September 8, 2024

ನಿರಂತರ ಪರಿಶ್ರಮವೇ ಗ್ರಾಮಾಭಿವೃದ್ದಿ ಯಶಸ್ಸಿನ ಗುಟ್ಟು

0
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಕ್ಕಮಗಳೂರು-೨ ಯುವಜನ ಕಚೇರಿ ಉದ್ಘಾಟನೆ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಕ್ಕಮಗಳೂರು-೨ ಯುವಜನ ಕಚೇರಿ ಉದ್ಘಾಟನೆ

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜನರ ಬೇಡಿಕೆಗಳನ್ನು ಪೂ ರೈಸಿ ಜೀವನಮಟ್ಟ ಸುಧಾರಣೆಯೊಂದಿಗೆ ಸ್ವಾವಲಂಬಿ ಜೀವನಕ್ಕೆ ಕಾಯಕಲ್ಪ ನೀಡಿದೆ ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಹೇಳಿದರು.

ನಗರದ ಮಲ್ಲಂದೂರು ರಸ್ತೆ ಸಮೀಪದ ಸ್ಪೂರ್ತಿಸೌಧದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಕ್ಕಮಗಳೂರು-೨ ಯುವಜನ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಭಿವೃದ್ದಿ ಯೋಜನಾಧಿಕಾರಿಗಳ ಸೇವಾ ಕಳವಳಿ ಹಾಗೂ ಫಲಾನುಭವಿಗಳ ನಿರಂತರ ಪರಿಶ್ರಮ ಮತ್ತು ಪ್ರಯತ್ನವೇ ಯೋ ಜನೆಯ ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಿಸಿದರು.

ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳು ನೂರಾರು. ಇಂತಹ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಧರ್ಮಾಧಿಕಾರಿಗಳ ಆಶಯ. ಆ ನಿಟ್ಟಿನಲ್ಲಿ ಆಯಾ ಭಾಗದ ಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು.

ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳ ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಮಹತ್ತರ ಕಾರ್ಯ ಮಾ ಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು, ಅನಕ್ಷರಸ್ಥರು, ಕುಶಲಕರ್ಮಿಗಳು, ರೈತರ ಸಮಸ್ಯೆಗಳಿಗೆ ಪ್ರಾ ಮಾಣೀಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಯೋಜನೆಯನ್ನು ಡಾ.ವೀರೇಂದ್ರ ಹೆಗ್ಗಡೆ ಅನುಷ್ಟಾನಗೊಳಿ ಸಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುವುದರ ಜೊತೆಗೆ ಆರ್ಥಿಕ, ಶೈಕ್ಷ ಣಿಕ ಹಾಗೂ ಸಾಮಾಜಿಕ ಬಲ ನೀಡುವ ಕೆಲಸವನ್ನು ಯಶಸ್ವಿಯಾಗಿ ಪೂರೈಸುತ್ತಿದೆ ಎಂದರು.

ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಎಸ್.ಅನಿಲ್‌ಕುಮಾರ್ ಮಾತನಾಡಿ ರಾಜ್ಯ ದಲ್ಲಿ ಸುಮಾರು ಐದು ಲಕ್ಷ ಸ್ವಸಹಾಯ ಸಂಘವಿದ್ದು ೪೫ ಲಕ್ಷ ಸದಸ್ಯರ ಬಲವನ್ನು ಹೊಂದಿದೆ. ಸ್ಥಳೀಯ ಜನತೆ ಹಾಗೂ ಯೋಜನಾಧಿಕಾರಿಗಳ ಸಹಕಾರದಿಂದ ರಾಜ್ಯದಲ್ಲಿ ಅತ್ಯುತ್ತಮವಾಗಿ ಸಂಘವು ಮುನ್ನೆಡೆಯುತ್ತಿದೆ ಎಂ ದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಗೀತಾ, ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್, ಯೋಜನಾಧಿಕಾರಿಗಳಾದ ರಮೇಶ್ ನಾಯ್ಕ್, ಕೊರಗಪ್ಪ ಪೂಜಾರಿ ಹಾಗೂ ವಿವಿಧ ತಾಲ್ಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

Inauguration of Chikkamagaluru-2 Youth Office of Dharmasthala Village Development Project

About Author

Leave a Reply

Your email address will not be published. Required fields are marked *

You may have missed