September 19, 2024

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ

0
ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸುದ್ದಿಗೋಷ್ಠಿ

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಕರ್ನಾಟಕದಲ್ಲಿ ಸರಿಸುಮಾರು ಶೇ೯೮ ರಷ್ಟು ಜನರಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ನೇರವಾಗಿ ಉಪಯೋಗವಾಗುತ್ತಿದ್ದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೨೨ ಸ್ಥಾನಗಳನ್ನು ಗೆಲ್ಲಲು ಯಾವುದೇ ಸಂಶಯ ಇಲ್ಲ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯೂ ಆಗಿರುವ ಮಂಜುನಾಥ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ನಂತರ ಚಿಕ್ಕಮಗಳೂರು ಕ್ಲಬ್ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿ ೧೦ ವ? ಆಡಳಿತ ನಡೆಸಿದ ಬಿಜೆಪಿಯವರು ತಾವು ಮಾಡಿದ ಅಭಿವೃದ್ಧಿ ಅಥವಾ ಯಾವುದೇ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿಲ್ಲ ಕೇವಲ ಭಾವನಾತ್ಮಕ ವಿಚಾರಗಳು ರಾಷ್ಟ್ರ ಪ್ರೇಮಿಗಳು, ರಾಷ್ಟ್ರ ವಿರೋಧಿಗಳೆಂಬ ಹೇಳಿಕೆ ನೀಡುತ್ತಾ ಜನರ ಧಿಕ್ಕು ತಪ್ಪಿಸಿ ಮತ ಯಾಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ಅಧಿಕಾರ ರೂಢ ಪಕ್ಷಕ್ಕಿರುವ? ಬಲ ಇರಬೇಕೆಂದು ಎಲ್ಲರೂ ಬಯಸುತ್ತಾರೆ ಆದರೆ ೪೦೦ ಸ್ಥಾನ ಗೆಲ್ಲಬೇಕು ರಾಜ್ಯದಲ್ಲಿ ೨೮ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಸರ್ವಾಧಿಕಾರಿ ಪ್ರಭುತ್ವ ಪುನರ್ ಸ್ಥಾಪನೆ ಮಾಡುವ ಉದ್ದೇಶವಾಗಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರಂತರವಾಗಿ ದುರ್ಬಲಗೊಳಿಸುತ್ತಿದ್ದಾರೆ ಕೆಲವರ ಮೂಲಕ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ಕೊಡಿಸಿ ಚರ್ಚೆ ಹುಟ್ಟು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಬಳಸಿಕೊಳ್ಳುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಈ ಚುನಾವಣೆಯಲ್ಲಿ ಅಂತ್ಯವಾಗುತ್ತದೆಯೋ ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವವನ್ನು ಉಳಿಸಿ ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುತ್ತಿದ್ದು ಬಿಜೆಪಿಯ ಸಾಧನೆ ಬಗ್ಗೆ ಜನರ ಮುಂದಿಡಿ ಎಂಬುದಾಗಿ ಒತ್ತಾಯಿಸುತ್ತಿದ್ದೇವೆ. ಹಿಂದು ಹಿಂದುತ್ವ, ಏಕ ಸಮಾನ ನಾಗರೀಕ ಸಂಹಿತೆ, ಏಕ ಚುನಾವಣೆ, ರಾಮ ಮಂದಿರದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಆದರೆ ನಾವು ಕೂಡ ಹಿಂದೂಗಳೇ ಬುದ್ದ-ಬಸವ, ಅಂಬೇಡ್ಕರ್, ಗಾಂಧಿ ಅವರು ಹೇಳಿದಂತೆ ಹಿಂದುಗಳೆಂದು ಪ್ರತಿಪಾದಿಸಿದರು.

