September 21, 2024

ವೀರಭದ್ರೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯ ಜಯಂತಿ

0
ವೀರಭದ್ರೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯ ಜಯಂತಿ

ವೀರಭದ್ರೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯ ಜಯಂತಿ

ಚಿಕ್ಕಮಗಳೂರು: ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಗುರುಗಳ ಜನ್ಮ ದಿನಾಚಾರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾರ್ಥಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಬೇಕೆಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ನಗರದ ಬಸವನಹಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ೨೯ನೇ ವರ್ಷದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿದರು.

ಪಂಚ ಪೀಠಗಳಲ್ಲಿ ಮೊದಲನೆಯ ಪೀಠವಾಗಿರುವ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠವು ವೀರಶೈವ ಧರ್ಮದ ಉದ್ಧಾರಕರು ಎಂದೇ ಜಗತ್‌ಪ್ರಸಿದ್ಧಿಯಾದ ಶ್ರೀ ರೇಣುಕಾಚಾರ್ಯರು ಪ್ರತಿ ಯುಗದಲ್ಲೂ ಅವತಾರತಾಳಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ ಎಂದು ಅನೇಕ ಉಲ್ಲೇಖಗಳಿವೆ ಎಂದರು.

ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಗುರುಹಿರಿಯರ ಮಾರ್ಗದರ್ಶನ ಪಡೆಯಬೇಕು, ಶ್ರೀ ರೇಣುಕಾಚಾರ್ಯರು ಮಾನವ ಜನ್ಮಕ್ಕೆ ಜಯವಾಗಲಿ ಎಂದು ಹೇಳಿ ಸಮಾಜದ ಏಳಿಗೆಗೆ ಶ್ರಮಿಸಿದವರು, ಅವರ ಜನ್ಮ ದಿನಾಚಾರಣೆಯನ್ನು ನಾಡಿನಾದ್ಯಂತ ಆಚರಿಸಬೇಕೆಂದು ತಿಳಿಸಿದರು.

ವಿಶೇಷ ಪೂಜೆ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲಿ ಶಾಸಕ ಹೆಚ್.ಡಿ.ತಮ್ಮಯ್ಯ ಸಮಿತಿಯ ಅಧ್ಯಕ್ಷರಾದ ಬಿ.ಎಸ್.ಸಣ್ಣಪ್ಪ, ಪ್ರದಾನ ಕಾರ್ಯದರ್ಶಿ ಸಿ.ಎಸ್.ಏಕಾಂತರಾಮ್, ಖಜಾಂಚಿ ಶಿವಾನಂದ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಯುವ ಘಟಕದ ಕಾರ್ಯದರ್ಶಿ ಸಿ.ಇ.ಚೇತನ್, ಉಪಾಧ್ಯಕ್ಷರಾದ ರಾಜಣ್ಣ, ಮಂಜಪ್ಪ, ಪ್ರಸನ್ನ, ಅರ್ಚಕರಾದ ರೇಣುಕಾಮೂರ್ತಿ, ಮುಖಂಡರಾದ ಉಮಾಶಂಕರ್, ವೀರೇಶ್, ದಿನೇಶ್, ಮಧುಕುಮಾರ್, ಅಶೋಕ್ ಕುಮಾರ್ ಇತರರು ಉಪಸ್ಥಿ ತರಿದ್ದರು

Renukacharya Jayanti at Veerabhadreshwar Temple

About Author

Leave a Reply

Your email address will not be published. Required fields are marked *