September 19, 2024

ಲೋಕಸಭಾ ಚುನಾವಣೆಗೆ ಗೆಲುವಿಗೆ ಮುಖಂಡರಿಂದ ರಕ್ತದಾನ

0
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಬಿಜೆಪಿ ಮುಖಂಡರುಗಳು ರಕ್ತ ದಾನ

ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಬಿಜೆಪಿ ಮುಖಂಡರುಗಳು ರಕ್ತ ದಾನ

ಚಿಕ್ಕಮಗಳೂರು: ದೇಶದಲ್ಲಿ ಮತ್ತೊಮ್ಮೆ ಮೋದಿ ಅಧಿಕಾರ ಸ್ವೀಕರಿಸಬೇಕು ಹಾಗೂ ಕೋ ಟಾ ಶ್ರೀನಿವಾಸ್ ಪೂಜಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಬೇಕು ಎಂದು ಬಿಜೆಪಿ ಮುಖಂಡರುಗಳು ಗುರು ವಾರ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿ ಬಳಿಕ ರಕ್ತದಾನ ಮಾಡಿದರು.

ದೇವಾಲಯದ ಪೂಜೆ ಬಳಿಕ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ತೆರಳಿದ ಬಿಜೆಪಿ ಮುಖಂಡರುಗಳು ರಕ್ತ ದಾನ ಮಾಡಿ ಸದೃಢ ದೇಶ ಹಾಗೂ ಭವ್ಯ ಭಾರತ ನಿರ್ಮಿಸುವ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಆಶಿಸಿದರು.

ಈ ವೇಳೆ ಬಿಜೆಪಿ ಮುಖಂಡ ಹಾಗೂ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಮಾತನಾಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾದ ಸಂದರ್ಭದಲ್ಲಿ ರಾಜ್ಯಕ್ಕೆ ಸುಮಾರು ೨೮ ಸಾವಿರ ಕೋಟಿ ಅನುದಾನ ನೀಡಿ ಒಂದು ರೂಪಾಯಿಗಳಷ್ಟು ಭ್ರಷ್ಟಚಾರವೆಸಗದೇ ಜನಸೇವೆಯಲ್ಲಿ ತೊಡಗಿದ ಸರಳ ವ್ಯಕ್ತಿತ್ವ ಎಂದರು.

ರಾಷ್ಟ್ರವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವುದನ್ನು ತಡೆಯಲು ವಿರೋಧ ಪಕ್ಷದ ನಾಯಕರುಗಳು ಒಗ್ಗಟ್ಟಾಗಿ ಒಕ್ಕೂಟ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ, ಬ್ಯಾಂ ಕ್ ಖಾತೆ ತೆರೆದಿರುವುದು, ವಿಶ್ವಕರ್ಮ ಯೋಜನೆ, ಕೃಷಿ ಕಲ್ಯಾಣ್ ಸೇರಿದಂತೆ ಸಾಮಾನ್ಯ ಜನತೆಗೆ ಅನುಕೂಲವಾ ಗುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವುದನ್ನು ಮರೆಯಬಾರದು ಎಂದರು.

ಪ್ರಪಂಚವನ್ನು ಭಾರತದತ್ತ ತಿರುಗುವಂತೆ ಮಾಡಿ ದೇಶದ ಪರಂಪರೆ ಹಾಗೂ ಇತಿಹಾಸವನ್ನು ವಿಶ್ವಾ ದಾದ್ಯಂತ ಪಸರಿಸಿದವರು ನರೇಂದ್ರ ಮೋದಿ. ಅಧಿಕಾರ ಪಡೆದು ದಶಕ ಕಳೆದರೂ ಮೋದಿ ಅಲೆ ಇಂದಿಗೂ ಕಡಿಮೆಯಾಗಿಲ್ಲ. ಅನಾರೋಗ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕಾರಣವೊಡ್ಡಿ ರಜೆ ಹಾಕದೇ ನಿರಂತರವಾಗಿ ದೇಶಕ್ಕಾಗಿ ದುಡಿಯುತ್ತಿರುವ ನಾಯಕರಿಗೆ ಮತದಾರರು ಬೆಂಬಲಿಸಬೇಕಿದೆ ಎಂದರು.

ಚಿಕ್ಕಮಗಳೂರಿಗೆ ಮಾಜಿ ಸಚಿವರು ಹಾಗೂ ಹಾಲಿ ಸಂಸದರ ಕೊಡುಗೆಯೇ ಕೋಟಾ ಶ್ರೀನಿವಾಸ್ ಪೂಜಾರಿಗೆ ವರದಾನವಾಗಲಿದೆ. ಒಟ್ಟಾರೆ ಕ್ಷೇತ್ರದಲ್ಲಿ ಸುಮಾರು ೨ ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿ ಸುವ ಮೂಲಕ ದೇಶಾದ್ಯಂತ ೪೦೦ಕ್ಕೂ ಹೆಚ್ಚು ಸ್ಥಾನ ಗಳಿಸಿ ಎನ್‌ಡಿಎ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯು ವುದು ಶತಸಿದ್ಧ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಸದಸ್ಯ ಮಿಥುನ್‌ಶೆಟ್ಟಿ, ಮುಖಂಡರುಗಳಾದ ಎಸ್.ಡಿ.ಎಂ. ಮಂಜು, ಉದಯ್‌ಶೆಟ್ಟಿ, ಬೊಗಸೆ ಗ್ರಾಮದ ಪರಮೇಶ್ ಮತ್ತಿತರರು ಹಾಜರಿದ್ದರು.

BJP leaders donate blood at district hospital blood bank

 

About Author

Leave a Reply

Your email address will not be published. Required fields are marked *

You may have missed