September 19, 2024

ತತ್ವ ಸಿದ್ಧಾಂತ ಮೇಲೆ ಕಟ್ಟಿದ ರಾಜಕೀಯ ಪಕ್ಷ ಬಿಜೆಪಿ

0
ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ

ಚಿಕ್ಕಮಗಳೂರು: ಭಾರತೀಯ ಜನತಾ ಪಕ್ಷವು ಹಿರಿಯರ ಮಾರ್ಗದರ್ಶನದಲ್ಲಿ ಅನೇಕ ತ್ಯಾಗಮಯಿಗಳಿಂದ, ತತ್ವ ಸಿದ್ಧಾಂತದ ಮೇಲೆ ಕಟ್ಟಿದ ಬೃಹತ್ ರಾಜಕೀಯ ಪಕ್ಷವಾಗಿ ದೇಶದಲ್ಲಿ ಬೆಳೆದಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ೪೪ನೇ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದ ಅವರು ವಿಶ್ವದ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಬಿಜೆಪಿ ಅತಿಹೆಚ್ಚು ಕಾರ್ಯಕರ್ತರ ಸದಸ್ಯತ್ವವನ್ನು ಹೊಂದಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪಂಡಿತ್ ಜವಾಹರಲಾಲ್ ನೆಹರುರವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾಗಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿ ಕಾಶ್ಮೀರದ ವಿ?ಯದ ಬಗ್ಗೆ ನೆಹರುರವರ ಅಭಿಪ್ರಾಯ ಭೇದ ಬಂದಾಗ ಮುಖರ್ಜಿಯವರು ಮಂತ್ರಿ ಮಂಡಲಕ್ಕೆ ರಾಜೀ ನಾಮೆ ನೀಡಿ, ೧೯೫೧ರಲ್ಲಿ ದೆಹಲಿಯಲ್ಲಿ ದೇಶ ಭಕ್ತರನ್ನು ಒಳಗೊಂಡ ಹೊಸ ರಾಜಕೀಯ ಪಕ್ಷ ಭಾರತೀಯ ಜನ ಸಂಘವನ್ನು ಪ್ರಾರಂಭಿಸಿದರು ಎಂದರು.

ಭಾರತೀಯ ಜನ ಸಂಘ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟು ಭದ್ರವಾದ ದೇಶವನ್ನು ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಯರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವ ಡಿಸಿಕೊಂಡು ದೇಶದ ಅಭಿವದ್ಧಿಯಲ್ಲಿ ಒಗ್ಗೂಡಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಲಕ್ಷಾಂತರ ಕಾರ್ಯಕರ್ತರ ಆಶಯವನ್ನು ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದೇ ಸಾಕ್ಷಿ ಈ ಪಕ್ಷದ ಕಾರ್ಯಕರ್ತ ಎಂದು ಹೇಳಿ ಕೊಳ್ಳಲು ಪ್ರತಿಯೊಬ್ಬರಿಗೂ ಹೆಮ್ಮೆ ಅನಿಸಬೇಕಿದೆ. ಪ್ರಾರಂಭದಲ್ಲಿ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಇದೀಗ ೪೦೦ರ ಗಡಿ ಮುಟ್ಟುವ ಗುರಿ ಹೊಂದಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ಶೆಟ್ಟಿ ಮಾತನಾಡಿ ಪಕ್ಷಕಿಂತ ದೇಶದ ಅಭಿವೃಧ್ದಿಯೇ ಮೊದಲ ಎಂಬ ಮೂಲ ಸಿದ್ದಾಂತಕ್ಕೆ ಕಾರ್ಯಕರ್ತರು ಬದ್ಧವಾಗಿ ಶ್ರಮಸುತ್ತಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಪಕ್ಷವನ್ನು ಕಟ್ಟಿದ ಹಿರಿಯ ನಾಯಕರನ್ನು ಸ್ಮರಿಸುತ್ತಾ ಪಕ್ಷವನ್ನು ಮತ್ತಷ್ಟು ಸಂಘಟಿಸೋಣ ಎಂದರು.

ದೇಶಪ್ರೇಮದ ಕಿಚ್ಚನ್ನು ಜನರಲ್ಲಿ ಮೂಡಿಸಲು ಸಲುವಾಗಿ ನಮ್ಮ ಹಿರಿಯರು ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ್ದು ಇದೀಗ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಈ ಮಟ್ಟಕ್ಕೆ ಬೆಳೆಯಲು ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದೆ ಎಂದು ಬಣ್ಣಿಸಿದರು.

ಬಿಜೆಪಿ ಚಿತ್ರದುರ್ಗ ಪ್ರಭಾರಿ ಸಿ.ಆರ್.ಪ್ರೇಮ್‌ಕುಮಾರ್ ಮಾತನಾಡಿ ಕೆಲವು ಪಕ್ಷಗಳಿಂದ ದೇಶ ಅಧೋಗತಿ ಗೆ ತಲುಪುವ ಸ್ಥಿತಿಯಲ್ಲಿದ್ದಾಗ ಶ್ಯಾಮ್ ಪ್ರಸಾದ್ ಮುಖರ್ಜಿ, ಆಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ, ಲಾಲಕೃಷ್ಣ ಅಡ್ವಾಣಿ ನಾಯಕರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕಾಲಕ್ರಮೇಣ ದೇಶವನ್ನು ಪ್ರಧಾನಿ ಮೋದಿ ಉತ್ತಮ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ರಾಜಪ್ಪ, ಎಸ್.ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಬಿಜೆಪಿ ಹಿರಿಯ ಮುಖಂಡರುಗಳಾದ ರಂಗನಾಥ್ ಕೋಟೆ, ಸಿ.ಎಚ್.ಲೋಕೇಶ್, ಚಂದ್ರಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತ್‌ಅನಿಲ್‌ಕುಮಾರ್, ಜಿಲ್ಲಾ ಪದಾಧಿಕಾರಿಗಳು, ನಗರ ಮಂಡಲ ಪಧಾಧಿಕಾರಿಗಳು, ಮಹಿಳಾ ಮೋರ್ಚಾ ಪಧಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಜವಾ ಬ್ದಾರಿಯ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Foundation Day Program of Bharatiya Janata Party

About Author

Leave a Reply

Your email address will not be published. Required fields are marked *

You may have missed