September 20, 2024

ಮಹಿಳೆಯರು ಕ್ರಿಯಾಶೀಲರಾಗಲು ಕ್ರೀಡೆ ಅತಿ ಮುಖ್ಯ

0
ಜೆವಿಎಸ್ ಶಾಲಾ ಆವರಣದಲ್ಲಿ ಕ್ರೀಡಾ ದಿನಾಚಾರಣೆ ಕಾರ್ಯಕ್ರಮ

ಜೆವಿಎಸ್ ಶಾಲಾ ಆವರಣದಲ್ಲಿ ಕ್ರೀಡಾ ದಿನಾಚಾರಣೆ ಕಾರ್ಯಕ್ರಮ

ಚಿಕ್ಕಮಗಳೂರು: ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿರಲು ಪ್ರತಿನಿತ್ಯ ಕ್ರೀಡಾಭ್ಯಾಸ ಮಾಡಬೇಕೆಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾಪ್ರದೀಪ್ ತಿಳಿಸಿದರು.

ನಗರದ ಜೆವಿಎಸ್ ಶಾಲಾ ಆವರಣದಲ್ಲಿ ಒಕ್ಕಲಿಗರ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಮಾನಸಿಕ ಒತ್ತಡದಿಂದ ಹೊರ ಬರಲು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಸೇವೆ ಕೆಲಸಗಳನ್ನು ಮಾಡಬೇಕು, ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಿ ತಮ್ಮ ಆರೋಗ್ಯನ ಕಾಪಾಡಿಕೊಳ್ಳಬೇಕು ಎಂದರು.

ಸಂಘದ ಎಲ್ಲಾ ಮಹಿಳೆಯರಿಗು ಆಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ೫೦ ವರ್ಷ ಮೇಲ್ಪಟ್ಟವರಿಗೆ ಒಂದು ಗುಂಪು ಹಾಗೂ ೫೦ ವರ್ಷ ಒಳಗಿನವರಿಗೆ ಒಂದು ಗುಂಪನ್ನಾಗಿ ಆಟವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರು ತಮ್ಮ ಕೆಲಸ ಒತ್ತಡದ ನಡುವೆ ತಮಗೊಂದು ವಿರಾಮ, ಸಾಮಾಜಿಕ ಚಟುವಟಿಕೆ ಮತ್ತು ಮನಸ್ಸಿಗೊಂದು ತಾಜಾತನ ಪಡೆಯಲು ಮನೆಯಿಂದ ಹೊರಬರಲಾಗುತ್ತಿದ್ದು, ಇದನ್ನು ಅರಿತು ಮಹಿಳೆಯರು ಖುಷಿಯಿಂದ ಆಟವನ್ನು ಆಡಬೇಕೆಂದು ತಿಳಿಸಿದರು.

ಆಟದಲ್ಲಿ ಸೋಲು ಗೆಲುವು ಎಂಬುದು ನಿಶ್ಚಿತ, ಗೆದ್ದವರಿಗೆ ಅಭಿನಂಧನೆಗಳು ಹಾಗೂ ಸೋತವರು ಕುಗ್ಗದೆ ಮುಂದಿನ ದಿನಗಳಲ್ಲಿ ಸಿಗುವ ಅವಕಾಶದಲ್ಲಿ ಮರು ಪ್ರಯತ್ನ ಮಾಡುವ ಜೊತೆಗೆ ಎಲ್ಲರು ಒಂದೊಳ್ಳೆಯ ಬಾಂಧವ್ಯದಿಂದ ಖುಷಿಯ ಬುತ್ತಿಯನ್ನು ಮನೆಗೆ ಕೊಂಡೊಯ್ಯೊಣ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ್, ಕಾರ್ಯದರ್ಶಿ ಅಮಿತಾ ವಿಜೇಂದ್ರ, ಸಹಕಾರ್ಯದರ್ಶಿ ಕೋಮಲರವಿ, ನಿರ್ದೇಶಕರುಗಳಾದ ಮಂಜುಳಾ ಹರೀಶ್, ಚಂಪಾ ಜಗದೀಶ್, ವೇದ ಚಂದ್ರಶೇಖರ್, ಅನುಪಮ ರಮೇಶ್, ವಿನುತಪ್ರಸಾದ್, ಕೀರ್ತಿಕೌಶಿಕ್, ಸಂಧ್ಯಾನಾಗೇಶ್, ರಾಜೇಶ್ವರಿಅಭಿಷೇಕ್, ಸುನಿತಾನವೀನ್, ತನುಜಾಸುರೇಶ್ ಉಪಸ್ಥಿತರಿದ್ದರು.

Sports day program in JVS school premises

About Author

Leave a Reply

Your email address will not be published. Required fields are marked *