September 20, 2024
ಸಂವಿಧಾನದ ಜಾಗೃತಿ ಜಾಥಾ ಪ್ರಯುಕ್ತ ಸ್ವಚ್ಚತೆ ಕಾರ್ಯಕ್ರಮ

ಸಂವಿಧಾನದ ಜಾಗೃತಿ ಜಾಥಾ ಪ್ರಯುಕ್ತ ಸ್ವಚ್ಚತೆ ಕಾರ್ಯಕ್ರಮ

ಚಿಕ್ಕಮಗಳೂರು:  ಸಂವಿಧಾನದ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂವಿಧಾನದ ಜಾಗೃತಿ ಜಾಥಾದ ಉದ್ದೇಶ ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥ ಪ್ರಯುಕ್ತ ವಾಕಥಾನ್ ಕಾರ್ಯಕ್ರಮದಲ್ಲಿ ಎಂ.ಜಿ.ರಸ್ತೆಯಲ್ಲಿ ನಗರಸಭೆ ಪೌರ ಕಾರ್ಮಿಕರೊಂದಿಗೆ ಸ್ವಚ್ಚತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಮಾತನಾಡಿ ಆರೋಗ್ಯ, ಶಿಕ್ಷಣ ಸೇರಿದಂತೆ ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ವಾಕಥಾನ್‌ನಲ್ಲಿ ಭಾಗವಹಿಸಿರುವ ಎಲ್ಲಾ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

ಇಂದು ಸಂವಿಧಾನದ ಜಾಗೃತಿ ಜಾಥಾ ಪ್ರಯುಕ್ತ ಕ್ಯಾಂಡಲ್ ಜಾಥಾ, ಫ್ಲಾಗಥಾನ್, ಗಿಡ ನೆಡುವುದು, ಆಟೋ ಮತ್ತು ಸೈಕಲ್‌ನಲ್ಲಿ ತೃತಿಯ ಲಿಂಗಿಗಳಿಗೆ ಸಂವಿಧಾನ ಮತ್ತು ಸಮಾನತೆ ಕುರಿತು ವಿಚಾರ ಸಂಕೀರ್ಣ, ರಕ್ತದಾನ ಶಿಬಿರ, ಪೌರ ಸಂವಿಧಾನ, ಗೋಡೆ ಬರಹ, ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಗಾಳಿಪಟ ಮತ್ತು ಬಲೂನ್, ಆಹಾರ ಮೇಳದಂತಹ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಇಡೀ ದಿನ ಹಲವು ಕಾರ್ಯಕ್ರಮಗಳು ಜನರಲ್ಲಿ ಕ್ರಿಯಾತ್ಮಕ ಚಟುವಟಿಕೆ ತುಂಬಲಿವೆ ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲ್‌ಕೃಷ್ಣ ಮಾತನಾಡಿ, ಪೌರಕಾರ್ಮಿಕರಲ್ಲಿ ಸಂವಿಧಾನ ಜಾಗೃತಿ ಜಾಥಾದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಪ್ರತಿದಿನ ರಸ್ತೆ, ಚರಂಡಿ, ನಗರ ಸ್ವಚ್ಛತೆ ಮಾಡುತ್ತಿರುವ ಪೌರಕಾರ್ಮಿಕರ ಕಾಯಕ ಅತ್ಯಂತ ಪ್ರಂಶಸೆ ವ್ಯಕ್ತಪಡಿಸಿದ ಅವರು ಈ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ನೌಕರರಿಗೆ ಅಭಿನಂದಿಸಿದರು.

ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನಗರದ ನಾಲ್ಕು ಭಾಗಗಳಿಂದ ನಗರದ ಸ್ವಚ್ಛತೆ ಮಾಡಲಾಗಿದ್ದು, ಸಂವಿಧಾನದ ಬಗ್ಗೆ ಎಲ್ಲಾ ವಾರ್ಡ್‌ಗಳಲ್ಲಿಯೂ ಜಾಗೃತಿ ಮೂಡಿಸುವಂತಾಗಲಿ ಎಂದು ಹಾರೈಸಿದರು.

ಕಳೆದ ೨೫ ತಿಂಗಳಿನಿಂದ ಸತತವಾಗಿ ’ಸ್ವಚ್ಛತೆ ಇದ್ದರೆ ಆರೋಗ್ಯ’ ಎಂಬುದನ್ನು ಮನಗಂಡು ನಗರಸಭೆ ವತಿಯಿಂದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಯೋಗೀಶ್, ನಗರಸಭೆ ಆಯುಕ್ತ ಬಸವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಾಗರತ್ನ, ಜಲಜೀವನ್ ಮಿಷನ್ ಯೋಜನೆಯ ಅಧಿಕಾರಿ ವಿನಾಯಕ್, ವಾಕಥಾನ್ ಕಾರ್ಯಕ್ರಮದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Cleanliness Program for Constitution Awareness Jatha

About Author

Leave a Reply

Your email address will not be published. Required fields are marked *