September 19, 2024

ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವಂತೆ ಮನವಿ

0
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ

ಚಿಕ್ಕಮಗಳೂರು: ಪೊಲೀಯೋ ಮುಕ್ತ ದೇಶ ನಿರ್ಮಾಣ ಮಾಡುವ ದೃಷ್ಟಿಯಿಂದ ಪಲ್ಸ್ ಪೊಲೀಯೋ ಡ್ರಾಪ್ಸ್ ಹಾಕುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವಂತೆ ಶಾಸಕ ಎಚ್.ಡಿ.ತಮ್ಮಯ್ಯ ಮನವಿ ಮಾಡಿದರು.

ಭಾನುವಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೊಲೀಯೋ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪೊಲೀಯೋ ನಿರ್ಮೂಲನೆ ಮಾಡಲು ೧೯೯೪-೯೫ನೇ ಸಾಲಿನಲ್ಲಿ ಪ್ರಾರಂಭಿಸಿದ ಪಲ್ಸ ಪೊಲೀಯೋ ಕಾರ್ಯಕ್ರಮ ಬಹುತೇಕ ೨೦೧೪-೧೫ನೇ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ದೇಶವನ್ನು ಪಲ್ಸ್ ಪೊಲೀಯೋ ಮುಕ್ತ ಭಾರತ ಎಂದು ಘೋಷಣೆ ಮಾಡಿದ್ದು ನಮ್ಮ ದೇಶದ ದೊಡ್ಡ ಸಾಧನೆ ಯಾಗಿದೆ ಎಂದು ಶ್ಲಾಘೀಸಿದರು.

ಜಿಲ್ಲಾಡಳಿತದ ವತಿಯಿಂದ ಪಲ್ಸ್ ಪೊಲೀಯೋ ಲಸಿಕೆ ಹಾಕುವ ೮೭೦ ಬೂತ್ ಗಳನ್ನು ತೆರೆದಿದೆ. ಜಿಲ್ಲೆಯಲ್ಲಿ ೭೪,೫೯೨ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ೭೫ ಸಂಚಾರಿ ಬೂತ್ ತೆರೆಯಲಾಗಿದ್ದು, ಮಕ್ಕಳಿರುವ ಸ್ಥಳದಲ್ಲೆ ಲಸಿಕೆ ಹಾಕಲಾಗು ತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೬೧ ಕಡೆಗಳಲ್ಲಿನ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಪಾಲ್ಸ್ ಪೊಲೀಯೋ ಡ್ರಾಪ್ಸ್ ಹಾಕಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

೧೮೯೪ ತಂಡ ರಚಿಸಿ ಮನೆ ಮನೆ ತೆರಳಿ ಲಸಿಕೆ ಹಾಕುವ ಕಾರ್ಯ ವನ್ನು ಮೂರು ದಿನಗಳ ನಡೆಯಲಿದೆ ಎಂದರು.

೧೯೯೪-೯೫ ರಿಂದ ೨೦೧೪-೧೫ರ ವರೆಗೆ ಪಲ್ಸ್ ಪೊಲೀಯೋ ನಿರ್ಮೂಲನೆ ಮಾಡಬೇಕು. ಪೊಲೀಯೋ ಮುಕ್ತ ಭಾರತ ಮಾಡಬೇಕು ಎಂಬ ದೃಷ್ಟಿಯಲ್ಲಿ ಸರ್ಕಾರಗಳು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿ ಕೂಡ ಆಗಿದ್ದೇವೆ ಎಂದರು.

