September 7, 2024

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ 28 ಕ್ಕೆ 28 ಸ್ಥಾನಗಳಲ್ಲಿ ಗೆಲುವು

0
ನಮೋ ಬ್ರಿಗೇಡ್‌ನಿಂದ ಆಯೋಜಿಸಿದ್ದ ನಮೋ ಭಾರತ ೨.೦ ಕಾರ್ಯಕ್ರಮ

ನಮೋ ಬ್ರಿಗೇಡ್‌ನಿಂದ ಆಯೋಜಿಸಿದ್ದ ನಮೋ ಭಾರತ ೨.೦ ಕಾರ್ಯಕ್ರಮ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ೨೮ಕ್ಕೆ ೨೮ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ನಮೋ ಬ್ರಿಗೇಡ್ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಗುರುವಾರ ನಗರದ ವಿಜಯಪುರ ಗಣಪತಿ ಪೆಂಡಾಲ್‌ನಲ್ಲಿ ನಮೋ ಬ್ರಿಗೇಡ್‌ನಿಂದ ಆಯೋಜಿಸಿದ್ದ ನಮೋ ಭಾರತ ೨.೦ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ನವರಿಗೆ ದೇಶದಲ್ಲಿ ಬಿಜೆಪಿಗೆ ೪೦೦ ಸೀಟ್ ಬರುತ್ತದೆ ಎಂಬ ಭಯವಿಲ್ಲ. ಆದರೆ, ತಮ್ಮಗೆ ೪೦ಕ್ಕಿಂತ ಕಡಿಮೆ ಸೀಟ್ ಬರುತ್ತೇನೋ ಎಂಬ ಆತಂಕ ಶುರುವಾಗಿದೆ ಎಂದು ವಂಗ್ಯವಾಡಿದರು.

ನರೇಂದ್ರ ಮೋದಿ ಅವರನ್ನು ಕಂಡರೇ ಕಾಂಗ್ರೆಸ್‌ನವರು ಸೇರಿದಂತೆ ಅನೇಕರಿಗೆ ಆಗುವುದಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಬಾರದು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅಗಸ್ತ್ಯ ವೆಸ್ಟ್‌ಲ್ಯಾಂಡ್ ಸೇರಿದಂತೆ ಹಗರಣಗಳಿಂದ ಬರುವ ಹಣಕ್ಕೆ ಕಡಿವಾಣ ಬಿದ್ದಿದೆ. ಕಳೆದ ೧೦ವರ್ಷಗಳಿಂದ ಹಗರಣಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರಿಗೆ ಮೋದಿಯವರನ್ನು ಕಂಡರೇ ಆಗುವುದಿಲ್ಲ ಎಂದರು.

ನರೇಂದ್ರ ಮೋದಿಯವರನ್ನು ದ್ವೇಷಿಸಿದಷ್ಟು ಬೇರೆ ಯಾವ ಪ್ರಧಾನಿಗಳನ್ನು ಕಾಂಗ್ರೆಸ್ ಮತ್ತು ಇತರರು ದ್ವೇಷಿಸಲಿಲ್ಲ. ಕಾರಣ ಮೋದಿ ಯವರು ಅಧಿಕಾರಕ್ಕೆ ಬಂದ ಮೇಲೆ ಹಗರಣಗಳಿಗೆ ಬ್ರೇಕ್ ಹಾಕಿದರು. ಇದರಿಂದ ರಕ್ಷಣಾ ಇಲಾಖೆ ಕ್ಷೇತ್ರದಲ್ಲಿ ಮಾಫಿಯದವರು ತಿರುಗಿ ಬಿದ್ದಿದ್ದಾರೆ. ಮೋದಿಯವರು ಬಂದ ಮೇಲೆ ಫಾರ್ಮ್ ಇಂಡಸ್ಟ್ರೀಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದಾರೆ. ಆದ್ದರಿಂದ ಫಾರ್ಮ್ ಇಂಡಸ್ತ್ರೀಯವರು ಮೋದಿಯವರ ಮೇಲೆ ತಿರುಗಿ ಬಿದ್ದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ನಾನು ಮಾತನಾಡಿದರೇ ಸುಳ್ಳು ಹೇಳುತ್ತೇನೆಂದು ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ನಾನು ಸಾಕ್ಷಿ ಸಮೇತ ಬಂದಿದ್ದೇನೆ ಎಂದು ಪ್ರಾಜೆಕ್ಟರ್‌ನಲ್ಲಿ ವಿಚಾರಗಳನ್ನು ವಿವರಿಸುತ್ತಾ ತಮ್ಮ ಭಾಷಣವನ್ನು ಮುಂದೂವರೆಸಿದ ಅವರು, ದೇಶದಲ್ಲಿ ಕೋವಿಡ್ ಸಂಕಷ್ಟ ಬಂದಾಗ ನಮ್ಮ ದೇಶದಲ್ಲೇ ವ್ಯಾಕ್ಸಿನ್ ಕಂಡು ಹಿಡಿದು ಇಲ್ಲಿನ ಜನತೆಗೆ ಉಚಿತವಾಗಿ ನೀಡುವಂತಹ ಕೆಲಸವನ್ನು ನರೇಂದ್ರ ಮೋದಿಯ ವರು ಮಾಡಿದರು ಎಂದು ಬಣ್ಣಿಸಿದರು.

