September 20, 2024

ಕಲ್ಯಾನ ನಗರ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

0
ಕಲ್ಯಾನ ನಗರ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ

ಕಲ್ಯಾನ ನಗರ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ

ಚಿಕ್ಕಮಗಳೂರು: ನಗರದ ೩೫ ವಾರ್ಡ್‌ಗಳಲ್ಲಿಯೇ ಕಲ್ಯಾಣ ನಗರ ಅಭಿವೃದ್ಧಿಯಲ್ಲಿ ಅತ್ಯುತ್ತಮ ಸುಂದರವಾದ ನಗರವನ್ನಾಗಿಸಲು ಕಟಿಬದ್ದವಾಗಿರುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.

ಅವರು ಇಂದು ಕಲ್ಯಾಣ ನಗರದಲ್ಲಿ ಶ್ರೀ ವಿನಾಯಕ ಕಲ್ಯಾಣ ನಗರ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಕಲ್ಯಾನ ನಗರ ಶ್ರೀ ಮಹಾಗಣಪತಿ ದೇವಸ್ಥಾನದ ೧೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಹೆಚ್ಚು ಮಾತನಾಡದೇ ಮಾಡುವ ಕೆಲಸ ಸಾಧನೆ ಮಾಡುವಂತಾಗಬೇಕು. ಕಲ್ಯಾಣ ನಗರ ಭಾಗದ ಜನರ ಪ್ರೀತಿ ಗೆಲ್ಲಲು ಮುಂದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಜನರ ಪ್ರೀತಿ, ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಅವರ ಪ್ರೀತಿ ಗಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಲು ಬದ್ದವಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಕಲ್ಯಾಣ ನಗರ ಭಾಗದಲ್ಲಿರುವ ಪಾರ್ಕ್‌ನ್ನು ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಬದ್ದವಾಗಿದ್ದು ಈ ಸಂಬಂಧ ಈಗಾಗಲೇ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜನತೆಗೆ ಪ್ರಕೃತಿ ಸೌದರ್ಯ ಲಭಿಸುವಂತೆ ಮಾಡಲು ಬದ್ದವಾಗಿದ್ದೇನೆಂದರು.

ಮಹಾ ಗಣಪತಿ ಅಡುಗೆ ಮನೆ ಮತ್ತು ಸಮುದಾಯ ಭವನಕ್ಕೆ ಮೊದಲ ಕಂತಿನಲ್ಲಿ ೧೦ ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ ಅವರು ಹನಿ-ಹನಿ ಕೂಡಿದರೆ ಹಳ್ಳಿ, ತೆನೆ-ತೆನೆ ಕೂಡಿದರೆ ಬಳ್ಳ ಎಂಬಂತೆ ನಿಮ್ಮೆಲ್ಲ ದಾನಿಗಳ ನೆರವು ಪರಿಶ್ರಮದೊಂದಿಗೆ ಈ ಸಮುದಾಯ ಭವನ ಮುಂದಿನ ವರ್ಷದ ವಾರ್ಷಿಕೋತ್ಸವದಲ್ಲಿ ಲೋಕಾರ್ಪಣೆಯಾಗಲಿ ಎಂದು ಹಾರೈಸಿದರು.

ಮೂಲಭೂತ ಸೌಕರ್ಯಗಳಾದ ಚರಂಡಿ, ಕುಡಿಯುವ ನೀರು, ಬೀದಿದೀಪ, ರಸ್ತೆ, ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಕಲ್ಯಾಣ ನಗರ ಭಾಗದ ಜನರ ಪ್ರೀತಿಗೆ ಪಾತ್ರರಾಗಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬಸವಣ್ಣ, ಬುದ್ದ, ಡಾ. ಬಿ.ಆರ್ ಅಂಬೇಡ್ಕರ್ ಇವರೆಲ್ಲಾ ಅಸಮಾನ್ಯರು. ’ಸರ್ವಜನಾಂಗದ ಶಾಂತಿಯ ತೋಟ’ ಎಂದು ಕುವೆಂಪುರವರು ಹೇಳಿದ್ದಾರೆ. ಯಾವುದೇ ವ್ಯಕ್ತಿ ವೃತ್ತಿಯಲ್ಲಿ ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಸಾಮಾನ್ಯರೂ ಅಸಮಾನ್ಯರಾಗುತ್ತಾರೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ನಗರಸಭೆ ವತಿಯಿಂದ ಸಿ.ಎ ನಿವೇಶನ ಮಂಜೂರು ಮಾಡಲು ಈಗ ಅವಕಾಶ ಇಲ್ಲ. ಹಿಂದೆ ಮಂಜೂರು ಮಾಡಿರುವುದರಿಂದ ದೇವಸ್ಥಾನ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಪ್ರಸನ್ನಕುಮಾರ್ ವಹಿಸಿ ಮಾತನಾಡಿದರು, ಉಪಾಧ್ಯಕ್ಷರಾದ ಡಿ.ಪಿ ಕೃಷ್ಣಮೂರ್ತಿ, ಕಾರ್ಯದರ್ಶಿ ಎನ್.ಡಿ.ದಿನೇಶ್, ಖಜಾಂಚಿ ಟಿ.ಎಸ್.ರಾಮನಾಯ್ಕ್, ನಗರಸಭೆ ಸದಸ್ಯರಾದ ಅರುಣ್‌ಕುಮಾರ್, ಇಂದಿರಾಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರಾದ ನಾಗರತ್ನ ಸದಸ್ಯರುಗಳಾದ ರವಿಕುಮಾರ್, ಕೃಷ್ಣಮೂರ್ತಿ, ಮಹೇಂದ್ರಕುಮಾರ್, ದೇವರಾಜ್, ಗಂಗಾಧರ್ ನಾಯ್ಕ, ರಮೇಶ್ ಪೈ, ದಿನೇಶ್, ಶಂಕರ್, ಪ್ರಸನ್ನಕುಮಾರ್, ಲಕ್ಷಮಣ್ ನಾಯಕ, ರಂಗೇಗೌಡ, ಓಂಕಾರಸ್ವಾಮಿ, ಶ್ರೀನಿವಾಸ್, ಸೋಮೇಶ್, ಸುರೇಶ್, ಪುಷ್ವವತಿಬಸವರಾಜ್, ಭೀಮವತಿರಾಮನಾಯ್ಕ್, ಮೀನಾಕ್ಷಿನಾರಾಯಣಪ್ಪ, ಗಿರಿಜಾನಾಗರಾಜನಾಯ್ಕ, ಪಾರ್ವತಮ್ಮರಾಜಪ್ಪ, ಭುವನಗಂಗಾಧರರ್, ನಾಗರತ್ನಲೋಕೇಶಪ್ಪ, ಗೀತಾಓಂಕಾರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.ಎನ್.ಡಿ ದಿನೇಶ್ ಸ್ವಾಗತಿಸಿ, ದೇವಿಕಾಷಡಾಕ್ಷರಿ ನಿರೂಪಿಸಿ, ಕೊನೆಯಲ್ಲಿ ಕೆ.ಜಿ ನೀಲಕಂಠಪ್ಪ ವಂದಿಸಿದರು.

Kalyana Nagar Sri Mahaganapati Temple Anniversary

About Author

Leave a Reply

Your email address will not be published. Required fields are marked *