September 19, 2024

ಭಾರತ ವಿಶ್ವಪ್ರಸಿದ್ಧ ತಾಣವಾಗಲು ವಿಶ್ವಕರ್ಮರ ಕೊಡುಗೆ ಅಪಾರ

0
ಶ್ರೀ ವೈಶ್ವಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆ

ಶ್ರೀ ವೈಶ್ವಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆ

ಚಿಕ್ಕಮಗಳೂರು: ಭಾರತವು ವಿಶ್ವಪ್ರಸಿದ್ಧ ತಾಣವಾಗಿ ನೆಲೆಸಲು ವಿಶ್ಚಕರ್ಮರ ಕೊಡುಗೆ ಅಪಾರವಾದುದು. ವಿವಿಧ ಮಂದಿರಗಳಲ್ಲಿ ತನ್ನದೇ ಶೈಲಿಯ ಶಿಲ್ಪಕಲೆಯ ಮೂಲಕ ಇಡೀ ಪ್ರಪಂಚವನ್ನೇ ದೇಶದತ್ತ ತಿರುವಂತೆ ಮಾಡಿರುವ ವಿಶ್ವಕರ್ಮರ ಸೇವೆ ಅನನ್ಯ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಭಾ ವತಿಯಿಂದ ನಗರದ ಜಿಲ್ಲಾ ವಿಶ್ವಕರ್ಮ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವೈಶ್ವಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ದೇಶ ಹಾಗೂ ನಾಡಿನ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶ್ವಕರ್ಮರು ಶಿಲ್ಪಕಲೆಯ ಕೆತ್ತನೆ ಮೂಲಕ ಮನ್ನಣೆ ಗಳಿಸಿದವರು. ಬೇಲೂರು, ಹಳೇಬೀಡು ಸೇರಿದಂತೆ ಇತರೆ ದೇಗುಲಗಳಲ್ಲಿ ಅನಾದಿಕಾಲದಲ್ಲೇ ಯಾವುದೇ ತಂತ್ರಗಾರಿಕೆಯಿಲ್ಲದೇ ಕೇವಲ ಬುದ್ದಿಶಕ್ತಿಯಿಂದಲೇ ಸಾಧಾರಣ ಕಲ್ಲಿಗೆ ವಿಶಿಷ್ಟ ರೂಪ ನೀಡಿದವರು ಎಂದರು.

ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಸಿದ್ದವಾಗಿ ಗುರುತಿಸಿಕೊಂಡಿದೆ ಎಂದ ಅವರು ಕಲೆಯ ಮೂಲಕ ದೇಶದ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಹೇಳ ತೀರದು. ದೇಶದಲ್ಲಿನ ಐತಿಹಾಸಿಕ ದೇವಾಲಯದಲ್ಲಿನ ಶಿಲ್ಪಕಲೆಯ ನಿರ್ಮಾಣ ವಿಶ್ವಕರ್ಮ ಸಮುದಾಯದ ಬಹು ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್ ಆಚಾರ್ ಮಾತ ನಾಡಿ ರಾಜ್ಯದಲ್ಲಿ ಸುಮಾರು ೪೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವಕರ್ಮರು ಪ್ರಸ್ತುತ ಹಿಂದುಳಿದ ವರ್ಗವಾಗಿದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ವಿಧಾನಸಭಾ ಅಥವಾ ನಿಗಮ ಮಂಡಳಿಗಳಲ್ಲಿ ಸ್ಥಾನ ದೊ ರೆಯದಿರುವ ಬೇಸರದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹೆಚ್.ಆರ್.ಉಮಾಶಂಕರ್ ಕುಲಕಸುಬಿನ ಮೂಲಕ ದೇಶದ ಶ್ರೇ?ತೆಯನ್ನು ವಿಶ್ವಮಟ್ಟದಲ್ಲಿ ಸಾರಿದವರಲ್ಲಿ ವಿಶ್ವಕರ್ಮರು, ಸಮಾಜಕ್ಕೆ ತನ್ನದೇಯಾದ ಹಿರಿಮೆಯಿದೆ. ಸಮಾಜದಲ್ಲಿ ಏಕತೆ ಭಾವವಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ವಿಶ್ವಕರ್ಮ ಸಮಾಜವಾಗಿದೆ ಎಂದು ಹೇಳಿದರು.

ಚಿತ್ರಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಪಿ.ಜಯಣ್ಣಾಚಾರ್ ಅವರಿಗೆ ಸಭಾದಿಂದ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಬಳಿಕ ೫ ಮಂದಿ ಯುವಕರಿಗೆ ಸಾಮೂಹಿಕ ಉಪನಯನ ನಡೆಸಲಾಯಿತು.

ಇದೇ ವೇಳ ಚಿಕ್ಕಮಗಳೂರು ತಾಲ್ಲೂಕು ನೂತನ ಅಧ್ಯಕ್ಷರಾಗಿ ಕೆ.ಪಿ.ದಿವಾಕರ, ಗೌರವ ಅಧ್ಯಕ್ಷ ಕೆ.ಎನ್. ಜಗನ್ನಾಥ್, ಉಪಾಧ್ಯಕ್ಷರಾಗಿ ಲಕ್ಷ್ಮಣಚಾರ್, ಎ.ಟಿ.ಮಹೇಶ್, ಎಸ್.ವಿ.ಹರೀಶ್ ಆಚಾರ್ಯ, ಕಾರ್ಯದರ್ಶಿ ನಾಗ ಭೂಷಣಾಚಾರ್, ಖಜಾಂಚಿ ಬಿ.ಎಂ.ಇಂದ್ರೇಶ್, ಸಹ ಕಾರ್ಯದರ್ಶಿ ಅರುಣ್ ಆಚಾರ್ಯ, ಸಂಘಟನಾ ಕಾರ್‍ಯ ದರ್ಶಿ ಬಿ.ಡಿ.ದಿನೇಶ್, ಸಂತೋಷ್, ಮಂಜಾಚಾರ್ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾದ ಗೌರವಾಧ್ಯಕ್ಷ ಎಂ.ಎನ್.ವಿಠಲಾಚಾ ರ್ಯ, ಉಪಾಧ್ಯಕ್ಷ ಎಂ.ಜೆ.ಚಂದ್ರಶೇಖರ್, ಕಾರ್ಯದರ್ಶಿ ಬಿ.ಪಿ.ರತೀಶ್, ಖಜಾಂಚಿ ಬಿ.ಚಂದ್ರಶೇಖರ್, ಸಂಘಟ ನಾ ಕಾರ್ಯದರ್ಶಿಗಳಾದ ಹೆಚ್.ನಾರಾಯಣಚಾರ್, ಸಿ.ಎಸ್.ಅರುಣ್, ನಿರ್ದೇಶಕರುಗಳಾದ ಎಂ.ಜೆ.ಮಹೇಶ್ ಆಚಾರ್ಯ, ರುದ್ರಯ್ಯಚಾರ್, ಕೆ.ರಾಮಪ್ಪಚಾರ್ ಮತ್ತಿತರರು ಉಪಸ್ಥಿತರಿದ್ದರು.

Inauguration of Shri Vaishvakarman Mahayagna Collective Upanayana and Taluk Vishwakarma Sangh

About Author

Leave a Reply

Your email address will not be published. Required fields are marked *

You may have missed