September 20, 2024

ಫೆ.15 ಹಾಗೂ 16ರಂದು ಸಮರ್ಪಣಾ ಸಂಭ್ರಮ ಹೆಸರಲ್ಲಿ ವಿವಿಧ ಕಾರ್ಯಕ್ರಮ

0
ಸಮರ್ಪಣಾ ಟ್ರಸ್ಟ್ ನ ಅಧ್ಯಕ್ಷ ಬಿ.ಮಲ್ಲಿಕಾರ್ಜುನ ರಾವ್ ಸುದ್ದಿಗೋಷ್ಠಿ

ಸಮರ್ಪಣಾ ಟ್ರಸ್ಟ್ ನ ಅಧ್ಯಕ್ಷ ಬಿ.ಮಲ್ಲಿಕಾರ್ಜುನ ರಾವ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಗರದ ಸಾಯಿ ಮಧುವನ ಬಡಾವಣೆಯಲ್ಲಿರುವ ಸಮರ್ಪಣಾ ಟ್ರಸ್ಟ್ ಹತ್ತು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ ೧೫ ಹಾಗೂ ೧೬ ರಂದು ಸಮರ್ಪಣಾ ಸಂಭ್ರಮ ಹೆಸರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿ.ಮಲ್ಲಿಕಾರ್ಜುನ ರಾವ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ೧೫ ರಂದು ಸಂಜೆ ೪ ಗಂಟೆಗೆ ಭಜನಾ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ಒಂದು ತಂಡದಲ್ಲಿ ಕನಿಷ್ಠ ೫ ಗರಿಷ್ಠ ೧೦ ಜನ ಭಾಗವಹಿಸಬಹುದಾಗಿರುತ್ತದೆ. ಅದೇ ದಿನ ಸಂಜೆ ೫ ಗಂಟೆಯಿಂದ ರಂಗೋಲಿ ಸ್ಪರ್ಧೆ ನಡೆಯಲಿದೆ ಎಂದರು.

ಫೆಬ್ರವರಿ ೧೬ ರ ರಥಸಪ್ತಮಿಯ ದಿನದಂದು ಬೆಳಿಗ್ಗೆ ೬.೩೦ಕ್ಕೆ ಸೂರ್ಯನಮಸ್ಕಾರ ಯಜ್ಞ ನಡೆಯಲಿದೆ. ೧೦.೩೦ಕ್ಕೆ ಗಣಪತಿ ಹೋಮ ಹಾಗೂ ಸತ್ಯನಾರಾಯಣ ಪೂಜೆ ನಡೆಯಲಿದೆ. ೧೧ ಗಂಟೆಯಿಂದ ರಕ್ತದಾನ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಅಂದು ಮಧ್ಯಾಹ್ನ ೧೨ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಕಾರ್ಯವಾಹ ಪಟ್ಟಾಭಿರಾಮ್ ಅವರು ಹಾಗೂ ಕಾಫೀ ಬೆಳೆಗಾರರಾದ ಎಂ.ಆರ್. ಗುರುಮೂರ್ತಿ ಅವರು ಭಾಗವಹಿಸಲ್ಲಿದ್ದಾರೆ ಎಂದರು.

ಅದೇ ದಿನ ಸಂಜೆ ನಗರದ ಪೂರ್ವಿ ಸುಗಮ ಸಂಗೀತ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಸವ ತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನೂಪುರಾ ಅಕಾಡೆಮಿ ಆಫ್ ಫರ್ಫಾಮಿಂಗ್ ಆರ್ಟ್ಸ್‌ನ ನಿರ್ದೇಶಕರಾದ ಜ್ಯೋತಿ ಪ್ರಕಾಶ್ ಅವರು ಭಾಗವಹಿಸಲಿದ್ದಾರೆ ಎಂದರು.

ಈ ಎಲ್ಲಾ ಕಾರ್ಯಕ್ರಮಗಳು ಸಾಯಿ ಮಧುವನ ಲೇಔಟ್‌ನಲ್ಲಿರುವ ಸಮರ್ಪಣಾ ಕಾರ್ಯಲಯದಲ್ಲಿಯೇ ನಡೆಯಲಿದೆ ಎಂದರು.

ಈಗಾಗಲೇ ದಶಮಾನೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆದಿವೆ. ಮಾತ್ರವಲ್ಲದೇ ಚಿಕ್ಕಮಗಳೂರಿನ ಸ್ವಚ್ಛತೆಗೆ ಪ್ರತಿನಿತ್ಯ ಶ್ರಮಿಸುವ ನಗರಸಭೆಯ ಪೌರಕಾರ್ಮಿಕರು ಹಾಗೂ ಮನೆ ಮನೆ ಕಸ ಸಂಗ್ರಹಣೆ ಮಾಡುವ ನಿರ್ಮಲಾ ಭಾರತೀ ಟ್ರಸ್ಟ್‌ನ ಶ್ರಮಿಕರೊಂದಿಗೆ ಸಹ ಭೋಜನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.

ಸಮರ್ಪಣಾ ಟ್ರಸ್ಟ್ ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯತೆಯೊಂದಿಗೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಚಟುವಟಿಕೆ ಮಾಡುತ್ತಾ ಮುನ್ನಡೆಯುತ್ತಿದೆ. ಜನಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಮನೆ ಮನೆಗೆ ತರಕಾರಿ ವ್ಯಾಪಾರ ಮಾಡಿದ್ದು, ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಟ್ರಸ್ಟ್ ಮೂಲಕ ಸೇವಾಕಾರ್ಯ ನಡೆಸಲಾಗಿತ್ತು ಎಂದು ಹೇಳಿದರು.

ಟ್ರಸ್ಟಿಗಳಾದ ಎನ್.ಟಿ.ವೇಣುಗೋಪಾಲ ರಾವ್, ಎಂ.ಸಿ.ಪವಿತ್ರ ಹಾಗೂ ರುದ್ರೇಶ್ ಕಡೂರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

On February 15th and 16th various programs in the name of dedication celebrations

About Author

Leave a Reply

Your email address will not be published. Required fields are marked *