ಕೇಂದ್ರದಲ್ಲಿ ೧೦ ವ?ದ ಬಿಜೆಪಿ ಆಡಳಿತದಲ್ಲಿ ೫೫ ಲಕ್ಷ ಕೋಟಿ ಇದ್ದ ಸಾಲ ಈಗ ೨೨೦೦ ಲಕ್ಷ ಕೋಟಿಗೆ ಏರಿದೆ ೫೪ ರೂ ಇದ್ದ ಡಾಲರ್ ಬೆಲೆ ೮೪ ರೂ ಡಾಲರ್‌ಗೆ ಹೆಚ್ಚಳವಾಗಿದೆ. ಕಾಂಗ್ರೆಸ್‌ನ ಆಡಳಿತದಲ್ಲಿ ರಾಷ್ಟ್ರೀಕರಣ ಮಾಡಿದ್ದ ಬ್ಯಾಂಕ್‌ಗಳನ್ನು ಮತ್ತೆ ಖಾಸಗೀಕರಣ ಗೊಳಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲಾಗಿದೆ ಇವೆಲ್ಲವನ್ನೂ ಮರೆಸಲು ರಾಮ ಮಂದಿರದ ವಿಚಾರವನ್ನು ಜನರ ಮುಂದೆ ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ರಾಮ ಮಂದಿರದ ಕಾಮಗಾರಿ ಪೂರ್ಣವಾಗಲು ಇನ್ನೂ ೩ ವ? ಬೇಕಾಗಬಹುದು. ಚುನಾವಣೆ ಕಾರಣಕ್ಕಾಗಿ ನರೇಂದ್ರ ಮೋದಿಯವರ ಮೂಲಕ ಪೂಜೆ ಮಾಡಿಸಿ ಉದ್ಘಾಟಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿ ಅವರನ್ನು ಆಹ್ವಾನಿಸದೆ ಕಡೆಗಣಿಸಿ ಅಪೂರ್ಣವಾಗಿರುವ ರಾಮ ಮಂದಿರ ಉದ್ಘಾಟಿಸಲಾಗಿದೆ ಎಂದರು.

ಈ ಎಲ್ಲಾ ವಿ?ಯಗಳನ್ನು ಕಾಂಗ್ರೆಸ್ ಪಕ್ಷ ಜನರಿಗೆ ಮನವರಿಕೆ ಮಾಡಿ ಮತ ಯಾಚಿಸುತ್ತಿದೆ. ನ್ಯಾಯ ಪತ್ರ ಪ್ರಣಾಳಿಕೆಯ ಮೂಲಕ ಈ ದೇಶದ ಎಲ್ಲಾ ಜನರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ತೃತೀಯ ಲಿಂಗಿಗಳು ಸೇರಿದಂತೆ ಸಮಗ್ರ ಅಭಿವೃದ್ಧಿ ಮತ್ತು ದೇಶದ ಭದ್ರತೆಗೆ ಯೋಜನೆಗಳನ್ನು ಅಳವಡಿಸಿಕೊಂಡು ಈ ಎಲ್ಲಾ ಗ್ಯಾರಂಟಿಗಳಿಗೆ ಜನ ವಿಶ್ವಾಸ ವ್ಯಕ್ತಪಡಿಸಿದ್ದು ಯಾರೂ ನಿರೀಕ್ಷಿಸದಂತ ಫಲಿತಾಂಶ ಬರುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ|| ಕೆ.ಪಿ ಅಂಶುಮತ್, ಬಿ.ಹೆಚ್ ಹರೀಶ್, ರೇಖಾಹುಲಿಯಪ್ಪಗೌಡ, ಹೆಚ್.ಪಿ ಮಂಜೇಗೌಡ, ಎಂ.ಸಿ ಶಿವಾನಂದಸ್ವಾಮಿ, ಡಾ|| ಡಿ.ಎಲ್ ವಿಜಯಕುಮಾರ್, ರವೀಶ್‌ಬಸಪ್ಪ, ಮಲ್ಲೇಶ್ ಮತ್ತಿತರದಿದ್ದರು.

After Prime Minister Narendra Modi came to power the democratic system is weak

About Author

Leave a Reply

Your email address will not be published. Required fields are marked *

You may have missed