September 16, 2024

ಸಂವಿಧಾನದ ಅತಿಹೆಚ್ಚು ತಿದ್ದುಪಡಿಯ ಮೂಲಕತೃ ಕಾಂಗ್ರೆಸ್

0
ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆ

ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆ

ಚಿಕ್ಕಮಗಳೂರು:  ಸಂವಿಧಾನವನ್ನು ಕಾಲಕ್ರಮೇಣ ಬಿಜೆಪಿ ಮಾರ್ಪಾಡು ಮಾಡಲಿಚ್ಚಿಸಿದೆಯೇ ಹೊರತು ದುರುದ್ದೇಶದಿಂದಲ್ಲ. ಅತಿಹೆಚ್ಚು ತಿದ್ದುಪಡಿಗೆ ಮೂಲಕತೃವೇ ಕಾಂಗ್ರೆಸ್‌ನ ಎಂದು ಬಿಜೆಪಿ ಜಿಲ್ಲಾ ಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ದೂರಿದರು.

ನಗರದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ ಕೊನೆಯ ಕ್ಷಣದಲ್ಲಿ ಅಂತ್ಯಕ್ರಿಯೆಗೂ ದೆಹಲಿ ಯಲ್ಲಿ ಜಾಗವನ್ನು ಕೊಡದೇ ಕಡಲ ತೀರದಲ್ಲಿ ಕ್ರಿಯೆ ನಡೆಸಲು ಕಾಂಗ್ರೆಸ್ ಕಾರಣ ಎಂದರು.

ಪಕ್ಷದಲ್ಲಿ ಈಗಾಗಲೇ ಹಲವಾರು ಪದಾಧಿಕಾರಿಗಳು ಹಾಗೂ ಹೋಬಳಿ ಮಟ್ಟದ ಅಧ್ಯಕ್ಷರುಗಳ ಮಂಡಲ ಸ್ಥಾಪಿಸಿದ್ದು ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲೇ ಕ್ಷೇತ್ರವು ಅರ್ಧ ಗೆಲುವು ಪಡೆದುಕೊಂಡಿದೆ. ಇನ್ನುಳಿದ ಗೆಲುವನ್ನು ಕಾರ್ಯಕರ್ತರು ಬೂತ್‌ಮಟ್ಟದಿಂದ ನಿರ್ವಹಿಸಿದರೆ ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ ಎಂ ದು ಹೇಳಿದರು.

ಪ್ರತಿಯೊಂದು ಬೂತ್‌ಗಳಲ್ಲೂ ಕಾರ್ಯಕರ್ತರು ಪ್ರವಾಸ ಕೈಗೊಂಡು ನಾಯಕತ್ವ ಮಾದರಿಯಲ್ಲಿ ಪ್ರಚಾರ ದಲ್ಲಿ ತೊಡಗಬೇಕು. ಬಡವರು, ದಲಿತರು ಹಾಗೂ ರೈತರಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿರುವ ಸಾಧನೆಗ ಳನ್ನು ಸಮರ್ಪಕವಾಗಿ ವಿವರಿಸಿದರೆ ಬಿಜೆಪಿಗೆ ಜಯಖಚಿತ. ಹೀಗಾಗಿ ಪ್ರತಿ ಬೂತ್‌ನಲ್ಲೂ ನಾಯಕರು ಸೃಷ್ಟಿಯಾಗ ಬೇಕಿದೆ ಎಂದರು.

ಬಿಜೆಪಿ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ದೊರೆತಿರುವ ಅವಕಾಶ ಇನ್ಯಾವುದೇ ಪಕ್ಷದಲ್ಲಿ ದೊರೆತಿಲ್ಲ. ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಘಟಕದ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಮಾದಿಗ ಸಮಾವೇಶವನ್ನು ಆಯೋಜಿಸಿ ಬೆನ್ನೆಲುಬಾಗಿ ಬಿಜೆಪಿ ನಿಂತಿದ್ದು ಕಾಂಗ್ರೆಸ್ ಮತಕ್ಕಾಗಿ ದಲಿತರ ನಡುವೆ ಹತ್ತಿಕ್ಕುವ ಕೆಲಸ ಎಂದರು.

