September 19, 2024

ಪುನೀತ್‌ರಾಜ್‌ಕುಮಾರ್ ಆದರ್ಶ ಮೈಗೂಡಿಸಿಕೊಳ್ಳಿ

0
ನಟ ಪುನೀತ್‌ರಾಜ್‌ಕುಮಾ ರ್ ಅವರ ೪೯ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ

ನಟ ಪುನೀತ್‌ರಾಜ್‌ಕುಮಾ ರ್ ಅವರ ೪೯ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ

ಚಿಕ್ಕಮಗಳೂರು: ಅದ್ಬುತ ನಟನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊ ಂಡ ಪುನೀತ್‌ರಾಜ್‌ಕುಮಾರ್ ಇಂದಿಗೂ ನಾಡಿನ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಮೇರುನಟ ಎಂದು ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ ಹೇಳಿದರು.

ನಗರದ ತೊಂಗರಿಹಂಕಲ್ ವೃತ್ತದ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ಭಾನುವಾರ ನಟ ಪುನೀತ್‌ರಾಜ್‌ಕುಮಾ ರ್ ಅವರ ೪೯ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಇಂದಿನ ಕ್ಷಣ ಸಂಭ್ರಮಿವುದೋ ಅಥವಾ ದುಃಖಿಸುವುದು ತಿಳಿಯದು. ಮೇರುನಟನ ಸವಿನೆನಪು ಮರೆ ಯಲಾಗುತ್ತಿಲ್ಲ. ಹೀಗಾಗಿ ಪುನೀತ್ ತೋರಿದ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊ ಬ್ಬರು ಮೈಗೂಡಿಸಿಕೊಂಡರೆ ಮಾತ್ರ ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು.

ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್‌ರಾಜ್‌ಕುಮಾರ್ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ತಂದೆ ಡಾ.ರಾಜ್‌ಕುಮಾರ್ ಕನ್ನಡ ನಾಡಿನ ಕುಲದೇವರಾದವರೂ ಕೂಡಾ ಯಾವುದೇ ಅಹಂ ಅವರ ಜೀವನದಲ್ಲಿ ಇರಲಿಲ್ಲ. ದುಡಿಮೆಯ ಇಂತಿಷ್ಟು ಹಣವನ್ನು ಸಮಾಜದಲ್ಲಿ ನೊಂದ ಹೆಣ್ಣು ಮಕ್ಕಳ ಜೀವನಕ್ಕೆ ಮುಡಿಪಿಟ್ಟವರು ಎಂದು ಬಣ್ಣಿಸಿದರು.

ಪುನೀತ್‌ರಾಜ್‌ಕುಮಾರ್‌ಗೆ ಚಿಕ್ಕಮಗಳೂರಿಗೂ ಅವಿಭಾವ ಸಂಬಂಧವಿದೆ. ಅವರ ಧರ್ಮಪತ್ನಿ ಇದೇ ಜಿಲ್ಲೆಯವರಾದ ಹಿನ್ನೆಲೆಯಲ್ಲಿ ಸ್ಥಳೀಯ ಜನತೆಯಲ್ಲಿ ವಿಶೇಷ ಅಭಿಮಾನವಿದೆ. ಆ ನಿಟ್ಟಿನಲ್ಲಿ ನಗರದ ಹಲವಾರು ಕಡೆಗಳಲ್ಲಿ ನಟ ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ರಸ್ತೆ ನಾಮಕರಣಗೊಂಡಿವೆ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದ ಆಯೋಜಕ ಫೈರೋಜ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ನಗುಮುಖದ ಒಡೆ ಯ ಪುನೀತ್‌ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಟ್ರಾಫಿಕ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿ ಸಲಾಗುತ್ತಿದೆ. ಆಟೋ ಚಾಲಕರ ಬದುಕಿನಲ್ಲಿ ಇಂದಿಗೂ ಪುನೀತ್ ಜೀವಂತ ವ್ಯಕ್ತಿ. ಅವರ ಮೌಲ್ಯಯುತ ಸಾಧನೆ ಗಳು ನಮ್ಮಗೆಲ್ಲಾ ದಾರಿದೀಪ ಎಂದು ಹೇಳಿದರು.

ವರ್ಷದಲ್ಲೇ ಕನಿಷ್ಟ ಎರಡ್ಮೂರು ಬಾರಿ ಆಟೋದಲ್ಲೇ ಬೆಂಗಳೂರಿಗೆ ತೆರಳುವ ಮೂಲಕ ಮೇರುನಟ ನೆಲೆ ಸಿರುವ ಸ್ಥಳಕ್ಕೆ ತೆರಳಿ ಗೌರವ ಸೂಚಿಸಲಾಗುತ್ತಿದೆ. ಸಿನಿಮಾ ಜಗತ್ತಿನಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಹ ಚಿತ್ರ ಗಳನ್ನು ನಿರ್ಮಿಸಿ ರಂಜಿಸುವ ಕೆಲಸ ಮಾಡಿದ ಪುನೀತ್, ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಸಮಾಜದಲ್ಲಿ ಬಾಳಿದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಮಾಜಿ ಅಧ್ಯಕ್ಷ ಎಂ.ಟಿ.ಜಗದೀಶ್, ಚಾಲಕರಾದ ದೇವರಾಜ್, ಕುಮಾರ್, ಚಂದ್ರು, ತಿರುಪಾಲ್ ಮತ್ತಿತರರು ಹಾಜರಿದ್ದರು.

Actor Puneethrajkumar’s 49th Birthday Tribute to Portrait

 

About Author

Leave a Reply

Your email address will not be published. Required fields are marked *

You may have missed