September 8, 2024

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ

0
ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಚಿಕ್ಕಮಗಳೂರು: ರಾಜ್ಯದ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮೋಸ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಗುರುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಉಚಿತ ಬಸ್ ಪ್ರಯಾಣ ಬೇಕು ಎಂದು ಕೇಳುವ ದರಿದ್ರ ಪರಿಸ್ಥಿತಿ ರಾಜ್ಯದ ಮಹಿಳೆಯರಿಗೆ ಬಂದಿರಲಿಲ್ಲ. ಆದರೂ ಜಾರಿಗೆ ತಂದ ಪರಿಣಾಮ ಈಗ ಶಾಲಾ ಮಕ್ಕಳಿಗೂ ಬಸ್ ಇಲ್ಲದ ಸ್ಥತಿ ತಲೆದೋರಿದೆ ಎಂದರು.

ರಾಜ್ಯವನ್ನು ೬ ತಿಂಗಳಿಂದ ಬರಗಾಲ ಕಾಡುತ್ತಿದೆ. ೫೦೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಕೇಳಿದರೆ ಮೋದಿ ಪರಿಹಾರ ಕೊಡಬೇಕು ಎನ್ನುತ್ತಾರೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಎನ್‌ಡಿಆರ್‌ಎಫ್ ಪರಿಹಾರ ೬೮೦೦ ರೂ. ಜೊತೆಗೆ ರಾಜ್ಯದ ೬೮೦೦ ರೂ. ಸೇರಿಸಿ ೧೩ ಸಾವಿರ ರೂ. ಪರಿಹಾರ ನೀಡಿದ್ದರು. ಇದರಿಂದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎನ್ನುವುದು ಸ್ಪಷ್ಟ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮೋದಿ ಸರ್ಕಾರ ನೀಡುವ ೬ ಸಾವಿರ ರೂ.ಗಳಿಗೆ ಯಡಿಯೂರಪ್ಪ ಅವರು ಹೆಚ್ಚುವರಿ ೪ ಸಾವಿರ ರೂ. ಸೇರಿಸಿ ರೈತರ ಖಾತೆಗೆ ೧೦ ಸಾವಿರ ರೂ. ಹಾಕುತ್ತಿದ್ದರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ೪೮ ಗಂಟೆಗಳಲ್ಲಿ ೪ ಸಾವಿರ ರೂ. ಕಡಿತ ಮಾಡಿತು ಎಂದು ದೂರಿದರು.

ಕಾಂಗ್ರೆಸ್ ದಲಿತರ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತದೆ. ಆದರೆ ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಗೌರವಯುತ ಸಂಸ್ಕಾರ ನಡೆಸಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅವರ ವಿರುದ್ಧ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದು ಕಾಂಗ್ರೆಸ್, ಅಂಬೇಡ್ಕರ್ ವಿರುದ್ಧ ಚುನಾವಣೆ ಪ್ರಚಾರ ಮಾಡಿದ್ದು ಜವಹರಲಾಲ್ ನೆಹರು. ಚುನಾವಣೆ ಸಂದರ್ಭದಲ್ಲಿ ಅಂಬೇಡ್ಕರ್ ಹೆಸರು ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷ ಅವರು ಬದುಕಿದ್ದಾಗ ಅವರ ಹೆಸರನ್ನು ಕಗ್ಗೊಲೆ ಮಾಡಿತ್ತು ಎಂದು ದೂರಿದರು.

ನಾ ಧೈನಂ, ನಾ ಪಲಾಯನಂ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದಾರೆ. ಸೋಲಿನಿಂದ ಕಾರ್ಯಕರ್ತರು ದಿಕ್ಕೆಟ್ಟು ಮನೆಯಲ್ಲಿ ಕೂರಬಾರದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೧೩೦ ರಿಂದ ೧೪೦ ಸ್ಥಾನಗಳನ್ನು ಗೆಲ್ಲಲು ಸಿದ್ಧತೆ ಮಾಡಿಕೊಳ್ಳಬೇಕು. ಒಗ್ಗಟ್ಟಿನಿಂದ ಒಂದಾಗಿ ಪ೦ಕ್ಷಕ್ಕೆ ಶಕ್ತಿ ತುಂಬಬೇಕು.

