September 20, 2024
ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಂಜೇಶ್ ಬಿ.ಆರ್ ಸುದ್ದಿಗೋಷ್ಠಿ

ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಂಜೇಶ್ ಬಿ.ಆರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲು ಬದ್ದವಾಗಿದ್ದು, ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ರಾಜಕಾರಣಿಗಳ ಕ್ರಮವನ್ನು ವಿರೋಧಿಸಿ ನನಗೆ ಮತ ನೀಡಬೇಕೆಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ನಂಜೇಶ್ ಬಿ.ಆರ್ ತಿಳಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಕರು ಎಂದಿಗೂ ಸ್ವಾಭಿಮಾನ ಬಿಡುವುದಿಲ್ಲ. ಈ ಚುನಾವಣೆ ವ್ಯಕ್ತಿಯ ಯೋಗ್ಯತೆ ಮತ್ತು ವ್ಯಕ್ತಿತ್ವ ಮುಖ್ಯವಾಗುತ್ತದೆ ಹೊರತು ಪಕ್ಷವಲ್ಲ. ಕಳೆದ ಡಿಸೆಂಬರ್ ಅಂತ್ಯದವರೆಗೆ ೧೯೩೮೦ ಶಿಕ್ಷಕರ ಹೆಸರುಗಳು ಅರ್ಹ ಮತದಾರರ ಪಟ್ಟಿಯಲ್ಲಿ ಸೇರಿದೆ ಎಂದರು.

ದೇಶದ ಹಿತದೃಷ್ಠಿಯಿಂದ ಕೇಂದ್ರಕ್ಕೆ. ರಾಜ್ಯದ ಹಿತ ದೃಷ್ಠಿಯಿಂದ ರಾಜ್ಯದಲ್ಲಿ ಸೂಕ್ತ ಪಕ್ಷ ಮತ್ತು ಅಭ್ಯರ್ಥಿಗಳನ್ನು ಆಯ್ಕೆಮಾಡುವ ರೀತಿ ಶಿಕ್ಷಕರ ಹಿತ ದೃಷ್ಠಿಯಿಂದ ಒಬ್ಬ ಯೋಗ್ಯ, ಸಮರ್ಥ, ಸೂಕ್ತ ಶಿಕ್ಷಕನನ್ನು ಬೆಂಬಲಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಶಿಕ್ಷಕರು ದುಡ್ಡಿಗೆ ಮತ ನೀಡುತ್ತಾರೆಂಬ ರಾಜಕೀಯ ಕೆಲವು ವ್ಯಕ್ತಿಗಳು ಶಿಕ್ಷಕರ ಸ್ವಾಭಿಮಾನಕ್ಕೆ ಧಕೆ ಉಂಟುಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಶಿಕ್ಷಕರ ಸ್ವಾಭಿಮಾನದ ಈ ಚುನಾವಣೆಯಲ್ಲಿ ಶಿಕ್ಷಕರೆಲ್ಲರೂ ಸೇರಿ ಒಬ್ಬ ಶಿಕ್ಷಕನನ್ನು ಆಯ್ಕೆ ಮಾಡುವುದಾದರೆ ಶಿಕ್ಷಕರ ಸಮಸ್ಯೆಗಳನ್ನು ಅರಿತಿರುವ ನನಗೆ ಆಶೀರ್ವಧಿಸಬೇಕೆಂದು ವಿನಂತಿಸಿದರು.

ಚುನಾವಣೆ ಇನ್ನು ೩ ತಿಂಗಳಲ್ಲಿ ಸಮೀಪಿಸುತ್ತಿದ್ದು, ಈ ಅವಧಿಯಲ್ಲಿ ಪ್ರತಿಯೊಬ್ಬ ಶಿಕ್ಷಕರನ್ನು ವಯಕ್ತಿಕವಾಗಿ ಭೇಟಿ ಮಾಡುವುದರ ಜೊತೆಗೆ ಮತದಾನ ನಿಮ್ಮ ಎಂಬ ಅರಿವು ಮೂಡಿಸಿ, ನೊಂದಣಿಯಾಗಿರುವ ಎಲ್ಲಾ ಶಿಕ್ಷಕರನ್ನು ಮತ ಚಲಾಯಿಸುವಂತೆ ಕೋರುತ್ತೇನೆ ಎಂದರು.

ಕಳೆದ ಬಾರಿ ಸುಮಾರು ೨೨ ಸಾವಿರ ಮತದಾರರು ನೊಂದಾಯಿಸಿದ್ದರು. ಕೇವಲ ೧೩ ಸಾವಿರ ಮತಗಳು ಚಲಾವಣೆಯಾಗಿದ್ದು, ಈಗ ಮೊಬೈಲ್ ಆಪ್ ಮೂಲಕ ಶಿಕ್ಷಕರ ಅಭಿಪ್ರಾಯಗಳನ್ನು ವೃತ್ತಿಪರವಾಗಿ ಎದುರಿಸುತ್ತಿರುವ ಸಮಸ್ಯೆಗಳು, ಅದಕ್ಕೆ ಮಾಡಬಹುದಾದ ಪರಿಹಾರಗಳನ್ನು ಕ್ರೂಢೀಕರಿಸಲಾಗುವುದೆಂದು ತಿಳಿಸಿದರು.

ಈ ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡುವುದಾಗಿ ಭರವಸೆ ನೀಡಿದ ಅವರು ರಾಜಕೀಯ ಪಕ್ಷಗಳ ಮೂಲಕ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಆ ಪಕ್ಷದ ಬೆಂಬಲಿತ ಅಭ್ಯರ್ಥಿಯೇ ಹೊರತು ಯಾವುದೇ ಪಕ್ಷದ ಚಿಹ್ನೆಗಳನ್ನು ಇಲ್ಲಿ ಬಳಸಲಾಗುವುದಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಬಲಿಗರಾದ ಹರೀಶ್, ಮನೋಜ್ ಉಪಸ್ಥಿತರಿದ್ದರು.

Committed to responding to teacher issues

About Author

Leave a Reply

Your email address will not be published. Required fields are marked *