September 21, 2024

ಸಖರಾಯಪಟ್ಟಣ ಮಹಾಶಕ್ತಿ ಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆ

0
ಸಖರಾಯಪಟ್ಟಣ ಮಹಾಶಕ್ತಿ ಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆ

ಸಖರಾಯಪಟ್ಟಣ ಮಹಾಶಕ್ತಿ ಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆ

ಕಡೂರು: ಲೊಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ನಲ್ಲಿ ಯಾರು ಇರುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಬಿಜೆಪಿ‌ ಮುಖಂಡ ‌ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಸಖರಾಯಣದಲ್ಲಿ ಭಾನುವಾರ ಸಖರಾಯಪಟ್ಟಣ ಮಹಾಶಕ್ತಿ ಕೇಂದ್ರದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ ಹಿಂದೆ ಸಂವಿಧಾನಕ್ಕೆ ಅಪತ್ತು ಬಂದಾಗ ಜನತಾ ಪರಿವಾರ ಒಂದಾಗಿತ್ತು. ದೇಶದ ಅಖಂಡತೆ ಮತ್ತು ಸಮಗ್ರತೆಗಾಗಿ ಮೋದಿಯವರ ಕೈ ಬಲಪಡಿಸಲು ಈಗ ಜನತಾ ಪರಿವಾರವೇ ಎನ್.ಡಿ.ಎ. ಭಾಗವಾಗಿದೆ. ದೇಶಭಕ್ತರ ಮತ್ತು ದೇಶ ವಿಚ್ಛಿದ್ರಕರ ನಡುವಿನ ಈ ಚುನಾವಣೆಯಲ್ಲಿ ಎನ್.ಡಿ.ಎ. ಬಹುಮತ ಪಡೆದು ವಿರೋಧಿ ಪಕ್ಷಗಳು ನೇಫಥ್ಯಕ್ಕೆ ಸರಿಯುತ್ತವೆ. ನಮ್ಮ‌ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹೆಚ್ಚು ಮತಗಳು ಸಿಗುವಂತೆ ಕಾರ್ಯಕರ್ತರು ಶ್ರಮಿಸಬೇಕು‘ ಎಂದರು.

ಪರಿಶಿಷ್ಟ ಸಿಎಂ ಎಂಬ ಕೂಗು ನಮ್ಮ ಒಕ್ಕೂಟದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿಲ್ಲ ಎಂಬ ಮಾತು ಪರಿಶಿಷ್ಟ ಸಿಎಂ ಕೂಗಿನಲ್ಲಿ ವ್ಯಕ್ತವಾಗುತ್ತಿದೆ. ಆಡಳಿತ ಶಕ್ತಿ ಕೇಂದ್ರದಲ್ಲಿಯೇ ಪಾಕ್ ಪರ ಘೋಷಣೆಗಳು ಕೂಗುವಂತಹ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಮನೋಭಾವದ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕು ಎಂದರು.

ಬಿಜೆಪಿ ನಿಯೋಜಿತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ರಾಜ್ಯದಲ್ಲಿ ಬರಗಾಲ ಇದೆ. ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ’ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಿಗೆ 10ಮೀಟರ್ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಹಿಂದಿನ ಶಾಸಕರ‌ ಅನುದಾನದಲ್ಲಿ ಈಗಿನ ಶಾಸಕರು ಶಂಕುಸ್ಥಾಪನೆ ಮಾಡುವುದೇ ದೊಡ್ಡ ಕೆಲಸವಾಗಿದೆ. ರಾಷ್ಟ್ರಹಿತಕ್ಕಾಗಿ ಮೋದಿಯವರ ಕೈ ಬಲಪಡಿಸಲು ಪ್ರತಿಯೊಬ್ಬರೂ ಮನಸ್ಸು ಮಾಡಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡರಾದ ಸುಧಾಕರ ಶೆಟ್ಟಿ, ಜಿ.ಎನ್.ವಿಜಯ್ ಕುಮಾರ್, ಕುರುವಂಗಿ ವೆಂಕಟೇಶ್, ಟಿ.ಆರ್.ಲಕ್ಕಪ್ಪ, ಸೋಮಶೇಖರ್, ಲಕ್ಷ್ಮಣನಾಯ್ಕ ಹಳೇಹಟ್ಟಿ ಆನಂದ್‌ನಾಯ್ಕ್, ಜಗನ್ನಾಥ್, ರಂಗನಾಥ್, ನಂದೀಶ್ ಮದಕರಿ, ಕೊಲ್ಲಾಭೋವಿ ಇದ್ದರು.

A meeting of BJP-JDS workers of Sakharayapatnam Mahashakti Kendra

About Author

Leave a Reply

Your email address will not be published. Required fields are marked *