೨೦೨೪ ರ ಲೋಕಸಭಾ ಚುನಾವಣೆ ಯಾವ ಘಳಿಗೆಯಲ್ಲಾದರೂ ಘೋಷಣೆ ಆಗಬಹುದು. ಕಾಂಗ್ರೆಸ್ ಪಕ್ಷ ೨೦ ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿದೆ. ಕಳೆದ ಲೋಕಸಭಾ ಚುನವಣೆ ವೇಳೆಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿ ೨೫ ಸ್ಥಾನಗಳನ್ನು ಗೆದ್ದಿತ್ತು. ಮತದಾರರು ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್ ಬಣ್ಣದ ಮಾತುಗಳಿಗೆ, ಬೋಗಸ್ ಗ್ಯಾರಂಟಿಗಳಿಗೆ ಮರುಳಾಗುವುದಿಲ್ಲ. ೨೮ ಕ್ಕೆ ೨೮ ಕ್ಷೇತ್ರದಲ್ಲೂ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೊಂಪೆಯಾಗಿದೆ. ಹಾಲಿನ ಬೆಲೆ ೩ ರೂ. ಹೆಚ್ಚಿಸಿ ಸಂಜೆ ಕ್ವಾರ್ಟರ್ ಬೆಲೆ ೫೦ ರೂ. ಹೆಚ್ಚಿಸಿ ಪ್ರತಿ ತಿಂಗಳು ಗಂಡನಿಂದ ೩ ಸಾವಿರ ರೂ. ಕಿತ್ತುಕೊಂಡು ೨ ಸಾವಿರ ರೂ.ಗಳನ್ನು ಗ್ಯಾರಂಟಿ ಹೆಸರಲ್ಲಿ ಹೆಂಡತಿಗೆ ನೀಡುತ್ತಿದ್ದಾರೆ ಎಂದು ದೂರಿದರು.

ಬಹಳ ದಿನ ಈ ಸರ್ಕಾರ ಉಳಿಯುವುದಿಲ್ಲ. ಹಾಲು ಕುಡಿದ ಮಕ್ಕಳೇ ಉಳಿಯುವುದಿಲ್ಲ. ಲೂಟಿ ಹೊಡೆದವರು, ವಿಷ ಕುಡಿದವರು ಬದುಕುತ್ತಾರೆಯೇ ಎಂದು ಪ್ರಶ್ನಿಸಿದರು.

ಸರ್ಕಾರ ಬಂದು ೮ ತಿಂಗಳಲ್ಲಿ ಗ್ರಾ.ಪಂ.ಗಳಿಗೆ ಅಭಿವೃದ್ಧಿಗೆಂದು ನಯಾ ಪೈಸೆ ಹಣ ಬಿಡುಗಡೆ ಆಗಿಲ್ಲ. ಅನುದಾನವಿಲ್ಲದೆ ಕಾಂಗ್ರೆಸ್ ಶಾಶಕರು ಕಾದ ದೋಸೆ ಕಾವಲಿಯಂತೆ ಸುಟ್ಟು ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಚುನಾವಣೆ ಸೋಲಿನಿಂದ ವ್ಯಕ್ತಿ, ಪಕ್ಷಕ್ಕೆ ಕ್ಷಣ ಕಾಲದ ಹಿನ್ನಡೆ ಆಗಿರಬಹುದು. ನಾವು ಸಿದ್ಧಾಂತಕ್ಕಾಗಿ ಕೆಲಸ ಮಾಡುವವರು. ಯಾವ ಸಿದ್ಧಾಂತಕ್ಕಾಗಿ ಹಿರಿಯರು ಅಪಮಾನ ಅನುಭವಿಸಿ, ಬಲಿದಾನ ಮಾಡಿದ್ದಾರೋ ಆ ಸಿದ್ಧಾಂತಕ್ಕೆ ಕೆಲಸ ಮಾಡುವ ನಮ್ಮನ್ನು ಜಗತ್ತಿನ ಯಾವ ಶಕ್ತಿಯೂ ಕುಗ್ಗಿಸಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ನಮ್ಮ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ಕಾಂಗ್ರೆಸ್ ಶಾಸಕರು ನೆರವೇರಿಸುತ್ತಿದ್ದಾರೆ. ಅವರ ಯೋಗ್ಯತೆಗೆ ಹೊಸದಾಗಿ ಅಭಿವೃದ್ಧಿಗೆಂದು ಒಂದು ನಯಾಪೈಸೆ ಕೊಟ್ಟಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಅವರಿಗೆ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಬಾವುಟ ಹಸ್ತಾಂತರಿಸಿದರು. ನಿಕಟಪೂರ್ವ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ವಿದಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಪ್ರಮೋದ್ ಮಧ್ವರಾಜ್, ದೀಪಕ್ ದೊಡ್ಡಯ್ಯ, ಶಾಸಕ ಹರೀಶ್ ಪೂಂಜಾ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಸೇರಿದಂತೆ ೯ ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Inauguration ceremony of new district BJP president

About Author

Leave a Reply

Your email address will not be published. Required fields are marked *

You may have missed