September 19, 2024

ಸಂವಿಧಾನ ರಕ್ಷಣೆಗೆ ಜಾಗೃತಿಯಿಂದ ಮತದಾನ ಅಗತ್ಯ

0
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಪತ್ರಿಕಾಗೋಷ್ಠಿ

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: : ದೇಶದಲ್ಲಿ ಬದಲಾವಣೆ ಅಗತ್ಯವಾಗಿದ್ದು ಕೋಮುವಾದಿ ರಾಜಕಾರಣ ದಿಕ್ಕರಿಸಿ ಸಂವಿಧಾನ ರಕ್ಷಿಸುವ ಕುರಿತು ಜನಜಾಗೃತಿಗಾಗಿ ರಾಜ್ಯದ ಹಲವು ಭಾಗಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಕಳೆದ ಹತ್ತು ವ?ಗಳ ಕೇಂದ್ರ ಸರ್ಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಆಪತ್ತು ತರುವ ಹುನ್ನಾರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜನಜಾಗೃತಿಗಾಗಿ ರಾಜ್ಯ ಚಾಮರಾಜನಗರದಿಂದ ಜಾಗೃತಿ ಜಾಥಾ ಆರಂಭವಾಗಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿ ಜಾತ್ಯಾತೀತ ಪ್ರಜ್ಞೆ ಇದೆ. ಯಾರು ಗಂಭೀರವಾಗಿ ಕನ್ನಡ ಸಾಹಿತ್ಯ ಅಧ್ಯಯನ ಮಾಡುತ್ತಾರೋ ಅವರು ಯಾವುದೇ ಜಾತಿ ಮತ್ತು ಧರ್ಮ ಇಂತಹ ಸಂಕುಚಿತವಾದ ಮನು? ವಿರೋಧಿಯಾದ ವಿಚಾರಗಳಿಗೆ ಒಳಗಾಗುವುದಿಲ್ಲ. ಕನ್ನಡ ಸಾಹಿತ್ಯದಿಂದ ದೂರ ಬಂದವರಿಗೆ ಮಾತ್ರ ರಾಜಕಾರಣದ ವಿ?ಬೀಜ ಬಿತ್ತುವಲ್ಲಿ ನಿರತರಾಗಿರುತ್ತಾರೆ ಎಂದು ಆರೋಪಿಸಿದರು.

ಅದಕ್ಕಾಗಿ ಕನ್ನಡ ಸಾಹಿತ್ಯವನ್ನು ಎಲ್ಲೆಡೆ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ, ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯಾತೀತವಾಗಿ, ವೈಚಾರಿಕ ಚಿಂತಕರಾಗಿ, ವೈಜ್ಞಾನಿಕ ಪ್ರಜ್ಞೆ ಇರಬೇಕು. ಸಾರ್ವಭೌಮ ಕಾಪಾಡಬೇಕು, ಸ್ವಾತಂತ್ರ್ಯ ಸಮಾನತೆಯನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.

ಕಳೆದ ಹತ್ತು ವ?ಗಳಿಂದ ಸಂವಿಧಾನಕ್ಕೆ ಆಪತ್ತು ತರುವ ಕೆಲಸ ನಡೆಯುತ್ತಿದ್ದು. ಇದನ್ನು ರಕ್ಷಿಸಬೇಕಾಗಿದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿz. ಅದೇ ರೀತಿ ಲೇಖಕನಾದ ನನ್ನ ಕರ್ತವ್ಯವೂ ಇದೆ. ಈ ನಿಟ್ಟಿನಲ್ಲಿ ಜಾಗೃತಿಯಿಂದ ಮತದಾನ ಮಾಡಬೇಕಾಗಿದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರವೀಶ್‌ಬಸಪ್ಪ, ಮಂಜುನಾಥ್‌ಸ್ವಾಮಿ, ಗುರುಶಾಂತಪ್ಪ, ನಿಜಗುಣ ಇದ್ದರು.

Voting with awareness is necessary to protect the Constitution

About Author

Leave a Reply

Your email address will not be published. Required fields are marked *

You may have missed