September 7, 2024
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಜಿಲ್ಲಾ ಆಟದ ಮೈದಾನದಲ್ಲಿ ಮತಯಾಚನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಜಿಲ್ಲಾ ಆಟದ ಮೈದಾನದಲ್ಲಿ ಮತಯಾಚನೆ

ಚಿಕ್ಕಮಗಳೂರು: ತಾವು ಸಂಸದರಾಗಿದ್ದಾಗ ಮಾಡಿದ ಜನಪರ ಕೆಲಸ ಹಾಗೂ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಇಂದು ನಗರದಲ್ಲಿ ಮುಂಜಾನೆಯಿಂದ ಜಿಲ್ಲಾ ಆಟದ ಮೈದಾನದಲ್ಲಿ ವಾಯುವಿಹಾರಿಗಳನ್ನು ಭೇಟಿ ಮಾಡಿ ಬಳಿಕ ಶ್ರೀ ಕೊಲ್ಲಾಪುರದಮ್ಮದೇವಿ ದರ್ಶನ ಪಡೆದು ಹಿರೇಮಗಳೂರು ಹಾಗೂ ಬೈಪಾಸ್ ರಸ್ತೆಯ ಬಸವ ಮಂದಿರ ಶ್ರೀ ಮರುಳಸಿದ್ಧ ಶ್ರೀಗಳ ಆಶೀರ್ವಾದ ಪಡೆದು ನರಿಗುಡ್ಡೇನಹಳ್ಳಿ ಗ್ರಾಮಗಳಿಗೆ ಲೋಕಸಭಾ ಚುನಾವಣಾ ಪ್ರಯುಕ್ತ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತಯಾಚಿಸಿದರು.

ಬಡವರ ಆರ್ಥಿಕ ಜೀವನ ಸುಧಾರಣೆಗೆ ರಾಜ್ಯಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದನ್ನು ಚರ್ಚಿಸುವ ಬಿಜೆಪಿ, ಉದ್ಯಮಿಗಳ ಕೋಟಿಗಟ್ಟಲೇ ಸಾಲಮನ್ನಾದ ಬಗ್ಗೆ ಚರ್ಚಿಸದೇ ಮೌನವಹಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಸಂವಿಧಾನದಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ನಾವುಗಳು. ಅದೇ ಸಂವಿಧಾನವನ್ನು ತಿದ್ದುಪಡಿಗೆ ಹೊರಟಿರುವ ಬಿಜೆಪಿಗೆ ಸಂವಿಧಾನ ಬೇಡವಾದಂತಿದೆ. ಹಾಗಾಗಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಂವಿಧಾನ ಅಪಾಯದಂಚಿನಲ್ಲಿರುವ ಹಿನ್ನೆಲೆಯಲ್ಲಿ ಕಾಪಾಡುವ ಜವಾಬ್ದಾರಿ ನಿಮ್ಮ ಮತಗಳ ಮೇಲೆ ನಿಂತಿದೆ ಎಂದರು.

ಪ್ರಸ್ತುತ ಹಾಲಿ ಸಂಸದರು ಕಳೆದ ಹತ್ತು ವ?ಗಳಿಂದ ಏನನ್ನು ಮಾಡದೇ ಜಿಲ್ಲೆಯ ಶೋಭೆಯನ್ನು ಹಾಳು ಗೆಡವಲಾಗಿದೆ. ಅಡಿಕೆ, ಕಾಫಿ ಹಾಗೂ ರೈತರ ತುರ್ತು ಸಂದರ್ಭದಲ್ಲಿ ಸ್ಪಂದಿಸಿ ಪರಿಹಾರವನ್ನು ಒದಗಿಸದಿರುವುದು ಸ್ಥಳೀಯವಾಗಿ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ವ?ಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಇಂದಿಗೂ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಟೀಕಿಸಿದರು.

ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಕಟಿಬದ್ಧವಾಗಿ ನಿರ್ಧಾರ ಕೈಗೊಂಡಿದ್ದು ಮತದಾರರು ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗೊಳಿಸಿದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿ ಯುವುದು ಶತಸಿದ್ಧ ಎಂದ ಅವರು ಚಿಕ್ಕಮಗಳೂರಿಗೆ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಗಳು ಎಂದರು.

