September 20, 2024

ಮಹಿಳೆಯರು ತಮ್ಮದೇ ಆದ ವಿಶಿಷ್ಟ ಸಾಧನೆ ಮಾಡಿದ್ದಾರೆ

0
ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದ ೭ ನೇ ವಾರ್ಷಿಕೋತ್ಸವ

ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದ ೭ ನೇ ವಾರ್ಷಿಕೋತ್ಸವ

ಚಿಕ್ಕಮಗಳೂರು-ಯಾವುದೇ ಸಮಾಜದ ಶಕ್ತಿ ಎಂದರೆ ಅದು ಸಂಘಟನೆ, ಸಂಘಟಿತರಾದರೆ ಮಾತ್ರ ಆ ಸಮಾಜಕ್ಕೆ ನ್ಯಾಯ ದೊರಯುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದ ೭ ನೇ ವಾರ್ಷಿಕೋತ್ಸವ ಹಾಗೂ ಎಸ್ಸೆಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುರುಹಿನ ಶೆಟ್ಟಿ ಕುರುಹುನ ಶೆಟ್ಟಿ ಮಹಿಳಾ ಸಂಘ ಸಂಘಟಿತವಾಗಿ, ಸಮಾಜಮುಖಿಯಾಗಿ ಬೆಳೆದಿದೆ. ಈ ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಯಿಂದ ಹಿಡಿದು ಮಾಜಿ ರಾಷ್ಟ್ರಪತಿ ಪ್ರತಿಭಾಪಾಟೀಲ್,ವಿಜ್ಞಾನಿ ಕಲ್ಪನಾಚಾವ್ಲ ಮತ್ತಿತರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲದಂತೆ ಕೆಲಸ ಮಾಡಿದ್ದಾರೆ.ಎಲ್ಲ ರಂಗದಲ್ಲೂ ಮಹಿಳೆಯರು ತಮ್ಮದೇ ಆದ ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದರು.

ಮಕ್ಕಳು ಶಿಕ್ಷಣದಲ್ಲಿ ಉತ್ತಮ ಅಂಕ ತೆಗೆದಾಗ ಅವರನ್ನು ಪ್ರೋತ್ಸಾಹಿಸುವುದು ಉತ್ತಮ ಕಾರ್ಯ. ಇದರಿಂದ ಆ ವಿದ್ಯಾರ್ಥಿಗಳು ಮುಂದೆ ಸಮಾಜಮುಖಿಯಾಗಿ ಬೆಳೆಯುತ್ತಾರೆ. ಕುರುಹಿನ ಶೆಟ್ಟಿ ಮಹಿಳಾಸಂಘಕ್ಕೆ ನಿವೇಶನ ಕೊಡುವ ಬಗ್ಗೆ ಜಿಲ್ಲಾಕಾರಿ ಗಮನಕ್ಕೆ ತಂದು ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ನೀಲಕಂಟೇಶ್ವರ ಸಂಘಕ್ಕೆ ಈಗಾಗಲೇ ನಿವೇಶನ ಮಂಜೂರಾಗಿದ್ದು ಅದಕ್ಕೆ ಅನುದಾನ ಕೊಡಿಸುತ್ತೇನೆ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ಈ ಸಮಾಜದ ಮೇಲೆ ನನಗೆ ಅತ್ಯಂತ ಗೌರವವಿದೆ. ಶಾಸಕ ತಮ್ಮಯ್ಯ ಅವರು ಈಗ ನಿವೇಶನ ನೀಡವ ಭರವಸೆ ನೀಡಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ ಎಂದರು. ಮಹಿಳೆ ಅತ್ತೆಯಾಗಿ, ಮಗಳಾಗಿ, ಸೊಸೆಯಾಗಿ ಸಂಸಾರದ ಕಣ್ಣಾಗಿ ಕೆಲಸ ಮಾಡುತ್ತಾಳೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಇಂದು ಮುಂದೆ ಇದ್ದಾರೆ ಎಂದರು.

ಸಮಾಜಸೇವಕಿ ಪಲವಿ ಸಿ.ಟಿ.ರವಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಹೆಚ್ಚು ಪ್ರಾತಿನಿಧ್ಯ ಇದೆ. ಎಲ್ಲ ಕಷ್ಟವನ್ನು ಹೊರುವುದೇ ಹೆಣ್ಣು. ಹೀಗಾಗಿ ಭೂಮಿಯನ್ನು ತಾಯಿಗೆ ಹೋಲಿಸಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.

ಹಿರೇಮಗಳೂರು ಕಣ್ಣನ್ ಮಾತನಾಡಿ, ಶಾಸಕ ಎಚ್.ಡಿ.ತಮ್ಮಯ್ಯ ಅವರ ಕೈಯಲ್ಲೇ ಇಂದು ದೀಪ ಹಚ್ಚಿಸಿರುವುದಕ್ಕೆ ಕಾರಣವಿದೆ. ಅವರ ಸರಕಾರ ೫ ಗ್ಯಾರಂಟಿ ಕೊಟ್ಟಿದೆ. ಮಹಿಳಾ ಸಂಘಕ್ಕೆ ೬ ನೇ ಗ್ಯಾರಂಟಿಯಾಗಿ ಸಂಘದ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.

ಕುರುಹಿನ ಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಸಂಘದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್, ತರೀಕೆರೆ ಕುರುಹಿನ ಶೆಟ್ಟಿ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ದಾನಿ ಸೋಮಶೇಖರ್ ಮಾತನಾಡಿದರು.

ಸಂಘದ ಗೌರವಾಧ್ಯಕ್ಷೆ ಚಂದ್ರಾವತಿ ಶಂಕರ್, ಉಪಾಧ್ಯಕ್ಷೆ ಪದ್ಮಾಮಹೇಶ್, ಕಾರ್ಯದರ್ಶಿ ತನುಜಾಶಿವಶಂಕರ್, ಸಹಕಾರ್ಯದರ್ಶಿ ಪ್ರತಿಮಾವೆಂಕಟೇಶ್, ಖಜಾಂಚಿ ಪ್ರಿಯಾಪರಮೇಶ್ ಹಾಗೂ ಸಂಘದ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಲತಾಧರಣೇಶ ನಿರೂಪಿಸಿ, ತನುಜಾಶಿವಶಂಕರ್ ಸ್ವಾಗತಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಶೇ.೮೫ ಕ್ಕಿಂತ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

7th Anniversary of District Kuru Shetty Mahila Sangh

 

About Author

Leave a Reply

Your email address will not be published. Required fields are marked *