September 20, 2024

ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಜೆವಿಎಸ್ ವಿದ್ಯಾರ್ಥಿನಿ ಮೈತ್ರೇಯಿಗೆ ಪ್ರಥಮ ಸ್ಥಾನ

0
ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಜೆವಿಎಸ್ ವಿದ್ಯಾರ್ಥಿನಿ ಮೈತ್ರೇಯಿಗೆ ಪ್ರಥಮ ಸ್ಥಾನ

ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಜೆವಿಎಸ್ ವಿದ್ಯಾರ್ಥಿನಿ ಮೈತ್ರೇಯಿಗೆ ಪ್ರಥಮ ಸ್ಥಾನ

ಚಿಕ್ಕಮಗಳೂರು:  ಪ್ರಪಂಚದಾದ್ಯಂತ ಶಾಖೆಗಳನ್ನು ಹೊಂದಿರುವ ಅಣುವೃತ್ ವಿಶ್ವಭಾರತಿ ಸೊಸೈಟಿ ಮುಂಬೈನಲ್ಲಿ ಫೆ.೧೩ರಂದು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಜೆವಿಎಸ್ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಮೈತ್ರೇಯಿ ಕೆ.ನಿತ್ಯಾನಂದ ಮೊದಲ ಸ್ಥಾನ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಅವರು ಇಂದು ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿನಿಯ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮೈತ್ರೇಯಿ ಸಾಧನೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳೂ ಅಳವಡಿಸಿಕೊಂಡು ಪ್ರಗತಿ ಸಾಧಿಸಿ ಎಂದು ಕಿವಿಮಾತು ಹೇಳಿದರು.

ಮೈತ್ರೇಯಿ ಸಾಧನೆ ಪಡೆಯಲು ಸಹಕರಿಸಿ ಮಾರ್ಗದರ್ಶನ ಮಾಡಿದ ಶಾಲೆಯ ಶಿಕ್ಷಕ ವೃಂದವನ್ನು ಅಭಿನಂದಿಸಿದ ಅವರು, ಯಾವುದೇ ವಿ?ಯದ ಮೇಲೆ ಭಾ?ಣ ಮಾಡುವ ಅರ್ಹತೆ ಹೊಂದಿರುವ ವಿದ್ಯಾರ್ಥಿನಿಯೆಂದು ಶ್ಲಾಘಿಸಿದರು.

ಈ ವಿದ್ಯಾರ್ಥಿನಿಯ ಸಾಧನೆ ಜೆವಿಎಸ್ ಶಾಲೆಗೆ ಕಿರೀಟ ಇದ್ದ ಹಾಗೆ. ಮುಂದೆ ಈಕೆಯ ಭವಿ? ಉಜ್ವಲವಾಗಿರಲಿ ಎಂದು ಹಾರೈಸಿ, ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಸಂಸ್ಥೆ ವತಿಯಿಂದ ನೀಡಲು ಬದ್ಧವಾಗಿದ್ದು ಇದೇ ರೀತಿ ಎಲ್ಲಾ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಶಾಲೆಗೆ ತಂದೆ-ತಾಯಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಜೆವಿಎಸ್ ಶಾಲೆಯಲ್ಲಿ ಉದ್ಯೋಗಿಯಾಗಿರುವ ಪವಿತ್ರ ಕೆ.ಎನ್ ಹಾಗೂ ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ನಿತ್ಯಾನಂದ ಕೆ.ಎನ್ ದಂಪತಿಗಳ ಪುತ್ರಿಯಾಗಿದ್ದು ಈ ಯಶಸ್ಸಿಗೆ ಜೆವಿಎಸ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಶಾಲಾ ಮುಖ್ಯ ಶಿಕ್ಷಕರಾದ ಕೆ.ಸಿ.ವಿಜಿತ್, ಸಿಇಓ ಕುಳ್ಳೇಗೌಡ, ಶಿಕ್ಷಕರಾದ ಪ್ರಮಿಳಾ, ಲೀಲಾವತಿ, ದಿವ್ಯ, ಪವಿತ್ರ, ದೈಹಿಕ ಶಿಕ್ಷಕರಾದ ಶಶಿಧರ್ ಉಪಸ್ಥಿತರಿದ್ದರು.

Maitreyi a JVS student won first place in the national level speech competition

About Author

Leave a Reply

Your email address will not be published. Required fields are marked *