September 19, 2024

ಎಸ್.ಬಿದರೆ ದಲಿತ ಯುವಕನ ಮೇಲೆ ಹಲ್ಲೆ ಪ್ರಮುಖ ಆರೋಪಿ ಬಂಧನಕ್ಕೆ ಒತ್ತಾಯ

0
ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಪತ್ರಿಕಾಗೋಷ್ಠಿ

ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಎಸ್.ಬಿದರೆ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಮುಖ ಆರೋಪಿಯನ್ನು ಕೂಡಲೇ ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಗೊಲ್ಲರಹಟ್ಟಿ ಪ್ರಕರಣ ಮಾಸುವ ಮುನ್ನ ಎಸ್.ಬಿದರೆ ಗ್ರಾಮದ ದಲಿತ ಯುವಕ ಸೋಮಶೇಖರ್ ಎಂಬಾತನ ಮೇಲೆ ಮೇಲ್ವರ್ಗದ ಮಾರುತಿ, ಹೃತಿಕ್. ಗೋವಿಂದ ಶೆಟ್ಟಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಮಾರುತಿ ಮತ್ತು ಹೃತಿಕ್ ನ್ಯಾಯಾಂಗ ಬಂಧನದಲ್ಲಿದ್ದು, ಈ ಘಟನೆಗೆ ಕಾರಣನಾಗಿ ಸುಫಾರಿ ನೀಡಿರುವ ಗೋವಿಂದ ಶೆಟ್ಟಿಯನ್ನು ಬಂಧಿಸಿರುವುದಿಲ್ಲ. ಘಟನೆಗೆ ಬಳಸಿದ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಂಡಿಲ್ಲ ಎಂದು ದೂರಿದರು.

ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ೩ನೇ ಆರೋಪಿ ಗೋವಿಂದಶೆಟ್ಟಿಯನ್ನು ಕೂಡಲೇ ಬಂಧಿಸಿ ದಲಿತರಿಗೆ ನ್ಯಾಯ ಒದಗಿಸಬೇಕು ವಿಳಂಭ ಮಾಡಿದರೆ ಸಂಘಟನೆಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಚಂದ್ರು, ಗ್ರಾಮಸ್ಥರುಗಳಾದ ನವೀನ್, ಕೆ.ಟಿ ಪುನೀತ್, ರಾಜಯ್ಯ, ಮಂಜಯ್ಯ ಮತ್ತಿತರರಿದ್ದರು.

Demand for the arrest of the main accused in the attack on Dalit youth

About Author

Leave a Reply

Your email address will not be published. Required fields are marked *

You may have missed