September 21, 2024

ಪ್ಯಾರ ಏಷ್ಯಾಡ್ ಕ್ರೀಡಾಕೂಟದಲ್ಲಿ ಪದಕ ವಿಜೇತ ನಾಲ್ವರು ಕ್ರೀಡಾಪಟುಗಳ ದತ್ತು

0
ಉದ್ಯಮಿ ಲೈಫ್‌ಲೈನ್ ಫೀಡ್ಸ್ ಮತ್ತು ಟೆಂಡರ್ ಚಿಕನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಸುದ್ದಿಗೋಷ್ಠಿ

ಉದ್ಯಮಿ ಲೈಫ್‌ಲೈನ್ ಫೀಡ್ಸ್ ಮತ್ತು ಟೆಂಡರ್ ಚಿಕನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುವ ಆಶಾಕಿರಣ ಶಾಲೆಯ ರಕ್ಷಿತರಾಜು ಹಾಗೂ ಬೆಳ್ಳಿ ಪದಕ ವಿಜೇತರಾದ ರಾಧ, ರವಿ, ಲಲಿತ ಇವರಿಗೆ ಮುಂದಿನ ಪ್ಯಾರಾ ಒಲಂಪಿಕ್‌ನಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಂಪೂರ್ಣ ವೆಚ್ಚ ಭರಿಸಲು ಜಿಲ್ಲೆಯ ಸುಪ್ರಸಿದ್ಧ ಉದ್ಯಮಿ ಲೈಫ್‌ಲೈನ್ ಫೀಡ್ಸ್ ಮತ್ತು ಟೆಂಡರ್ ಚಿಕನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಅವರು ದತ್ತು ಪಡೆದಿರುವುದಾಗಿ ಘೋಷಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಿಶೋರ್ ಕುಮಾರ್ ಹೆಗಡೆಯವರು ವಿಶೇಷ ಚೇತನರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆ ಪಡುವ ವಿಷಯವಾಗಿದೆ ಇಂತಹ ವಿಶೇಷ ಚೇತನರಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಪವಿತ್ರ ಕೆಲಸವೆಂದು ಭಾವಿಸಿ ಈ ಕ್ರೀಡಾಪಟುಗಳೀಗೆ ಸರ್ಕಾರ ನೀಡುವ ನಿಯಮಿತ ಅನುದಾನದ ಜೊತೆಗೆ ಅವರಿಗೆ ಬೇಕಾದ ಎಲ್ಲಾ ವೆಚ್ಚಗಳನ್ನು ಭರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗೆ ಭಾಗವಹಿಸುವುದು ಈ ದೇಶದ ಪ್ರತಿಷ್ಠೆಯೂ ಕೂಡ ಈ ಹಿನ್ನೆಲೆಯಲ್ಲಿ ರಾಧ, ರವಿ, ಲಲಿತ ಇವರುಗಳು ಬೆಳ್ಳಿ ಪದಕ ಪಡೆದಿದ್ದಾರೆ. ಮುಂದೆ ನಡೆಯಲಿರುವ ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನದ ಪದಕ ಪಡೆಯಲಿ ಎಂಬ ಉದ್ದೇಶದಿಂದ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದ್ದು ಅವರಿಗೆ ಉದ್ಯೋಗ ಸಿಗುವವರೆಗೂ ಸಂಪೂರ್ಣವಾಗಿ ನೆರವು ನೀಡಲಿದ್ದು ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ ಹತ್ತು ಲಕ್ಷರೂ ಖರ್ಚಾಗಲಿದ್ದು ನಾಲ್ವರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ೪೦ ಲಕ್ಷರೂ ವೆಚ್ಚವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತರಬೇತುದಾರ ರಾಹುಲ್ ಮಾತನಾಡಿ ಕಿಶೋರ್ ಕುಮಾರ್ ಹೆಗಡೆಯವರು ಆರ್ಥಿಕ ನೆರವು ನೀಡಲು ಮುಂದೆ ಬಂದಿರುವುದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆತು ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗಲಿದೆ ವಿಶ್ವ ಚಾಂಪಿಯನ್ ಶಿಪ್‌ನಲ್ಲೂ ಭಾಗವಹಿಸಿ ಚಿನ್ನದ ಪದಕ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಸ್ವರ್ಣಪದಕ ವಿಜೇತೆ ರಕ್ಷಿತರಾಜು ಮತನಾಡಿ ಕ್ರೀಡಾಸಾಧನೆಗೆ ಹಣಕಾಸು ಸಮಸ್ಯೆ ಅಡ್ಡಿಯಾಗಿದ್ದು ಈಗ ಕಿಶೋರ್ ಕುಮಾರ್ ಹೆಗಡೆಯವರು ಆರ್ಥಿಕ ನೆರವು ನೀಡುತ್ತಿರುವುದರಿಂದ ಇನ್ನಷ್ಟು ಸಾಧನೆ ಮಾಡಬಹುದೆಂಬ ವಿಶ್ವಾಸವಿದೆ. ಪ್ಯಾರ ಒಲಂಪಿಕ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಪಡೆಯುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಾದ ರಾಧ, ರವಿ, ಲಲಿತ, ಸಾಮಾಜಿಕ ಕಾರ್ಯಕರ್ತ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.

Adoption of four athletes who won medals in the Para Asiad Games

About Author

Leave a Reply

Your email address will not be published. Required fields are marked *