ಕಳೆದ ಬಾರಿ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ಲೋಕಸಭಾ ಸಂಸದರಾಗಿ ಬಹುತೇಕ ಅಭಿ ವೃಧ್ದಿಗೆ ಒತ್ತು ನೀಡಿರುವುದು ಈ ಬಾರಿ ಗೆಲುವಿಗೆ ವರದಾನವಾಗಲಿದೆ. ಹೀಗಾಗಿ ಕ್ಷೇತ್ರದ ಜನತೆ ವಿಶ್ವಾಸ ಹಾಗೂ ನಂಬಿಕೆಯಿರಿಸಿ ಮತ ನೀಡಿ ಸಹಕರಿಸಿದರೆ ಜಟಿಲ ಸಮಸ್ಯೆಗಳು ಹಾಗೂ ಸಂಕ?ದಲ್ಲಿರುವ ರೈತಾಪಿ ವರ್ಗದವರಿಗೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಹತ್ತು ತಿಂಗಳ ಅವಧಿಯಲ್ಲೇ ಐದು ಗ್ಯಾರಂ ಟಿಗಳನ್ನು ಘೋಷಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ಇಂದಿನ ಚುನಾವಣೆ ಪಕ್ಷದ ಸವಾಲಾಗಿದ್ದು ಕಾರ್ಯಕರ್ತರು ದೃತಿಗೆಡದೇ ಪ್ರತಿ ಬೂ??ಗಳಲ್ಲಿ ಅತಿಹೆಚ್ಚು ಮತದಾನಕ್ಕೆ ಪ್ರಕ್ರಿಯೆಯಲ್ಲಿ ತೊಡಗಿ ಚಿಕ್ಕಮಗಳೂರನ್ನು ಮತ್ತೊಮ್ಮೆ ಕಾಂಗ್ರೆ??ನ ಭದ್ರಬುನಾದಿಗೆ ಮುನ್ನೆಡೆಸಬೇಕು ಎಂದರು.

ವಿಧಾನ ಪರಿ?ತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಹಾಲಿ ಸಂಸದರು ಕ್ಷೇತ್ರದಲ್ಲಿ ಕೇವಲ ಕಾಲ ಹರಣ ಮಾಡಿಕೊಂಡಿರುವುದು ಗಮನಿಸಿ, ಪಕ್ಷದ ಮುಖಂಡರುಗಳೇ ಗೋಬ್ಯಾಕ್ ಶೋಭಾ ಅಭಿಯಾನ ಆರಂಭಿಸಿರುವುದು ಮತದಾರರು ಮರೆಯದಿರಿ. ಕೇಂದ್ರದಿಂದ ಕಾಫಿ, ಅಡಿಕೆಗೆ ಪರಿಹಾರ ಹಾಗೂ ರೈಲ್ವೆ ತಂದಿದ್ದೇವೆ ಎಂದು ಹೇಳಿ ಬಾಯ್ತುಂಬ ರೈಲನ್ನೇ ಬಿಡುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಸರಳ, ಸಜ್ಜನಿಕೆಯ ವ್ಯಕ್ತಿ ಜಯಪ್ರಕಾಶ್ ಹೆಗ್ಡೆ ಬಗ್ಗೆ ಇಲ್ಲಸಲ್ಲದ ಆರೋಪಗಳು ಸಹಿಸುವುದಿಲ್ಲ. ರೈತರು, ದಲಿತರು, ಅಲ್ಪಸಂಖ್ಯಾತರು ಹಾಗೂ ಬಡವರ ಪರ ಅತ್ಯಂತ ಕಾಳಜಿ ಹೊಂದಿರುವವರ ಬಗ್ಗೆ ಸುಳ್ಳು ಅಪಾದನೆ ಮಾಡುವ ವಿರೋಧಿಗಳಿಗೆ ತಕ್ಕ ಪಾಠವಾಗಿ ಈ ಬಾರಿ ಚುನಾ ವಣೆಯಲ್ಲಿ ಒಂದು ಲಕ್ಷ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕೃಷಿ ಉತ್ಪನ್ನಗಳ ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಪಕ್ಷದ ವಕ್ತಾರ ರೂಬಿನ್‌ಮೊಸಸ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಮುಖಂಡರುಗಳಾದ ಪ್ರಕಾಶ್, ಹಿರೇಮಗಳೂರುರಾಮಚಂದ್ರ, ಸಂತೋ?, ಕೆ.ಭರತ್, ನಾಸಿರ್ ನಿಸಾರ್‌ಅಹ್ಮದ್ ಮತ್ತಿತರರು ಹಾಜರಿದ್ದರು.

I will ask for people’s guarantee scheme

About Author

Leave a Reply

Your email address will not be published. Required fields are marked *

You may have missed