September 19, 2024

ರಾಜ್ಯದಲ್ಲಿ ಭೀಮ್‌ ಕೋರೆಗಾವ್‌ ಸೇನೆ ಸ್ಥಾಪನೆಗೆ ನಿರ್ಧಾರ

0
ಭೀಮ್‌ ಕೋರೆಗಾವ್‌ ಸೇನೆ ಮುಖಂಡರ ಸುದ್ದಿಗೋಷ್ಠಿ

ಭೀಮ್‌ ಕೋರೆಗಾವ್‌ ಸೇನೆ ಮುಖಂಡರ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ದಲಿತರು, ಬಡವರು, ಶೋಷಿತರ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ, ಭೂ ವಿವಾದ ಮತ್ತು ಇತರ ಘಟನೆಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಭೀಮಾ ಕೋರೆಗಾವ್ ಸೇನೆ ಸ್ಥಾಪಿಸಲು ನಿರ್ಧರಿಸಿರುವುದಾಗಿ ಸೇನೆ ಮುಖಂಡ ತಿರುಮಲೆ ಶಿವಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಲೋಕಸಭಾ ಚುನಾವಣಾ ಬಳಿಕ ಭೀಮಾ ಕೋರೆಗಾವ್ ಸೇನೆಯನ್ನು ಅಸ್ತಿತ್ವಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸರ್ವ ಸದಸ್ಯರ ಹಾಗೂ ಎಲ್ಲರ ತೀರ್ಮಾನದಂತೆ ನಮ್ಮ ಸಂಘಕ್ಕೆ ಸರ್ವಾನು ಮತದಿಂದ ಭೀಮ ಕೋರೆಕಾವ್ ಸೇನೆ ಎಂದು ಹೆಸರಿಡಲು ತೀರ್ಮಾನ ಮಾಡಿಕೊಂಡು ಈ ಸಮಿತಿಯನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ಒಳಪಡದೆ ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡಂತೆ ಈ ಸಮಿತಿ ರಚನೆ ಮಾಡಲು ಬದ್ಧವಾಗಿದೆ ಎಂದರು.

ಕೇವಲ ಯಾವುದೊಂದು ಜಾತಿಗೆ, ಧರ್ಮಕ್ಕೆ ಮೀಸಲಾದುದ್ದಲ್ಲ. ಈ ಸಮಿತಿ ರಾ?, ರಾಜ್ಯ ಪ್ರೇಮ ಇಟ್ಟು ಜಾತಿ, ಧರ್ಮ, ಲಿಂಗ, ಅಸಮಾನತೆ ವಿರುದ್ಧದ ಸಮಿತಿಯಾಗಿದೆ. ಕನ್ನಡ ನೆಲ, ಜಲ, ನದಿ, ನಾಡು, ನುಡಿ ಬಗ್ಗೆ ಗೌರವ ಇಟ್ಟುಕೊಂಡು ಭಾರತದ ಸಂವಿಧಾನದಲ್ಲಿ ರಚನೆಗೊಂಡ ಕಾನೂನಿನ ಅಡಿಯಲ್ಲಿ ಶ್ರದ್ಧಾಪೂರ್ವಕವಾಗಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಗುರಿ ಉದ್ದೇಶಗಳನ್ನೊಳಗೊಂಡು ಬುದ್ಧ ಮಾರ್ಗದಲ್ಲಿ ನಾವೆಲ್ಲರೂ ಬಸವ ತತ್ವಗಳನ್ನು ಅಳವಡಿಸಿಕೊಂಡು ಸಂಘದ ನೀತಿ-ನಿಯಮಗಳಿಗೆ ತಲೆಬಾಗಿ ಗೌರವಪೂರ್ವಕವಾಗಿ ನಡೆದುಕೊಂಡು ಈ ಸಮಿತಿಯನ್ನು ಸ್ಥಾಪಿಸುತ್ತಿರುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರುಗಳಾದ ಕವಿಶ್, ವಸಂತ್‌ಕುಮಾರ್, ರವಿ, ಹರೀಶ್, ಪ್ರೇಮ್‌ಕುಮಾರ್ ರಾಮನಹಳ್ಳಿ ಉಪಸ್ಥಿತರಿದ್ದರು.

Decision to establish Bhim Koregaon Army in the state

About Author

Leave a Reply

Your email address will not be published. Required fields are marked *

You may have missed