September 8, 2024

ಹುಲಿಕೆರೆ ಮಾರ್ಗದ ಮೇಲೆ ಸೇತುವೆ ಕಾಮಗಾರಿ ಉದ್ಘಾಟನೆ

0
ಹುಲಿಕೆರೆ ಮಾರ್ಗದ ಮೇಲೆ ಸೇತುವೆ ಕಾಮಗಾರಿ ಉದ್ಘಾಟನೆ

ಹುಲಿಕೆರೆ ಮಾರ್ಗದ ಮೇಲೆ ಸೇತುವೆ ಕಾಮಗಾರಿ ಉದ್ಘಾಟನೆ

ಚಿಕ್ಕಮಗಳೂರು:  ರಾಜಕಾರಣ ಮತ್ತು ಅಭಿವೃದ್ಧಿ ಎರಡು ಬೇರೆ-ಬೇರೆ, ಕ್ಷೇತ್ರದ ಜನರು ಅವರ ಸೇವೆಯನ್ನು ಮಾಡಲು ಪ್ರೀತಿಯಿಂದ ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಂಡ ಪಿಳ್ಳೇನಹಳ್ಳಿ, ಹುಲಿಕೆರೆ ಮಾರ್ಗದ ಮೇಲೆ ಸೇತುವೆ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿ ಈ ಭಾಗದ ಬಹುದಿನದ ಬೇಡಿಕೆಯಾದ ಸೇತುವೆಯ ಶಂಕುಸ್ಥಾಪನೆಯನ್ನು ಹಿಂದಿನ ಸರ್ಕಾರ ನಡೆಸಲಾಗಿತ್ತು, ಇಂದು ಅದರ ಉದ್ಘಾಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದ ಜನರ ಪ್ರೀತಿಯ ಮನ್ನಣೆಗೆ ಪಾತ್ರರಾಗಿ ಮೂರು ಬಾರಿ ಸಂಸದ್ ಸದಸ್ಯರಾಗಿ ಆಯ್ಕೆಗೊಂಡ ಡಿ.ಸಿ ಶ್ರೀಕಂಠಪ್ಪ ರವರು ನನಗೆ ಮಾದರಿಯಾಗಿದ್ದು, ಅವರಂತೆಯೇ ರಾಜಕಾರಣದಲ್ಲಿ ಬದುಕುತ್ತೇನೆ ಎಂದರು.

ದೇಶದ ಪ್ರತಿನಿಧಿಗಳಾಗಿ ಒಲಂಪಿಕ್‌ನಲ್ಲಿ ೧೦೦*೪=೪೦೦ ರೀತಿಯಲ್ಲಿ ನಾಲ್ಕು ಜನರು ಪದಕ ಗೆಲ್ಲಲು ಕೊಂಡೋಯುವ ರೀತಿಯಲ್ಲಿ, ನನಗೆ ದೊರೆತಿರುವ ನಾಲ್ಕನೇ ಬ್ಯಾಟ್ ಹಿಡಿದು ಸರ್ವತೋಮುಖ ಅಭಿವೃದ್ಧಿಯತ್ತ ಕ್ಷೇತ್ರವನ್ನು ಕೊಂಡೊಯಲಾಗುವುದು, ಹಿಂದಿನ ಸರ್ಕಾರದಲ್ಲಿ ಪ್ರಾರಂಭವಾದ ಜನಪರ ಅಭಿವೃದ್ಧಿಗಳ ಯೋಜನೆಗಳಿಗೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರು ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಎಪಿಎಂಸಿ ಮಾಜಿ ಸದಸ್ಯ ಲೋಕೇಶ್, ಗ್ರಾಮದ ಮುಖಂಡರಾದ ರವಿ, ಕಲ್ಮುರಡಪ್ಪ, ಲೋಕೋಪಯೋಗಿ ಸಹಾಯಕ ಅಭಿಯಂತರರಾದ ಗವಿರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Inauguration of bridge work on Hulikere route

About Author

Leave a Reply

Your email address will not be published. Required fields are marked *

You may have missed