September 19, 2024

ಕಾಂಗ್ರೆಸ್‌ಗೆ ಮತ ನೀಡಿ ರಾಷ್ಟ್ರದ ಭವಿಷ್ಯ ಕಾಪಾಡಲು ಜಯಪ್ರಕಾಶ್‌ಹೆಗ್ಡೆ ಕರೆ

0
ಮೂಗ್ತಿಹಳ್ಳಿ ಗ್ರಾಮದ ಶ್ರೀ ಶನೇಶ್ವರ ದೇವಾಲಯ ಸಮೀಪ ಲೋಕಸಭಾ ಚುನಾವಣಾ ಪ್ರಚಾರ

ಮೂಗ್ತಿಹಳ್ಳಿ ಗ್ರಾಮದ ಶ್ರೀ ಶನೇಶ್ವರ ದೇವಾಲಯ ಸಮೀಪ ಲೋಕಸಭಾ ಚುನಾವಣಾ ಪ್ರಚಾರ

ಚಿಕ್ಕಮಗಳೂರು:  ದೇಶದ ಆಸ್ತಿ ಸಂವಿಧಾನವನ್ನು ಬದಲಾಯಿಸಲು ಮುಂದಾಗಿರುವ ಕೇಂದ್ರದ ಜನವಿರೋಧಿ ಸರ್ಕಾರವನ್ನು ಮತದಾರರು ಸ್ವಪ್ರತಿಜ್ಞೆಯಿಂದ ಹಿಮ್ಮೆಟ್ಟಿಸಬೇಕು. ಕಾಂಗ್ರೆಸ್‌ಗೆ ಅಮೂಲ್ಯ ವಾದ ಮತ ನೀಡುವ ಮೂಲಕ ರಾಷ್ಟ್ರದ ಭವಿಷ್ಯವನ್ನು ಕಾಪಾಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್‌ಹೆಗ್ಡೆ ಹೇಳಿದರು.

ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮದ ಶ್ರೀ ಶನೇಶ್ವರ ದೇವಾಲಯ ಸಮೀಪ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ಬದಲಾವಣೆ ಮಾಡುವ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಜಾತ್ಯಾತೀತ ನಿಲುವು ಹೊಂದಿರುವ ಕಾಂಗ್ರೆಸ್‌ನ್ನು ಬೆಂಬಲಿಸಬೇಕು ಎಂದು ಮನವಿ ಮಾ ಡಿದರು.

ಹಿಂದಿನಿಂದಲೂ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಂವಿಧಾನದ ಆಶಯದೊಂದಿಗೆ ಅಧಿಕಾರ ಹಿಡಿದಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಾಗಿನಿಂದಲೂ ಒಂದಲ್ಲೊಂದು ರೀತಿಯಲ್ಲಿ ಬಡವರು, ಶೋಷಿತರ ಶ್ರೇಯೋಭಿವೃದ್ದಿಗೆ ರಚಿಸಿರುವ ಸಂವಿಧಾನಕ್ಕೂ ಕಂಟಕಪ್ರಾಯವಾಗಿ ಅಧಿಕಾರ ನಡೆಸುತ್ತಿರುವುದು ಶೋಚನೀಯ ಎಂದರು.

ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಬೆಲೆಏರಿಕೆಯಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿ ಸಹಾಯಹಸ್ತ ಕಲ್ಪಿಸಿರುವುದನ್ನು ಟೀಕಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜ್ಯಾದ್ಯಂತ ಮಹಿಳೆಯರು, ಯುವಕರು, ಕುಟುಂಬಸ್ಥರು ಗ್ಯಾರಂಟಿ ಸೌಲಭ್ಯವನ್ನು ಉಪಯೋಗಿಸಿ ಕೊಂಡು ಅನುಕೂಲವಾಗಿವೆ ಎನ್ನುತ್ತಿರುವುದು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಜೀವನಾಭಿವೃದ್ದಿಗೆ ಅತ್ಯಂತ ಹೆಚ್ಚು ಕಾರ್ಯನಿರ್ವಹಿಸಿರು ವುದು ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದುಳಿದ ಜನಾಂಗದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಮೀಸಲಿರಿಸಿರುವ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃಧ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.

ಬಿಜೆಪಿ ಕೆಲವು ಮುಖಂಡರುಗಳು ಲೋಕಸಭಾ ಚುನಾವಣಾ ಬಳಿಕ ಗ್ಯಾರಂಟಿಗಳು ಮುಂದುವರೆಯುವು ದಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಸತತವಾಗಿ ಐದು ವರ್ಷಗಳ ರಾಜ್ಯಸರ್ಕಾರ ನುಡಿದಂತೆ ಎಲ್ಲಾ ಗ್ಯಾರಂಟಿ ಯೋಜ ನೆಗಳನ್ನು ಜನತೆಗೆ ಕಲ್ಪಿಸಲಿದೆ. ಮತದಾರರು ಟೀಕಿಸುವ ಮಾತುಗಳನ್ನು ಹೆಚ್ಚು ಆಲಿಸದೇ ಜಿಲ್ಲೆ ಹಾಗೂ ದೇಶ ವನ್ನು ಬಲಪಡಿಸಲು ಕಾಂಗ್ರೆಸ್‌ಗೆ ಮತಯಾಚಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಗ್ರಾಮ ಇದ್ದರು.

Jayaprakash Hegde calls to vote for Congress and protect the future of the nation

About Author

Leave a Reply

Your email address will not be published. Required fields are marked *

You may have missed