September 19, 2024
ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭ

ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭ

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ವಯೋಸಹಜ ನಿವೃತ್ತಿಯಾಗುವುದು ನಿಯಮವಾಗಿದ್ದು ನಿವೃತ್ತಿ ಆಗುತ್ತಿರುವ ನಗರಸಭೆ ನೀರು ಸರಬರಾಜು ಮಾಡುತ್ತಿದ್ದ ಮೂವರು ನೌಕರರಿಗೆ ಆರೋಗ್ಯ ಕೊಟ್ಟು ಕರುಣಿಸಲಿ ಎಂದು ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾರೈಸಿದರು.

ಅವರು ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಯೋ ನಿವೃತ್ತಿ ಹೊಂದಿದ ನೀರು ವಿತರಕರಾದ ನಾಗರಾಜು, ಕೆಂಚಯ್ಯ, ಹಿರಿಯಣ್ಣಯ್ಯ ಇವರುಗಳಿಗೆ ಬೀಳ್ಕೊಡಿಗೆ ನೀಡಿ ಅಭಿನಂದಿಸಿ ಮಾತನಾಡಿದರು.

ನಗರಸಭೆ ಉದ್ಯೋಗಿಯಾಗಿ ಸಾರ್ವಜನಿಕರಿಗೆ ಪ್ರತಿ ದಿನ ತೊಂದರೆ ಆಗದಂತೆ ನೀರು ಸರಬರಾಜು ಮಾಡುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ನಗರಸಭೆಯಿಂದ ನಿವೃತ್ತಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಬದ್ದವಾಗಿರುವುದಾಗಿ ಭರವಸೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಪ್ರತಿದಿನ ಮುಂಜಾನೆ ೪ ಗಂಟೆಗೆ ಎದ್ದು ಪ್ರತಿ ಮನೆಗೆ ಆಹಾರದ ಕಿಟ್, ಹಾಲು ವಿತರಣೆ ಮಾಡುವಲ್ಲಿ ನಮ್ಮೊಂದಿಗೆ ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು.

ಸರ್ಕಾರಿ ಸೇವೆಗೆ ಸೇರುವ ದಿನವೇ ನಿವೃತ್ತಿ ದಿನ ನಿಗದಿಯಾಗಿರುತ್ತದೆ ಆದರೆ ನಾವು ಸಲ್ಲಿಸಿದ ಸೇವೆ ಜನರ ಮನಸ್ಸಿನಲ್ಲಿ ಉಳಿಯುತ್ತz. ಈ ನಿಟ್ಟಿನಲ್ಲಿ ನಗರಸಭೆ ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು.

ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಸರ್ಕಾರಿ ನೌಕರರಿಗೆ ನಿವೃತ್ತಿ ಬಯಸದೇ ಬಂದ ಭಾಗ್ಯವಾಗಿದೆ. ಸರ್ಕಾರದ ವತಿಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತಾತ್ಕಲಿಕವಾಗಿ ವರ್ಗಾವಣೆಯಾಗಿದ್ದು ಚುನಾವಣೆ ಮುಗಿದೆ ಬಳಿಕ ವಾಪಸ್ ಇಲ್ಲಿಗೆ ಬರುವುದಾಗಿ ಹೇಳಿದ ಅವರು ಎಲ್ಲರೂ ನಗರಸಭೆ ನಮ್ಮ ಮನೆ ಕುಟುಂಬದ ರೀತಿ ಒಗ್ಗಟ್ಟಿನಿಂದ ಸೇವೆ ಸಲ್ಲಿಸಿ ಎಂದು ಹೇಳಿದರು.

ಸೇವೆ ಸಲ್ಲಿಸುವಾಗ ತಪ್ಪುಗಳು ಆಗುವುದು ಸಹಜ ಅದನ್ನೇ ದೊಡ್ಡದು ಮಾಡಿ ನೌಕರರಿಗೆ ಕಿರುಕುಳ ಆಗುವ ರೀತಿ ವರ್ತಿಸಬಾರದು ಎಲ್ಲರೂ ನಮ್ಮವರೇ ಎಂಬ ಭಾವನೆ ಮೂಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ಚನ್ನಕೇಶವ, ಲೋಕೇಶ್ ನಗರಸಭೆ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

Retirement is normal in government jobs

About Author

Leave a Reply

Your email address will not be published. Required fields are marked *

You may have missed