ಪೊಲೀಯೋ ಮುಕ್ತ ಆಗಿರು ದೇಶಗಳಲ್ಲಿ ಭಾರತ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ನಮ್ಮ ಮಕ್ಕಳು ಆರೋಗ್ಯವಂತರಾಗಿರಬೇಕು ಎಂಬುದು ಎಲ್ಲ ಪೋಷಕರಲ್ಲೂ ಇರುತ್ತದೆ. ಮಕ್ಕಳ ಆರೋಗ್ಯ ಮುಖ್ಯ ಎಂಬ ದೃಷ್ಟಿಯಿಂದ ಪೊಲೀಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ.ಸಿಇಓ ಡಾ.ಬಿ.ಗೋಪಾ ಲಕೃಷ್ಣ ಮಾತನಾಡಿ, ಜಿಲ್ಲಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಪಲ್ಸ್ ಪೊಲೀಯೋ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇಡೀ ಜಗತ್ತು ಪಲ್ಸ್ ಪೊಲೀಯೋವನ್ನು ತೊಲಗಿಸಲು ಹೋರಾಟ ಮಾಡುತ್ತಿದೆ. ಇದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಮಾತ್ರ ಜವಬ್ದಾರಿಯಲ್ಲ ಪ್ರತಿಯೊಬ್ಬರ ಜವಬ್ದಾರಿ ಯಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಸ್ವಯಂ ಪ್ರೇರಿತವಾಗಿ ಅನೇಕರು ಮುಂದೇ ಬಂದಿದ್ದಾರೆ ಎಂದರು.

ಎಲ್ಲರೂ ಒಟ್ಟುಗೂಡಿ ಪೊಲೀಯೋ ವಿರುದ್ಧ ಹೋರಾಡುವ ಅಗತ್ಯ ಇಂದಿಗೂ ಇದೆ. ಪೊಲೀಯೋ ಮುಕ್ತ ಮಾಡುವ ಅಂಚಿನಲ್ಲಿದ್ದೇವೆ. ಯಾವುದೇ ಮಗು ಪಲ್ಸ್ ಪೊಲೀಯೋದಿಂದ ವಂಚಿತವಾಗಬಾರದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ೮೭೯ ಬೂತ್ ಗಳನ್ನು ತೆರೆಯಲಾಗಿದೆ. ೭೪,೫೯೨ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ೭೫ ಮೊಬೈಲ್ ಟೀಮ್, ೬೧ ಟ್ರಾನ್ಸಿ ಟೀಮ್, ೧೮೯೪ ಟೀಮ್ ಕೆಲಸ ಮಾಡುತ್ತಿದೆ. ಜತೆಗೆ ೩೮೯೮ ಜನ ವ್ಯಾಕ್ಸಿನೇಷನ್ ಹಾಕುವವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕಾಫಿತೋಟಗಳಲ್ಲಿ ವಾಸವಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೂ ಪೊಲೀಯೋ ಲಸಿಕೆ ಹಾಕಲು ೭೬೯ ಕಡೆಗಳಲ್ಲಿ ಬೂತ್ ಗಳನ್ನು ಸ್ಥಾಪಿಸಲಾಗಿದೆ. ಇಂದು ಶೇ.೯೫ರಷ್ಟು ಗುರಿಯನ್ನು ಹೊಂದಲಾಗಿದ್ದು ಎಲ್ಲಾ ಸಿದ್ದತೆ ಗಳನ್ನು ಮಾಡಿಕೊಂಡಿದ್ದು ಯಾವುದೇ ಲೋಪದೋಷವಾಗದಂತೆ ಸಿಬ್ಬಂದಿಗಳು ಕೆಲಸ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ನೋಡಲ್ ಅಧಿಕಾರಿ ಡಾ.ಶರೀಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ಡಾ.ಮೋಹನ್ ಕುಮಾರ್, ತನೋಜ್ ನಾಯ್ಡು, ರೋಟರಿ ಇನರ್ ವ್ಹೀಲ್ ಅಧ್ಯಕ್ಷ ಶ್ರೀವಾತ್ಸವ ಹಾಗೂ ಪದಾಧಿಕಾರಿಗಳು ಇದ್ದರು.

Pulse Polio Program in District Hospital Campus

About Author

Leave a Reply

Your email address will not be published. Required fields are marked *

You may have missed