September 19, 2024

ಮುಖ್ಯಮಂತ್ರಿಗಳ ಭೇಟಿಯಿಂದ ಜಿಲ್ಲೆ ಇನ್ನು ಹೆಚ್ಚಿನ ಅಬಿವೃದ್ಧಿ

0
ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಭೆ

ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಭೆ

ಚಿಕ್ಕಮಗಳೂರು:  ಮುಖ್ಯಮಂತ್ರಿಗಳ ಭೇಟಿಯಿಂದ ಜಿಲ್ಲೆ ಇನ್ನು ಹೆಚ್ಚಿನ ಅಬಿವೃದ್ಧಿಯಾಗುತ್ತದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ತಿಳಿಸಿದರು.

ಸಖರಾಯಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಭಾನುವಾರ ಬರುತ್ತಿರುವ ಹಿನ್ನಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಮುಖ್ಯ ಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಅಕೃತವಾಗಿ ಭೇಟಿ ನೀಡುತ್ತಿದ್ದಾರೆ. ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ ಎಂದರು

ಚುನಾವಣೆ ಪೂರ್ವದಲ್ಲಿ ಮಾಡಿದ ಗ್ಯಾರೆಂಟಿಗಳ ಭರವಸೆಯನ್ನು ಈಡೇರಿಸಿದ್ದೇವೆ. ಮಹಿಳೆ ಸಬಲೀಕರಣವಾಗುವತ್ತ ಸರಕಾರ ಗಮನಹರಿಸಿದೆ. ಮುಖ್ಯಮಂತ್ರಿಗಳ ಭೇಟಿಯಿಂದ ಜಿಲ್ಲೆ ಇನ್ನು ಹೆಚ್ಚಿನ ಅಬಿವೃದ್ಧಿಯಾಗುತ್ತದೆ. ಬಯಲು ಭಾಗಕ್ಕೆ ಕುಡಿಯುವ ನೀರು ಮತ್ತು ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ವಿನಂತಿಸಿಕೊಂಡಿದ್ದೇನೆ ಎಂಧು ಹೇಳಿದರು

ಅದಕ್ಕೆ ಮುಖ್ಯ ಮಂತ್ರಿಗಳು ಸಮ್ಮತಿ ಸೂಚಿಸಿದಾರೆ. ಭಾನುವಾರ ನಡೆಯುವ ಗ್ಯಾರೆಂಟಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದರು.

ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತಿಶ್ ಮಾತನಾಡಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಜನಮಾನಸಲ್ಲಿದೆ. ಇದಕ್ಕೆ ಕಾರಣ ಕಾರ್ಯಕರ್ತರು. ಹಾಗಾಗಿ ಕಾರ್ಯಕರ್ತರೇ ಪಕ್ಷದ ಜೀವಾಳ ಎಂದರು.

ಐದು ಗ್ಯಾರೆಂಟಿಗಳಿಂದ ರಾಜ್ಯದ ಜನ ನೆಮ್ಮದಿಯಿಂದಿದ್ದಾರೆ. ಗ್ಯಾರೆಂಟಿ ಯೋಜನೆಗಲ ಫಲಾನುಭವಿಗಳನ್ನು ಚಿಕ್ಕಮಗಳೂರಿನಲ್ಲಿ ನಡೆಯುವ ಗ್ಯಾರೆಂಟಿ ಸಮಾವೇಶಕ್ಕೆ ನಿಮ್ಮ ನಿಮ್ಮ ಭಾಗದ ಜನರನ್ನು ಕರೆತರುವುದು ನಿಮ್ಮ ಜವಾಬ್ದಾರಿ. ಇದಕ್ಕೆ ಜಿಲ್ಲಾಡಳಿತ ಬಸ್ಸುಗಲ ವ್ಯವಸ್ಥೆಯನ್ನು ಮಾಡಿದೆ. ಸುಮಾರು ೩೦ ವರ್ಷಗಳಿಂದ ನಾವು ಕಾಂಗ್ರೆಸ್ ಎಂಎಲ್‌ಎ ಕಾಣದೆ ನೋವನ್ನು ಅನುಬವಿಸಿದ್ದೆವು. ಈಗ ಅದು ದೂರವಾಗಿದೆ. ಶಾಸಕರು ನಮ್ಮ ನೋವು ನಲಿವುಗಳಿಗೆ ಸ್ಪಂದಿಸಿ ಕಾರ್ಯಕರ್ತರ ಜೊತೆ ಇರುತ್ತಾರೆಂಬ ಆಶಾಭಾವನೆ ಎಲ್ಲರಲ್ಲಿಯೂ ಇದೆ.

ಸಣ್ಣಪುಟ್ಟ ಮನಸ್ತಾಪಗಳು ಎಲ್ಲರಲ್ಲಿಯೂ ಬರುತ್ತವೆ. ಅವೆಲ್ಲವುಗಳನ್ನು ಬದಿಗೊತ್ತಿ ಮುಖ್ಯ ಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರೇಖಾ ಹುಲಯಪ್ಪಗೌಡ, ಶಂಕರನಾಯ್ಕ, ಕಲ್ಮರುಡಪ್ಪ, ಹೇಮಾವತಿ, ಮಂಜುನಾಥ್, ಅಬ್ದುಲ್ ಅಜೀಜ್ ಹಾಗೂ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

Meeting at Block Congress office in Sakharayapatnam

About Author

Leave a Reply

Your email address will not be published. Required fields are marked *

You may have missed