September 16, 2024

ರೋಟರಿ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸ ಮಾದರಿ

0
ರೋಟರಿ ಸಮ್ಮಿಲನ-2024 ಕಾರ್ಯಕ್ರಮ

ರೋಟರಿ ಸಮ್ಮಿಲನ-2024 ಕಾರ್ಯಕ್ರಮ

ಕಳಸ: ‘ಸಮುದಾಯದ ಅಭಿವೃದ್ಧಿಯನ್ನು ಧ್ಯೇಯವಾಗಿರಿಸಿಕೊಂಡಿರುವ ರೋಟರಿ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸ ಮಾದರಿಯಾಗಿದೆ’ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಜಿ.ಭೀಮೇಶ್ವರ ಜೋಷಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ರೋಟರಿ ಸಮ್ಮಿಲನ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಮುಖಿಯಾದ ಸಾರ್ಥಕ ಜೀವನ ನಡೆಸುವ ಮೂಲಕ ದೇಶದ ಅಭಿವೃದ್ಧಿಯೂ ಸಾಧ್ಯ ಎಂಬುದನ್ನು ರೋಟರಿ ನಿರೂಪಿಸಿದೆ ಎಂದರು.

ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ಮುಂದಿನ ಪೀಳಿಗೆಗೆ ಮೌಲ್ಯಾಧಾರಿತ ಶಿಕ್ಷಣ, ಭೂ ಸಾರ ಸಂರಕ್ಷಿಸುವ ಕಾರ್ಯಕ್ರಮ ಮತ್ತು ಸುರಕ್ಷತಾ ವಾಹನ ಚಾಲನೆ ರೋಟರಿ ಪ್ರಮುಖ ಕಾರ್ಯಕ್ರಮಗಳು ಎಂದರು.

ಸಾವಿತ್ರಿ ಜೋಷಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಮುದಾಯ ದಳ ಜಿಲ್ಲಾ ಸಭಾಪತಿ ಕುಮಾರಸ್ವಾಮಿ, ವಿವಾನ್ ಡಿಸೋಜ, ಸಮ್ಮೇಳನಾಧ್ಯಕ್ಷೆ ರಾಜಲಕ್ಷ್ಮಿ ಜೋಷಿ, ಜಿಲ್ಲಾ ಪ್ರತಿನಿಧಿ ಎಚ್.ಸಿ.ಅಣ್ಣಯ್ಯ, ಹೊರನಾಡು ಘಟಕದ ಅಧ್ಯಕ್ಷ ಡಿ.ಆರ್.ಧರಣೇಂದ್ರ ಭಾಗವಹಿಸಿದ್ದರು.

‘ಜೀವನೋತ್ಸಾಹ ಮತ್ತು ಸೇವೆ’ ಗೋಷ್ಠಿಯಲ್ಲಿ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿದರು. ‘ಒಳ್ಳೆಯ ವ್ಯಕ್ತಿ ಆಗುವುದು ಹೇಗೆ’ ಎಂಬ ಗೋಷ್ಠಿಯಲ್ಲಿ ಕೆ.ಪಿ.ಪುತ್ತೂರಾಯ ಉಪನ್ಯಾಸ ನೀಡಿದರು. ‘ಪ್ರೇರಣೆ ಮತ್ತು ಸ್ಫೂರ್ತಿ’ ಗೋಷ್ಠಿಯಲ್ಲಿ ಜೇಸಿ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ಉಪನ್ಯಾಸ ನೀಡಿದರು. ಕವಿ ಪಟ್ಟಾಭಿರಾಮ್ ಸುಳ್ಯ ನಗೆ ಹನಿಗಳ ಮೂಲಕ ಮನರಂಜಿಸಿದರು.

Social work model run by Rotary organization

About Author

Leave a Reply

Your email address will not be published. Required fields are marked *