September 20, 2024
ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ

ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ

ಚಿಕ್ಕಮಗಳೂರು: ಸಾಹಿತ್ಯ ರಚನೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಸ್ವಾಸ್ಥ್ಯ ವನ್ನು ಕದಡುವಂತಾಗಬಾರದು ಎಂದು ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಉದ್ಭವ ಪ್ರಕಾಶನ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಅಂಕಣಕಾರ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.

ಬರೆಯುವಾಗ ಅರ್ಥಮಾಡಿಕೊಂಡು, ಅನುಭವಿಸಿ ಬರೆಯಬೇಕೆಂಬುದು ಮಹಾಭಾರತದ ಮುಖ್ಯ ಸಂದೇಶವಾಗಿದೆ. ದೇವಿದಾಸ್ ಬರೆದಿರುವುದು ಸ್ವಾಸ್ಥ್ಯ ಸಮಾಜದ ವಿವಿಧ ಮುಖಗಳನ್ನು ತೆರೆದಿಡುವಂಥದ್ದು. ಅದು ರಾ? ಪ್ರಜ್ಞೆಯ ಸಂಕೇತವಾಗಿದೆ. ಸಾಹಿತ್ಯ ಉತ್ತಮ ಅಂಶಗಳನ್ನು ಪಸರಿಸುವ ಮಾಧ್ಯಮವಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.

ಸ್ವಾತಂತ್ರ್ಯಾ ನಂತರ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಬಹಳ? ಸ್ಥಿತ್ಯಂತರಗಳು ನಡೆದಿವೆ. ಕಳೆದ ದಶಕದಿಂದ ಬದಲಾವಣೆಯ ಗತಿ ತೀವ್ರವಾಗಿದೆ ಎಂದರು.

ಸಾಹಿತಿ ಡಾ.ಬೆಳವಾಡಿ ಮಂಜುನಾಥ ಅಭಿಮುಖ ಎರಡು ಸಂಪುಟಗಳನ್ನು ಪರಿಚಯಿಸಿ ಒಟ್ಟು ೨೨೪ ಲೇಖನಗಳು ಸಂಕಲಿತವಾಗಿದ್ದು ಪ್ರಸಕ್ತ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕ್ರೀಡೆ, ರಾಜಕೀಯ, ಅಧ್ಯಾತ್ಮ, ಸಂಗೀತ, ಕಲೆ, ಜಾನಪದ ಹೀಗೆ ಬಹುಮುಖಿಯಾಗಿದೆ. ಎಲ್ಲಿಯೂ ಕೂಡ ನೀತಿ ಬೋಧೆಯಾಗದಂತೆ ಕಲಾತ್ಮಕವಾಗಿ ನಿರೂಪಿಸಲಾಗಿದೆ. ಯಾವುದೇ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗದ ದೇವಿದಾಸ್ ಮಹತ್ತಾದ ವಿಚಾರಗಳನ್ನೂ ಸರಳ ಮತ್ತು ಸ್ಪ?ವಾಗಿ ದಾಖಲಿಸಿದ್ದಾರೆ ಎಂದರು.

ವೈಚಾರಿಕ ಲೇಖನಗಳೇ ಅಭಿಮುಖ ಸಂಪುಟಗಳಲ್ಲಿ ಹೆಚ್ಚಾಗಿದ್ದು ವಿಶೇ? ಮಾಹಿತಿಯೊಂದಿಗೆ ವರ್ತಮಾನದ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಇದರಿಂದಾಗಿ ಈ ಸಂಪುಟಗಳು ಐತಿಹಾಸಿಕ ಮಹತ್ವ ಪಡೆದಿವೆ ಎಂದು ಅಭಿಪ್ರಾಯ ಪಟ್ಟರು.

ಮೋದಿ-ಹಳಿಹಿಡಿದ ಹಾದಿ ಕೃತಿಯನ್ನು ಪರಿಚಯಿಸಿದ ರಾಘವೇಂದ್ರ ಅವರು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಖಾಸಗೀಕರಣದ ಪ್ರಮುಖ ಉದ್ಧೇಶ. ಕಾರ್ಯಕ್ಷಮತೆಯ ಹೆಚ್ಚಳದಿಂದ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿದೆ ಎಂದರು. ಜಾಗತೀಕರಣದ ಪೈಪೋಟಿಯಲ್ಲಿ ಯುವ ಜನಾಂಗದ ರಾ?ಪ್ರೇಮ ಬಲಪಡಿಸಬೇಕಾಗಿದೆ. ಸ್ವಾತಂತ್ರ್ಯಾ ನಂತರ ದೇಶದ ಪ್ರಗತಿ ಗಣನೀಯವಾಗಿ ಹೆಚ್ಚಿದೆ. ವಿದ್ಯುನ್ಮಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಿ.ವಿ.ನರಸಿಂಹರಾವ್ ಮತ್ತು ಮೋದಿ ಅವರ ಪಾತ್ರ ಮಹತ್ವದ್ದು ಎಂಬುದನ್ನು ಈ ಪುಸ್ತಕ ದಾಖಲಿಸಿದೆ ಎಂದರು.

ಹಾಗೆ ಸುಮ್ಮನೆ ಪುಸ್ತಕವನ್ನು ಪರಿಚಯಿಸಿದ ರಂಗಕರ್ಮಿ ಮಂಜುನಾಥ ಸ್ವಾಮಿ ಮಾತನಾಡಿ ಗಾಳಿಯಲ್ಲಿ ತೂರಿ ಹೋಗುವುದನ್ನು ಹಾಳೆಯಲ್ಲಿ ಹಿಡಿದಿರಿಸಿರುವ ಮುದ್ರಣ ಮಾಧ್ಯಮ ಎಂದರು. ಸಹಜವಾಗಿ ಹರಟುವಾಗ ಗಂಭೀರ ವಿ?ಯಗಳು ಮಾತಿನ ಮಧ್ಯೆ ಹಾದು ಹೋಗುತ್ತವೆ. ಅಂಥ ಅಂಶಗಳನ್ನು ದಾಖಲಿಸಿ ಚರ್ಚೆಗೆ ಅವಕಾಶ ಮಾಡಿದೆ ಎಂದರು.

ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಮೌನ ಗಿರೀಶ್, ಜಾವಲಿನ್ ಹಾಗೂ ಥ್ರೋಬಾಲ್ ಕ್ರೀಡೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಎಂ.ಮಂದಿರ ಮತ್ತು ಸಾಹಿತಿ ಟಿ.ದೇವಿದಾಸ್ ಅವರನ್ನು ಸನ್ಮಾನಿಸಲಾಯಿತು.

ಶ್ರೀಗಳಿಗೆ ನಾಗರಿಕರ ಗುರುವಂದನೆ ಸಲ್ಲಿಸಲಾಯಿತು. ರಾಮ ಹಾಸ್ಯಗಾರ್, ಕೆ.ಯು.ವಿನೀತ್ ಕುಮಾರ್, ನಾರಾಯಣ ಮಲ್ಯ. ಜ್ಯೋತಿ ವಿನೀತ್ ಕುಮಾರ್, ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

Columnist T. Devidas presents four books to the world

About Author

Leave a Reply

Your email address will not be published. Required fields are marked *