September 20, 2024
ಸಾಯಿ ಶ್ಯೂರ್ ರಾಗಿ ಹೆಲ್ತ್‌ಮಿಕ್ಸ್ ವಿತರಣಾ ಕಾರ್ಯಕ್ರಮ

ಸಾಯಿ ಶ್ಯೂರ್ ರಾಗಿ ಹೆಲ್ತ್‌ಮಿಕ್ಸ್ ವಿತರಣಾ ಕಾರ್ಯಕ್ರಮ

ಚಿಕ್ಕಮಗಳೂರು:  ರಾಗಿ ಮಾಲ್ಟ್ ಸೇವನೆಯಿಂದ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ವೃದ್ದಿಯಾಗುವ ಜೊತೆಗೆ ಸದೃಢವಾಗಿ ಓದಿನಲ್ಲಿ ಚುರುಕು ಹೊಂದಿ ಶೈಕ್ಷಣಿವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಹೇಳಿದರು.

ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಸಾಯಿ ಶ್ಯೂರ್ ರಾಗಿ ಹೆಲ್ತ್‌ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆಯನ್ನು ಪ್ರಾರಂಭಿಸಲಾಗಿದ್ದು ಉತ್ತಮ ಪೌಷ್ಠಿಕಾಂಶ, ಶಿಕ್ಷಣಕ್ಕೆ ರಹದಾರಿಯಾಗಲಿದೆ. ಈ ಹಿಂದೆ ವಾರಕ್ಕೇರಡು ಮೊಟ್ಟೆ ಕೊ ಡುವ ಕಾರ್ಯಕ್ರಮ ರೂಪಿಸಿದ್ದು ಇದೀಗ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಇಂದಿನಿಂದ ಆರಂಭ ಗೊಂಡಿದೆ ಎಂದು ತಿಳಿಸಿದರು.

ಮಕ್ಕಳಿಗೆ ರಕ್ತಹೀನತೆ ಹಾಗೂ ಪೌಷ್ಠಿಕಾಂಶ ಕೊರತೆ ಉಂಟಾಗಬಾರದು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ. ಜಿಲ್ಲೆಯ ಸರ್ಕಾ ರಿ ಶಾಲೆಯ ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ದೊರೆಯಬೇಕೆಂದು ಸರ್ಕಾರ ರಾಗಿಮಾಲ್ಟ್ ಯೋಜನೆ ಆರಂಭಿಸಿದ್ದು ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟ್ಟಲು ಮುಂದಾಗಿದೆ ಎಂದರು.

ಮಕ್ಕಳು ಬಾಲ್ಯದಲ್ಲಿ ಪೌಷ್ಠಿಕ ಆಹಾರಗಳಾದ ರಾಗಿ, ಮೊಟ್ಟೆ, ಹಾಲು, ತರಕಾರಿ ಸೇರಿದಂತೆ ಇನ್ನಿತರೆ ಪದಾ ರ್ಥಗಳಿಗೆ ಅಸಡ್ಡೆವಹಿಸುವರು. ಕಾಲಕ್ರಮೇಣ ಅವುಗಳ ಮಹತ್ವ ತಿಳಿಯುವ ಮುನ್ನವೇ ಆರೋಗ್ಯ ಶರೀರಕ್ಕೆ ಪೌಷ್ಠಿಕ ಆಹಾರ ಸೇವಿಸುವುದು ಒಳ್ಳೆಯದು. ಇದರಿಂದ ಭವಿಷ್ಯದ ಬದುಕಿನಲ್ಲಿ ಇನ್ನಷ್ಟು ಸದೃಢವಾಗಿರಲು ಸಾಧ್ಯ ಎಂದು ಸಲಹೆ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಶಾಲಾಮಕ್ಕಳಿಗೆ ಆರೋಗ್ಯ ಪರೀಕ್ಷೆಯ ಬಳಿಕ ರಕ್ತಹೀನತೆ, ಅಪೌಷ್ಠಿಕತೆ ಕಾಡುತ್ತಿದೆ. ಇವುಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮಕ್ಕಳಿಗಾಗಿ ಉಣ ಬಡಿಸಿದೆ. ಹಾಲು, ಮೊಟ್ಟೆ, ಚಿಕ್ಕಿ ಬಾಳೆಹಣ್ಣು, ಇದೀಗ ರಾಗಿ ಮಾಲ್ಟ್ ವಿತರಿಸುತ್ತಿದ್ದು ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯ ವೀರೂಪಾಕ್ಷಪ್ಪ ಮಾತನಾಡಿ ಆರೋಗ್ಯಕ್ಕೆ ಪೂರಕವಾಗಿ ಪದಾರ್ಥಗಳನ್ನು ಸೇವಿ ಸುವುದು ಅತಿಮುಖ್ಯ. ವಿದ್ಯಾರ್ಥಿಗಳು ಗುಣಮಟ್ಟದ ಆಹಾರಗಳನ್ನು ಅಸಡ್ಡೆವಹಿಸದಿರಿ. ರುಚಿ ಕಡಿಮೆಯಿದ್ದರೂ ಕೂಡಾ ಪರಿಪೂರ್ಣ ಆರೋಗ್ಯಕ್ಕೆ ಸಹಕಾರಿ. ಹೀಗಾಗಿ ಹಾಲು, ಮೊಟ್ಟೆ ಹಾಗೂ ರಾಗಿಯ ವಿವಿಧ ರೀತಿಯ ಪದಾ ರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹೇಳಿದರು.