ಕೋವಿಡ್ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಸ್ವರ ಎತ್ತಿತ್ತು. ಟೀಕೆಗಳನ್ನು ಮಾಡಿತು. ಕಾಂಗ್ರೆಸ್‌ನ ಪಿ.ಚಿದಬರಂ ಭಾತರದ ಕೋವಿಡ್ ವ್ಯಾಕ್ಸಿನ್ ಗುಣಮಟ್ಟದಲ್ಲಿ ಇಲ್ಲ. ದೇಶದ ಜನತೆಗೆ ಕೊಡುವಷ್ಟು ವ್ಯಾಕ್ಸಿನ್ ಇಲ್ಲವೆಂದಿದ್ದರು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ತಾವೇ ಮೊದಲು ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ದೇಶದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಿದರು ಎಂದರು.

ನೋಟು ಅಮಾನ್ಯಕರಣವಾದ ನಂತರ ಭಾರತದ ಆರ್ಥಿಕತೆ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ, ಪಾಕಿಸ್ತಾನ ದಿವಾಳಿಯಾಯಿತು. ಅಂದರೇ ಇದರ ಅರ್ಥವೇನು ಎಂದ ಅವರು, ಭಾರತದ ಹಣ ದುರುಪಯೋಗವಾಗುತ್ತಿದ್ದನ್ನು ತಡೆಗಟ್ಟುವಂತಹ ನಮ್ಮ ದೇಶ ಆರ್ಥಿಕವಾಗಿ ಬೆಳವಣಿಗೆ ಕಾಣಲು ಮೋದಿ ಅವರು ಕಾರಣೀಭೂತರಾದರು ಎಂದರು.

ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಡ್ರಕ್ಸ್ ಮಾಫಿಯಾಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇತ್ತೀಚೆಗೆ ರಾಜ್ಯವೊಂದರಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಡ್ರಕ್ಸ್ ವಶಕ್ಕೆ ಪಡೆದುಕೊಳ್ಳಲಾಯಿತು. ಆ ಹಣ ಏನಾದರೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದರೇ ಅವರು ಐದು ವರ್ಷವೂ ಬಿಟ್ಟಿ ಭಾಗ್ಯಗಳನ್ನು ನೀಡಿ ನಾನು ನೀಡಿದ್ದ ಭರವಸೆ ಈಡೇರಿಸಿದ್ದೇನೆ ಎನ್ನುತ್ತಿದ್ದರು ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಗೆ ೮೦ ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ ಪಾದಯಾತ್ರೆಗೆ ಇಷ್ಟು ಖರ್ಚು ಎಂದು ಪ್ರಶ್ನಿಸಿದ ಅವರು ದೇಶದಲ್ಲಿ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾದರೇ ಮಾಫಿಯಾ, ಹಗರಣಗಳಿಗೆ ಅನುಕೂಲವಾಗುತ್ತದೆ ಎಂದು ಮಾಫಿಯಾ ಗ್ಯಾಂಗ್ ಮೋದಿಯವರನ್ನು ಕೆಳಗಿಳಿಸಲು ಮುಂದಾಗಿದ್ದಾರೆ ಆದರೆ, ನೂರು ಕೋಟಿ ಜನರು ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ಮುಂದಾಗಿದ್ದಾರೆ ಎಂದರು.

ಕಾರ್ಯಕ್ರಮವನ್ನು ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕರು ಇದ್ದರು.

In the Lok Sabha elections BJP won 28 out of 28 seats in the state

About Author

Leave a Reply

Your email address will not be published. Required fields are marked *

You may have missed