನಲ್ಲಿದ್ದಾನೆ. ಎರಡು ದಿನದಿಂದ ಚಿಕ್ಕಮಗಳೂರು ಹೊರ ವಲಯದ ಗ್ರಾಮದಲ್ಲಿ ಕಾಡಾನೆಗಳು ಸಂಚಾರ ಮಾಡುತ್ತಿವೆ.

ಈ ಹಿಂದೆ ಹಲವರ ಸಾವಿಗೆ ಕಾರಣವಾಗಿರುವ ಭೀಮ ಎಂಬ ಪುಂಡನೆ ಕೂಡ ಈ ೩೦ ಆನೆಗಳ ಗ್ಯಾಂಗ್ ಸೇರಿದ್ದು ಇನ್ನಷ್ಟು ಭೀತಿ ಹೆಚ್ಚಿಸಿದೆ. ಚಿಕ್ಕಮಗಳೂರು ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇಷ್ಟು ದಿನ ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ ಭಾಗದಲ್ಲಿ ಬೀಡುಬಿಟ್ಟಿದ್ದ ಈ ಕಾಡಾನೆಗಳ ಹಿಂಡು ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಹಿಂಡು-ಹಿಂಡಾಗಿ ಬಂದಿರುವುದು ಕಾಫಿ ಹಾಗೂ ಅಡಿಕೆ ಬೆಳೆಗಾರರಲ್ಲಿ ಇನ್ನಿಲ್ಲದ ಆತಂಕ ತಂದಿದೆ. ೩೦ ಆನೆಗಳ ತಂಡ ಬಂದಿರುವುದರಿಂದ ಅರಣ್ಯ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ.

30-year-old Beetamma gang camped at Amber Valley Private Residential School

About Author

Leave a Reply

Your email address will not be published. Required fields are marked *

You may have missed