ಈಚೆಗೆ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದ ವೇಳೆಯಲ್ಲಿ ಸುಮಾರು ೧೮೦ಕ್ಕೂ ಹೆಚ್ಚು ರಕ್ತಹೀನತೆ ಕಂಡುಬಂತು. ಇದರಲ್ಲಿ ಮೂವರು ವಿದ್ಯಾರ್ಥಿಗಳು ತೀವ್ರ ಸ್ವರೂಪದ ಸಮಸ್ಯೆಯಿದ್ದ ಹಿನ್ನೆಲೆ ಯಲ್ಲಿ ಪಾಲಕರ ಗಮನಕ್ಕೆ ತರುವ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೀಗಾಗಿ ಸರ್ಕಾರ ಶಾಲೆಯ ಮಕ್ಕಳಿಗೆ ಅಪೌಷ್ಠಿಕತೆ ಉದ್ಬವಿಸದಂತೆ ಯೋಜನೆಗಳನ್ನು ರೂಪಿಸಿದೆ ಎಂದರು.

ಜಿ.ಪಂ. ಪ್ರಧಾನಮಂತ್ರಿ ಪೋಷಣ್‌ಶಕ್ತಿ ನಿರ್ಮಾಣ ಎಂಡಿಎಂ ಶಿಕ್ಷಣಾಧಿಕಾರಿ ವೈ.ಬಿ.ಸುಂದರೇಶ್ ಮಾತ ನಾಡಿ ಮಕ್ಕಳಲ್ಲಿ ರಕ್ತಹೀನತೆ ಇರಕೂಡದು ಹಾಗೂ ಭವಿಷ್ಯಕ್ಕೆ ಉತ್ತಮ ಪ್ರಜೆ ನೀಡುವ ದೃಷ್ಟಿಯಿಂದ ಜಿಲ್ಲೆಯಾದ್ಯ ಂತ ೧ ರಿಂದ ೧೦ ತರಗತಿಯ ಸುಮಾರು ೭೮ ಸಾವಿರ ಮಕ್ಕಳಿಗೆ ಪ್ರಸ್ತುತ ಸಾಲಿನಿಂದ ರಾಗಿ ಮಾಲ್ಟ್ ವಿತರಿಸಲಾ ರಂಭಿಸಿದೆ. ಮಕ್ಕಳು ಅಂಜದೇ ಮುಕ್ತವಾಗಿ ಸೇವಿಸಿ ಆರೋಗ್ಯಯುತ ಶರೀರ ನಿಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸುಮಾರು ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಹಿಸಿದ್ದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ಕಿರಣ್‌ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಸಂಘಟನಾ ಕಾರ್ಯ ದರ್ಶಿ ಬಿ.ಕೆ.ಸದಾಶಿವಮೂರ್ತಿ, ಮಾಜಿ ಅಧ್ಯಕ್ಷ ಪ್ರಭಾಕರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಡಿ.ಪ್ರಶಾಂತಿನಿ, ಸದಸ್ಯೆ ಕುಸುಮ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಚಾರ್ಯ ಸುಧಾ ಸ್ವಾಗತಿಸಿದರು. ಶಿಕ್ಷಕರಾದ ಎನ್.ಟಿ.ಮಮತ ನಿರೂಪಿಸಿದರು. ಹೆಚ್.ಎಸ್.ಸತೀಶ್ ವಂದಿಸಿದರು.

Sai Sure Ragi Healthmix Distribution Program

About Author

Leave a Reply

Your email address will not be published. Required fields are marked *