ಆ ನಿಟ್ಟಿನಲ್ಲಿ ಪಕ್ಷದ ಮುಖಂಡರುಗಳು ಕ್ಷೇತ್ರದ ಪ್ರತಿ ಕಾಲೋನಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಬೇಕು. ಪೂರ್ವಜರ ಆಸ್ತಿ ಉಳಿಸಿದಂತೆ, ಹಿಂದೂರಾಷ್ಟ್ರ ಪರಂಪರೆ ಹಾಗೂ ಇತಿಹಾಸವನ್ನು ಉಳಿಸಲು ಪಣ ತೊಡದಿದ್ದರೆ ರಾಷ್ಟ್ರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ದೇಶದಲ್ಲಿ ಮತದಾರರೇ ಪ್ರಭುಗಳೇ, ಆ ಪ್ರಭುಗಳ ಚುನಾವಣೆಯೇ ಲೋಕಸಭೆ. ದೇಶದ ಭದ್ರಬುನಾದಿಗೆ ಕೊಂಡೊಯ್ಯುವ ಹಾಗೂ ಸಂಕಷ್ಟದಿಂದ ರಕ್ಷಿಸಲು ಕೇವಲ ನರೇಂದ್ರ ಮೋದಿಯಿಂದ ಸಾಧ್ಯ. ಹಾಗಾಗಿ ಮತದಾ ನದ ಸಮಯದಲ್ಲಿ ಆಮಿಷಕ್ಕೆ ಒಳಗಾಗದೇ ದೇಶದ ಹಿತಕ್ಕಾಗಿ ಬಿಜೆಪಿಗೆ ಬೆಂಬಲಿಸಬೇಕು ಎಂದು ಕಾರ್ಯಕರ್ತ ರು ಮನವರಿಕೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಜಿಲ್ಲೆಯ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರು ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಯಾಚನೆಗೆ ಮುಂ ದಾಗಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ ಬಿಜೆಪಿ ಅಭ್ಯರ್ಥಿಯ ಗೆಲು ವಿಗೆ ಕಾರ್ಯೋನ್ಮುಖರಾಗಬೇಕು ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಎಸ್ಸಿ ಘಟಕಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ. ರಾಜ್ಯದಲ್ಲಿ ದಲಿ ತರು ಬಹುತೇಕ ಸಂಖ್ಯಾತರಿದ್ದರು ಅಂದಿನ ಸಮಯದಲ್ಲಿ ಅಲ್ಪಜನಸಂಖ್ಯೆಯ ಧರ್ಮಸಿಂಗ್ ಅವರನ್ನು ಮುಖ್ಯ ಮಂತ್ರಿಯಾಗಿಸಿ ದಲಿತರಿಗೆ ಅನ್ಯಾಯ ಮಾಡಿದ್ದು ಕೇಂದ್ರದ ಮೋದಿ ಸರ್ಕಾರ ಆರಂಭದಿಂದ ಜನಾಂಗಕ್ಕೆ ಹೆಚ್ಚು ಒತ್ತು ನೀಡಿದೆ ಎಂದರು.

ಹಿಂದಿನ ಯಾವುದೇ ಕಾಂಗ್ರೆಸ್ ಸರ್ಕಾರ ಕೈಗೊಳ್ಳದ ನಿರ್ಧಾರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಕೈಗೊಂಡಿದೆ. ಪ.ಜಾತಿ ಜನಾಂಗದ ಎಂಟು ಹಾಗೂ ಪ.ಪಂಗಡದ ನಾಲ್ಕು ಮಂದಿಗೆ ಉನ್ನತ ಸ್ಥಾನ ಕಲ್ಪಿಸಿದೆ. ಅದಲ್ಲದೇ ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಇಡೀ ಪ್ರಪಂಚಕ್ಕೆ ಪಸರಿಸಿದವರು ಎಂದರು.

ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ ಮಾತನಾಡಿ ಕಾಂಗ್ರೆಸ್‌ನ ಎಪತ್ತು ವರ್ಷಗಳ ಆಡಳಿತದಲ್ಲಿ ದಲಿತರನ್ನು ಹೀಯ್ಯಾಳಿಸುವುದು ಗುರಿಯಾಗಿತ್ತು. ಇಷ್ಟೆಲ್ಲೆ ಸಂಕಷ್ಟದ ನಡುವೆ ಆಟಲ್‌ಜಿ ಬಳಿಕ ದೇಶಕ್ಕೆ ನರೇಂದ್ರ ಮೋದಿಯವರ ನಾಯಕತ್ವ ದಶಕಗಳಿಂದ ಕಂಡಿರುವ ನಮಗೆ ಹೆಮ್ಮೆಯಿದೆ. ಹೀಗಾಗಿ ಈ ಬಾರಿ ಚುನಾ ವಣೆಯಲ್ಲಿ ಪ್ರತಿ ಕಾರ್ಯಕರ್ತ ಕ್ಷೇತ್ರದಲ್ಲಿ ಶ್ರಮಿಸಿ ಮೋದಿಗೆ ಕೈಬಲಪಡಿಸಬೇಕಿದೆ ಎಂದರು.

ಇದೇ ವೇಳೆ ರಾಜ್ಯ ಎಸ್ಸಿ ಮೋರ್ಚಾಕ್ಕೆ ನೂತನವಾಗಿ ಆಯ್ಕೆಗೊಂಡ ಸೀತಾರಾಮ ಭರಣ್ಯ ಹಾಗೂ ಶಿವಶಂಕರ್ ಅವರಿಗೆ ಜಿಲ್ಲಾ ಘಟಕದಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಡಾ. ಶಿವಶಂಕರ್, ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣನಾಯಕ್, ಜಿಲ್ಲಾ ಮಾಜಿ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಹುಲ್ಲಹಳ್ಳಿ ಲಕ್ಷ್ಮಣ್, ಸುಜಿತ್, ಕುಮಾರ್ ಮತ್ತಿತರರು ಹಾಜರಿದ್ದರು.

Executive meeting of District SC Morcha at BJP office

About Author

Leave a Reply

Your email address will not be published. Required fields are marked *