September 21, 2024

ಮಾ.10ಕ್ಕೆ ಸಕಲೇಶಪುರದಲ್ಲಿ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಸಮಾವೇಶ

0
ಬಹುಜನ ಸಮಾಜಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಸುದ್ದಿಗೋಷ್ಠಿ

ಬಹುಜನ ಸಮಾಜಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಸಕಲೇಶಪುರದಲ್ಲಿ ಮಾ.೧೦ ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಹುಜನ ಸಮಾಜಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಆಗ್ರಹಿಸಲಾಗುವುದೆಂದು ಹೇಳಿದರು

ರಾಜ್ಯಸಭಾ ಸದಸ್ಯ ರಾಮ್‌ಜಿ ಗೌತಮ್,ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರಾದ ನಿತಿನ್‌ಸಿಂಗ್,ಗೋಪಿನಾಥ್, ಎಂ.ಕೃಷ್ಣಮೂರ್ತಿ ಮತ್ತಿತರೆ ಅನೇಕ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಹಿಂದೆಂದಿಗಿಂತಲೂ ಈಗ ಸಂವಿಧಾನದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಸರಕಾರ ರಚಿಸಿದಾಗಲೆಲ್ಲಾ ನಾವು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಇದರ ಒಂದು ಪ್ರಯತ್ನ ಕ್ಕೆ ೨೦೦೦ ನೇ ಸಾಲಿನಲ್ಲಿ ಕೈಹಾಕಿ ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆ ತೆಪ್ಪಗಾದರು. ಕಳೆದ ೧೦ ವರ್ಷದಲ್ಲಿ ಅವರು ಬೇರೆಯದೇ ತಂತ್ರ ಹೂಡಿ ಸಂವಿಧಾನದ ಆಶಯಗಳನ್ನು ನಾಶಮಾಡುತ್ತಿದ್ದಾರೆ ಎಂದು ಆರೋಪಿಸಿದರು. ೨ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ೨೦೧೪ ರಲ್ಲಿದ್ದ ೨.೩೮ ಎಸ್ಸಿ ಹುದ್ದೆಗಳನ್ನು ೧.೪೫ ಲಕ್ಷಕ್ಕೆ, ೧.೧೫ ಲಕ್ಷ ಇದ್ದ ಎಸ್ಟಿ ಹುದ್ದೆಗಳನ್ನು ೮೫೪೦೦ ಕ್ಕೆ, ೨.೦೬ ಲಕ್ಷ ವಿದ್ದ ಓಬಿಸಿ ಹುದ್ದೆಗಳನ್ನು ೧.೮೪ ಲಕ್ಷಕ್ಕೆ ಇಳಿಸಿರುವುದೇ ದೊಡ್ಡ ಸಾಧನೆ ಎಂದು ಟೀಕಿಸಿದರು.

ನಮ್ಮ ಸರಕಾರ ಅಕಾರಕ್ಕೆ ಬಂದಲ್ಲಿ ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿ ರಾಜ್ಯದಲ್ಲಿ ಅಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದಿಂದ ಎಸ್ಸಿಎಸ್ಟಿ ಗಳ ಮೇಲೆ ಆಗುತ್ತಿರುವ ದೌರ್ಜನ್ಯ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷೆಯ ಪ್ರಮಾಣ ಶೇ.೪ ರಷ್ಟು ಇದೆ. ಎಸ್‌ಸಿಎಸ್‌ಪಿ ಮತ್ತು ಎಸ್‌ಟಿಪಿ ಹಣವನ್ನು ಈ ಸರಕಾರ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ದೂರಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ, ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ಮತದಾರರನ್ನು ಆಕರ್ಷಣೆಗೆ ಒಳಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಕ್ರಿಯಾಶೀಲತೆ ಇಲ್ಲ.ಭ್ರಷ್ಟಾಚಾರದ ಅಬ್ಬರದಲ್ಲಿ ಬಿಎಸ್ಪಿಗೆ ಈಗ ಹಿನ್ನೆಡೆಯಾಗುತ್ತಿರಬಹುದು. ಕಾಲ ಬದಲಾದಾಗ ಜನ ಕೂಡ ನಮ್ಮ ಪಕ್ಷದ ಕಡೆ ಒಲವು ತೋರಿಸುತ್ತಾರೆ. ಮುಂದೊಂದು ದಿನ ಬಿಎಸ್ಪಿ ಅಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಬಿ.ಕೆ.ಸುಧಾ, ಬಹುಜನರ ನಡಿಗೆ ಪಾರ್ಲಿಮೆಂಟಿನ ಕಡೆಗೆ ಧ್ಯೇಯವಾಕ್ಯದಲ್ಲಿ ನಮ್ಮ ಪಕ್ಷ ಚುನಾವಣೆ ಎದುರಿಸುತ್ತದೆ ಎಂದರು. ಮುಖಂಡರಾದ ಪಿ.ಪರಮೇಶ್ವರ್, ಲೋಕವಳ್ಳಿ ರಮೇಶ್, ಕುಮಾರ್, ಮಂಜುಳ, ಕಲಾವತಿ ಇದ್ದರು.

Mysore divisional level grand conference at Sakleshpur on March 10

About Author

Leave a Reply

Your email address will not be published. Required fields are marked *