September 20, 2024
ಕನಕಶ್ರೀ ಮಹಿಳಾ ಸಮಾಜದಿಂದ ಮಹಿಳಾ ದಿನಾಚರಣೆ

ಕನಕಶ್ರೀ ಮಹಿಳಾ ಸಮಾಜದಿಂದ ಮಹಿಳಾ ದಿನಾಚರಣೆ

ಚಿಕ್ಕಮಗಳೂರು: ಮಹಿಳೆಯರ ಸಬಲೀಕರಣದಿಂದ ಮಾತ್ರ ಸಮಾಜ ಸದೃಢವಾಗಲು ಸಾಧ್ಯ ಎಂದು ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷ ಚಂದ್ರಕಲಾ ರುದ್ರೇಶ್ ಹೇಳಿದರು.

ನಗರದ ಕನಕ ಸಮುದಾಯ ಭವನದಲ್ಲಿ ಕನಶ್ರೀ ಮಹಿಳಾ ಸಮಾಜದ ೧೧ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯು ಸಂಸಾರದ ಜವಾಬ್ದಾರಿ ನೋಡಿಕೊಳ್ಳುವುದರ ಜೊತೆಗೆ ಸಾಧನೆ ಮಾಡಬೇಕೆಂದರೆ ಮನೆಯಿ ಂದ ಹೊರಬಂದು ಸಂಘಟಿತರಾಗಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯರಿಗೆ ಬೆಂಬಲ ನೀಡಬೇಕು. ಕುಟುಂಬದಲ್ಲಿ ಹೆಣ್ಣು ಗಂಡೆಂದು ತಾರತಮ್ಯ ಮಾಡದೇ ಸರಿಸಮಾನವಾಗಿ ನೋಡಬೇಕು ಎಂದು ತಿಳಿಸಿದರು.

ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಿನ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಬೇಕು. ಪ್ರತಿ ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಸತ್ಯ ವಾದ ಮಾತು. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕನಕಶ್ರೀ ಮಹಿಳಾ ಸಮಾಜದ ಉಪಾಧ್ಯಕ್ಷ ಸರೋಜಾ ಚಂದ್ರೇಗೌಡ, ಕಾರ್ಯದರ್ಶಿ ಶಾರದಾ ಮಾಸ್ತೇಗೌಡ, ಖಜಾಂಚಿ ಅನ್ನಪೂರ್ಣ ಗೋಪಾಲಕೃಷ್ಣ, ನಿರ್ದೇಶಕರುಗಳಾದ ವನಜಾಕ್ಷಿ, ಸರೋಜಾ, ಗೀತಾ, ಜಯಮ್, ಗಾಯತ್ರಿ, ಗೀತಾ, ಮಂಜುಳಾ, ಕಮಾಲಕ್ಷಮ್ಮ, ರೇಣುಕ, ಹರಿಣಿ, ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷೆ ಸರೋಜಾ ಬಸವರಾಜು ಮತ್ತಿತರರಿದ್ದರು.

Women’s Day Celebration by Kanakashree Mahila Samaj

About Author

Leave a Reply

Your email address will not be published. Required fields are marked *